ಒಳ್ಳೆಯ ಕ್ರೀಡಾ ಪಟುಗಳಾಗಲು ಕ್ರೀಡೆ ಶಿಕ್ಷಣ ಅವಶ್ಯಕ: ನಿವರಗಿ
ಜಮಖಂಡಿ 10: ಒಳ್ಳೆಯ ಕ್ರೀಡಾ ಪಟುಗಳಾಗಲು ಕ್ರೀಡೆ ಮತ್ತು ಶಿಕ್ಷಣ ಅವಶ್ಯಕವಾಗಿದೆ.ವಿದ್ಯಾರ್ಥಿ ಜೀವನ ಸಾಕಾರಗೊಳಿಸಲು ಶಿಕ್ಷಣದ ಜೊತೆಗೆ ಕ್ರೀಡೆ ಅವಶ್ಯಕವಾಗಿವೆ. ಸದೃಡ ದೇಹ, ದೃಡ ಮನಸ್ಸು ಹೊಂದುವ ಮೂಲಕ ಕ್ರೀಡಾ ಪಟುಗಳು ಸೋಲು-ಗೆಲುವು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ರಾಷ್ಟ್ರೀಯ ಕ್ರಿಕೆಟ ಕ್ರಿಡಾಪಟು,ದೈಹಿಕ ಶಿಕ್ಷಕಿ ಡಾ.ವಿಭಾರಾಣಿ ನಿವರಗಿ ಹೇಳಿದರು.
ತಾಲೂಕಿನ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇಜರ ದ್ಯಾನಚಂದ ಹುಟ್ಟುಹಬ್ಬದ ನಿಮಿತ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ. ಜರ್ಮನ ದೇಶದವರು ಕ್ರೀಡಾಪಟು ದ್ಯಾನಚಂದ ನಮ್ಮ ದೇಶಕ್ಕೆ ಬಂದರೆ ನಿನಗೆ ಉನ್ನತ ಪದವಿಯೊಂದಿಗೆ ಗೌರವಿಸಲಾಗುವುದೆಂದು ಹೇಳಿದಾಗ ಅವರು ಅದನ್ನು ನಯವಾಗಿ ತಿರಸ್ಕರಿಸುವ ಮೂಲಕ ಓಲಂಪಿಕ್ಸ್ ಕ್ರೀಡೆಯಲ್ಲಿ ಮೂರು ಬಂಗಾರದ ಪದಕ ತರುವಲ್ಲಿ ಪ್ರಮುಖರಾದರು.
ಅಂತರರಾಷ್ಟ್ರೀಯ ಈಜು ಕ್ರೀಡಾಪಟು ಬಸಪ್ಪ ಯಾದವಾಡ ಮಾತನಾಡಿದರು.ಪ್ರಾಚಾರ್ಯ ಡಾ.ಕಾಳಿಂಗ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಲ್.ಎಸ್.ಕೋರೆ, ಪ್ರವೀಣ ಬಾಗಲಕೋಟ, ಭಾರತಿ ಜಮಖಂಡಿ, ಡಾ.ವೀಣಾ ಮರಕಟ್ಟಿ, ಡಾ.ಸುರ್ವಣಖಂಡಿ, ಪೊ.್ರ.ಸಂತೋಷ ಇಟ್ಟಿ, ಪ್ರೊ.ಎ.ಎಸ್.ಹಿಪ್ಪರಗಿ. ಪ್ರೊ.ಪಾಟೀಲ, ಪ್ರೊ.ಕೋಡಿ, ಪ್ರೊ.ಗುರವ್ವ. ಅನೇಕರಿದ್ದರು. ಸವಿತಾ ಯಲಶೆಟ್ಟಿ ಸ್ವಾಗತಿಸಿದರು. ಡಾ.ಎಂ.ಬನಶಂಕರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಡಾ.ಮುಸ್ತಪಾ ಮುಂಡರಗಿ ಕ್ರೀಡಾ ಪ್ರತಿಜ್ಞಾವಿದಿ ಭೋಧಿಸಿದರು. ಸ್ವಾತಿ ತಂಬಾಕು ನಿರೂಪಿಸಿದರು. ಡಾ.ಕಲಾವತಿ ಪೋತಿ ವಂದಿಸಿದರು.
ಪೋಟೋ : ಜಮಖಂಡಿ ತಾಲೂಕಿನ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರಿಕೆಟ್ ಪಟು ಡಾ. ವಿಬಾರಾಣಿ ನೀವರಗಿ ಮಾತನಾಡಿದರು.