ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆ
ಜಮಖಂಡಿ 07: ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಗರದ ತುಂಗಳ ಕನ್ನಡ-ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ 1 ರಿಂದ 4 ನೇ ತರಗತಿ ವಿಭಾಗದಿಂದ 7, ಹಾಗೂ 5 ರಿಂದ 7 ನೇ ತರಗತಿ ವಿಭಾಗದಿಂದ 6 ಜನ ಮಕ್ಕಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಮುಖ್ಯಗುರು ಡಿ.ಜಿ.ವಾಲಿ ತಿಳಿಸಿದರು.
ಪ್ರಾಥಮಿಕ ಶಾಲೆಯ 1 ರಿಂದ 4ನೇ ತರಗತಿ ವಿಭಾಗದಲ್ಲಿ ಮಕ್ಕಳ ಧಾರ್ಮಿಕ ಪಠಣ (ಸಂಸ್ಕೃತ),ಸದೃತ್ ಭಟ್ (ಪ್ರಥಮ),ಲಘು ಸಂಗೀತ ಸಾನ್ವಿ ದೇವರವರ (ಪ್ರಥಮ), ಚಿತ್ರಕಲೆ ಶ್ರದ್ಧಾ ಹುಲಕುಂದ (ಪ್ರಥಮ),ಆಶುಭಾಷಣ-ಸುಶಾಂತ್ ಮಧುರಖಂಡಿ (ಪ್ರಥಮ), ಕಂಠಪಾಠ (ಕನ್ನಡ) ನಿಸರ್ಗಾ ಕಲ್ಯಾಣಶೆಟ್ಟಿ (ಪ್ರಥಮ), ಅಭಿನಯ ಗೀತೆ ಶ್ರೇಯಾ ಸಂಗಾಪುರ (ಪ್ರಥಮ), ಕ್ಲೇಮಾಡಿಲಿಂಗ್-ಫೈಜಾನ್ ಮಿಕಾಂದಾರ(ಪ್ರಥಮ) ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಶಾಲೆಯ 5 ರಿಂದ 7 ನೇ ತರಗತಿ ಮಕ್ಕಳ ಕವನ ವಾಚನದಲ್ಲಿ ಅನನ್ಯ ಬಿರಾದಾರ (ಪ್ರಥಮ),ಚಿತ್ರಕಲೆ-ಕಾವ್ಯಾ ಬಾಕಸ್ಕಡೆ (ಪ್ರಥಮ),ಕಂಠಪಾಠ (ಕನ್ನಡ) ಸಮೃದ್ಧಿ ತೆಗ್ಗಿ (ಪ್ರಥಮ),ಭಕ್ತಿಗೀತೆ-ಪ್ರತಿಭಾ (ಪ್ರಥಮ),ಲಘು ಸಂಗೀತ ಸಂಜೀವಿನಿ ಪಾಟೀಲ(ಪ್ರಥಮ),ಕಂಠಪಾಠ (ಸಂಸ್ಕೃತ) ಶ್ರೇಯಾ ಭೈರವಾಡಗಿ (ಪ್ರಥಮ) ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಭಕ್ತಿಗೀತೆ ಶ್ರಾವಣಿ ಇಟ್ಟಿ (ದ್ವಿತೀಯ),ಕಥೆ ಹೇಳುವುದು ವಿನಯ ಕುಂಬಾರ (ದ್ವಿತೀಯ),ಕಂಠಪಾಠ (ಇಂಗ್ಲಿಷ್),ಪೃತ್ವಿಕ್ ಕಲ್ಲೊಳ್ಳಿ (ದ್ವಿತೀಯ),ಕಂಠಪಾಠ (ಇಂಗ್ಲಿಷ್) ರೀದಾ ಶಾಬಾದಿ(ದ್ವಿತೀಯ),ಕಂಠಪಾಠ (ಸಂಸ್ಕೃತ) ಪ್ರಜ್ಞಾ ಪಾಟೀಲ(ದ್ವಿತೀಯ), ಆಶುಭಾಷಣ ಹರಿದ್ರತಾ ತಟಗಾರ (ದ್ವಿತೀಯ),ಅಭಿನಯ ಗೀತೆ-ಗಗನಶ್ರೀ ತೇಲಿ(ದ್ವಿತೀಯ),ಧಾರ್ಮಿಕ ಪಠಣ(ಸಂಸ್ಕೃತ)ಸಾನ್ವಿ ತುಂಗಳ (ತೃತೀಯ) ಛದ್ಮವೇಶ-ಅನನ್ಯ ಮಠಪತಿ(ತೃತೀಯ),ಮಿಮಿಕ್ರಿ ಸಾನ್ವಿ ಗಾವಡೆ(ತೃತೀಯ),ಕಂಠಪಾಠ ( ಹಿಂದಿ) ಅನುಪ್ರಿಯಾ ಹೊಸೂರ (ತೃತೀಯ),ಅಭಿನಯ ಗೀತೆ ವೈಷ್ಣವಿ ಶೆಟ್ಟಿ (ತೃತೀಯ) ಲಘು ಸಂಗೀತ ನವ್ಯಾ ಬಡಿಗೇರ (ತೃತೀಯ) ಸ್ಥಾನ ಪಡೆದಿದ್ದಾರೆ.