ಎನ್ಓಸಿ ಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಜಮಖಂಡಿ 30: ತಾಲೂಕಿನ ಕೊಣ್ಣೂರ ಗ್ರಾಮದ ಮಡ್ಡಿ ಪ್ಲಾಟಿನಲ್ಲಿನ ನಿವಾಸಿಗಳ ಮನೆಗಳಿಗೆ ವಿದ್ಯುತ್ ಮೀಟರ್ ಪಡೆಯಲು ಗ್ರಾಪಂನಿಂದ ಎನ್ಓಸಿ ಪತ್ರ ನೀಡಬೇಕೆಂದು ಒತ್ತಾಯಿಸಿ ಗ್ರಾಪಂ ಸದಸ್ಯ ಗದಿಗೆಪ್ಪ ಧಾರವಾಡ ನಗರದ ತಾಪಂ ಕಚೇರಿಯ ಆವರಣದ ಎದುರು ಗಡೆ ಅನರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಕೊಣ್ಣೂರ ಗ್ರಾಮದ ಮಡ್ಡಿ ಪ್ಲಾಟಿನಲ್ಲಿ ಒಟ್ಟು 108 ಕುಟುಂಬದವರಿಗೆ ಹಲವಾರು ವರ್ಷಗಳ ಹಿಂದೆ ಹಕ್ಕು ಪತ್ರಗಳನ್ನು ನೀಡಿದ್ದಾರೆ, ಅಂದಿನಿಂದ ಇಲ್ಲಿಯವರೆಗೆ ಗ್ರಾಪಂಗೆ ಟ್ಯಾಕ್ಸ್ ತುಂಬಿಸಿಕೊಳ್ಳುತ್ತಾ ಬಂದಿದ್ದಾರೆ, ಆಶ್ರಯಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಆದರೆ ಈಗ ಗ್ರಾಪಂನ ಪಿಡಿಓ ಇಲ್ಲಸಲ್ಲದ ಕುಂಟು ನೆಪಹಾಕುವ ಮೂಲಕ ನಿವಾಸಿಗಳಿಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲಿನ ನಿವಾಸಿಗಳ ಮನೆಗಳಿಗೆ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳಲು ಹೆಸ್ಕಾಂನವರು ಗ್ರಾಪಂನಿಂದ ಎನ್ಓಸಿ ಪತ್ರ ತೆಗೆದುಕೊಂಡು ಬರುವಂತೆ ಹೇಳುತಿದ್ದಾರೆ ಆದರೆ ಇವರು ನೀಡದೆ ಸತಾಯಿಸುತ್ತಿದ್ದಾರೆ ಎಂದು ಅಸಾಹಯಕತೆ ತೊಡಿಕೊಂಡರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ದೀಪ ಹಚ್ಚಬೇಕು ಎಂದರೆ ಇಲ್ಲಿನ ಪಿಡಿಓನ ವರ್ತನೆಯಿಂದ ಕತ್ತಲಿನಲ್ಲಿಯೇ ದೀಪವಾಳಿ ಆಚರಿಸುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇಲ್ಲಿ ಎಲ್ಲರು ಕೂಲಿ ಕಾರ್ಮಿಕರು ಅಂದು ದುಡಿದು ಅಂದೆ ತಿನ್ನುವಂತ ಬಡ ಜನರು ವಾಸಿಸುತಿದ್ದಾರೆ, ಅವರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ನೀಡದೆಯೂ ಅಲ್ಲಿನ ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ನಾನು ಗ್ರಾಪಂ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ ಆದರೆ ಅಧಿಕಾರಿಗಳು ಎಲ್ಲವನ್ನು ಸರಿ ಪಡಿಸುವದಾಗಿ ಹೇಳಿ ರಾಜಿನಾಮೆ ತಿರಸ್ಕರಿಸುವ ಕಾರ್ಯ ಮಾಡಿದರು ಆದರೂ ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ತಾಪಂ ಇಒ ಇವರು ಯಾರು ನಮ್ಮ ಸಮಸ್ಯಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಹಿಂದೆ ಕೂಡಾ ನಮ್ಮ ಮಡ್ಡಿಪ್ಲಾಟಿನ ಜನತೆ ಸೇರಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ. ಮನವಿ ಸಲಿಸಿದರು ಕೂಡಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಸಿಇಒ ಅವರು ಬಡವರ ಬಗ್ಗೆ ಕಾಳಜಿ ತೊರದೆ ಇರುತ್ತಾರೆ. ದೀಪಾವಳಿ ಹಬ್ಬದ ದಿನದಂದು ಎಲ್ಲರೂ ಮನೆಗಳಲ್ಲಿ ದೀಪದಿಂದ ಹಬ್ಬವನ್ನು ಆಚರಿಸಿದರೆ ನಾವುಗಳು ಕತ್ತಲಿನಲ್ಲಿ ಹಬ್ಬವನ್ನು ಆಚರಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಇನ್ನು ಗ್ರಾಮ ಪಂಚಾಯತಯಲ್ಲಿ ನೂರು ಕೋಟಿ ಅಧಿಕ ಹಣ ಅವ್ಯವಹಾರವಾಗಿದೆ. ಕೆರೆ ಅಭಿವೃದ್ದಿ ಹೆಸರಲ್ಲಿ ಹಾಗೂ ಹಳ್ಳ ಮತ್ತು ಕೆರೆ ಹುಳುಏತ್ತುವಲ್ಲಿ ಸಾಕಷ್ಟು ಅವ್ಯವಹಾರ ಅಲ್ಲಿನ ಪಿಡಿಒ ಮಾಡಿದ್ದಾರೆ. ನನ್ನ ಬಳಿ ಎಲ್ಲ ದಾಖಲಾತಿಗಳು ಇವೆ ಎಂದರು. ಇದೆ ಸಂದರ್ಭದಲ್ಲಿ ಮಹೇಶ ಕನ್ನಗಾರ ಇದ್ದರು.
ಜಮಖಂಡಿ ತಾ,ಪಂ,ಇಒ ಸಂಜು ಜುನ್ನೂರ,
20 ರಿಂದ 30 ವರ್ಷಗಳ ಹಿಂದಿನ ಸಮಸ್ಯೆಯಾಗಿದೆ. ಕೆಲವಂದಿಷ್ಟು ಅಲ್ಲಿನ ನಿವಾಸಿಗಳಿಗೆ ದಾಖಲಾತಿ ಪ್ರಕಾರ ಎನ್ಒಸಿ ಪತ್ರವನ್ನು ಸಹ ನೀಡಲಾಗಿದೆ. ಆದರೆ ಇನ್ನೂ ಸುಮಾರು ನಿವಾಸಿಗಳಿಗೆ ಸರಿಯಾದ ದಾಖಲಾತಿಗಳು ಇಲ್ಲ. ಆದರಿಂದ ಎನ್ಒಸಿ ನೀಡಲು ಬರುವುದಿಲ್ಲ. ತಾತ್ಕಾಲಿಕವಾಗಿ ಅಲ್ಲಿನ ನಿವಾಸಿಗಳ ಕುಟುಂಬಕ್ಕೆ ವಿದ್ಯುತ್ ಅಳವಡಿಸಲು ಹೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಇನ್ನು ಗ್ರಾಮ ಪಂಚಾಯತಯಲ್ಲಿ ನೂರು ಕೋಟಿ ಅಧಿಕ ಹಣದಲ್ಲಿ ಅವ್ಯವಹಾರ ನಡೆದಿದೆಂದು ಆರೋಪಿಸಿದಕ್ಕೆ. ಒಂದು ತಂಡವನ್ನು ರಚಿಸಿ. ಸಮಗ್ರವಾದ ತನಿಖೆಯನ್ನು ಮಾಡಲಾಗುತ್ತದೆ. ಅದರಲ್ಲಿ ಯಾರು ತಪ್ಪಿಸ್ಥರು ಇರುತ್ತಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.