ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ
ಜಮಖಂಡಿ 19: ತಾಲೂಕಿನ ಹುನ್ನೂರ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹಯೋಗದಲ್ಲಿ ಉಪಸಂಚಲನದ ಪಥ ಸಂಚಲನ ಜರುಗಿತು.
ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಧ್ವಜಾಸಂದೇಶವನ್ನು ಹೇಳುವ ಮೂಲಕ ಪಥ ಸಂಚಲನಕ್ಕೆ ಚಾಲನೆಯನ್ನು ನೀಡಲಾಯಿತು. ಗ್ರಾಮದ ಪ್ರಮುಖ ರಸ್ತೆಯ ಮೂಲಕ ಆರ್,ಎಸ್,ಎಸ್, ಪಥ ಸಂಚಲನ ಸಂಚರಿಸುತ್ತಿದ್ದಂತೆ ಮಹಿಳೆಯರು, ಯುವಕರು ತಮ್ಮ ಮನೆಯ ಅಂಗಳದಲ್ಲಿ ಹಾಗೂ ಅಂಗಡಿ,ಮುಂಗಟುಗಳ ಮುಂದೆ ನಿಂತು ಹೂವಿನ ಸುರಿಮಳೆಗೈದರು. ಪಥ ಸಂಚಲನ ಹಾದಿಗೆ ವಿವಿಧ ಬಗ್ಗೆಯಿಂದ ರಂಗೋಲಿಯ ಚಿತ್ತಾರವನ್ನು ಬಿಡಿಸಿದರು.
ನಂತರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಆವರಣವನ್ನು ತಲುಪಿತು.ಆರ್, ಎಸ್,ಎಸ್, ಪಥ ಸಂಚಲನಕ್ಕೆ ಪೋಲಿಸ್ ಬಂದುಬಸ್ತ್ ಏರಿ್ಡಸಲಾಗಿತ್ತು. ಸಿಪಿಐ ಮಲ್ಲಪ್ಪ ಮಡ್ಡಿ, ಶಹರ ಪೋಲಿಸ್ ಠಾಣೆಯ ಪಿಎಸ್ಐ ಅನೀಲ ಕುಂಬಾರ, ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಗಂಗಾಧರ ಪೂಜಾರಿ ಸೇರಿದಂತೆ ಸಾವಳಗಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಇದ್ದರು.