ಅವ್ವ
ಅವ್ವ
ಈ ಜನನ ನಿನ್ನಿಂದ
ಉಸಿರಾಟ ನಿನ್ನಿಂದ
ನೀನಿಲ್ಲದೆ ನಾನಿಲ್ಲ ಅವ್ವ
ನಾ ನಡೆಯಲು ಹೆಜ್ಜೆ ನೀನಾದೆ
ನಾ ಅತ್ತು ಬಿಡಲು ನೀ ಬೆದರಿ ಹೋದೆ
ಎಲ್ಲಿದ್ದರೂ ಬಂದು ಎತ್ತಿ ಮುದ್ದಾಡುವೆ
ನಿನಗಾಗಿ ಏನನ್ನು ಬೇಡದೆ
ನನಗಾಗಿ ಎಲ್ಲವ ನೀಡಿದೆ
ನಾ ಬಂದ ಮೇಲೆ ನಿನ್ನ ಮುಖದಲ್ಲಿ ಮಂದಹಾಸ
ನನ್ನ ಭಾರದ ಮೇಲೆ ಹೇಗೆ ನಿಲ್ಲುವೆಯೋ ನೀ ನವಮಾಸ
ಕಣ್ಣು ತೆರೆದು ನೋಡಿದ ಮೊದಲ ರೂಪವೇ ನೀ ಅವ್ವ
ಮೊದಲು ಬಾಯಿ ತೆರೆದು
ಕೂಗಿದ ಪದವೇ ನೀ ಅವ್ವ
ನಿನ್ನ ಕಂಡೊಡನೆ ಮನಸು ಮಗುವಾಗುವುದು ಅವ್ವ
ನೀ ಅಪ್ಪಿ ಕೊಂಡೊಡನೆ ಅಳುವು ಮರೆಯಾಗುವುದು ಅವ್ವ...
ಮನಸಾರೆ ಹೇಳ್ತಿರುವೆ...
ನೀನಿಲ್ಲದೆ ನಾನಿಲ್ಲ ಅವ್ವ...
ನೀನಿಲ್ಲದೆ ನಾನಿಲ್ಲ ಅವ್ವ...
ಡಾ. ಸಂಜೀವ ಕುಮಾರ
ಅರ್ಥಶಾಸ್ತ್ರ ಉಪನ್ಯಾಸಕರು
ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ,
ಹಾವೇರಿ.ಮೋ.ನಂ: 9449506959