ತಾಳಿಕೋಟಿ

ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ

ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ


          ತಾಳಿಕೋಟಿ 17 : 2026- 27ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ ಮುದ್ದೇಬಿಹಾಳ, ತಾಳಿಕೋಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಬಾಲಭಾರತಿ ವಿದ್ಯಾಮಂದಿರ (ರಿ) ತಾಳಿಕೋಟಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಬಾಲಭಾರತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ ತಾಳಿಕೋಟಿ ಇವರ ಸಹಯೋಗದಲ್ಲಿ ಶನಿವಾರ ವಿಜ್ರಂಭಣೆಯಿಂದ ಜರುಗಿತು.

               ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ ಎಸ್ ಬಡದಾನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುದ್ದೇಬಿಹಾಳ ,ಮುಖ್ಯ ಅತಿಥಿಗಳಾಗಿ ಆರ್ ಬಿ ದಮ್ಮೂರಮಠ ಕ್ಷೇತ್ರ ಸಮನ್ವಯ ಅಧಿಕಾರಿಗಳು ಮುದ್ದೇಬಿಹಾಳ, ಹಾಗೂ ಡಾ. ಎಂ ಎಂ ಬೆಳಗಲ್ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ತಾಲೂಕ ಪಂಚಾಯತ್ ಮುದ್ದೇಬಿಹಾಳ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಭಾರತಿ ವಿದ್ಯಾಮಂದಿರ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಅಮರ್ ಸಿಂಗ್ ಹಜೇರಿ ದಾದಾ ಅವರು ವಹಿಸಿಕೊಂಡಿದ್ದರು,

                 ವೇದಿಕೆಯ ಕಾರ್ಯಕ್ರಮದಲ್ಲಿ ಬಾಲಭಾರತಿ ವಿದ್ಯಾಮಂದಿರ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಭೂಮಿಕಾ ಮಿರಜಕರ ಅವರ ಭರತನಾಟ್ಯ ವೇದಿಕೆಯ ಮೇಲಿರುವ ಅತಿಥಿ ಮಹೋದಯರ ಮೆಚ್ಚುಗೆಗೆ ಪಾತ್ರವಾಯಿತು. ಈ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ಯಾಮ ಹಂಚಾಟೆ, ಹನುಮಂತರಾವ್ ದೇಶಪಾಂಡೆ, ಕಾಶಿನಾಥ್ ಸಜ್ಜನ್ ಬಿ ಆರ್ ಪಿ, ರಾಜಾಸಿಂಗ್ ವಿಜಾಪುರ ಸಿಆರ್‌ಪಿ ತಾಳಿಕೋಟಿ, ಬಿ. ಎ ಬಿಜಾಪುರ್ ಸಿ ಆರ್ ಪಿ ಮಿಣಜಗಿ, ಬೋರಾಮನಿ ಸಿಆರ್‌ಪಿ ತುಂಬಗಿ,

              ಶ್ರೀಶೈಲ್ ಬಿಂಜಲ್ಬಾವಿ ಸಿಆರ್‌ಪಿ ಬಿ.ಸಾಲವಾಡಗಿ, ಎಂ. ಎ ಯಕಿನ್ ಸಿಆರ್‌ಪಿ ಉರ್ದು ತಾಳಿಕೋಟಿ, ಎಮ್‌. ಕೆ ಭಾಗವಾನ ಶಿಕ್ಷಣ ಸಂಯೋಜಕರು,ಸಿ ಆರ್ ಪಿ ಉರ್ದು ತಾಳಿಕೋಟಿ, ವೆಂಕೋಬ ನಾಯ್ಕೋಡಿ ಅಧ್ಯಕ್ಷರು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಳಿಕೋಟಿ, ಮಹೇಶ್ ಓದಿ ಮುಖ್ಯ ಗುರುಗಳು ಬಾಲಭಾರತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ, ತಾಳಿಕೋಟಿ, ಪ್ರದೀಪ್ ಗೊಂಡ ಮುಖ್ಯಗುರುಗಳು ಎಲ್ ಎ ಎಚ್ ವಿದ್ಯಾಭಾರತಿ ಪ್ರೌಢಶಾಲೆ ತಾಳಿಕೋಟಿ,

             ಸಮೃದ್ಧಿ ಸುರಪುರ್ ಮುಖ್ಯಗುರುಮಾತೆ ವಿವೇಕಾನಂದ್ ಆಂಗ್ಲ ಮಾಧ್ಯಮ ಶಾಲೆ ತಾಳಿಕೋಟಿ, ರಾಘವೇಂದ್ರ ಕುಲಕರ್ಣಿ, ಧರ್ಮಣ್ಣ ಕಟ್ಟಿಮನಿ, ರಮೇಶ್ ಕುಲಕರ್ಣಿ, ಎ ಡಿ ಗೋನಾಳ ಮುಖ್ಯಗುರುಗಳು, ರೂಪಾ ನಾಗಾವಿ,ಸಹನಾ ವಾಲಿ, ಸವಿತಾ ಒನಕಿಹಾಳ, ವಾಸಂತಿ ಆದ್ವಾನಿ ,ಗಿರಿಜಾ ಮೋಹಿತೆ , ವೀಣಾ ಮಂಕಣಿ, ಸ್ವಾತಿ, ಸುಜಾತ ಯಾದಗಿರಿ, ಸಾವಿತ್ರಿ ಮಧರಿ, ಸವಿತಾ ಪಾಟೀಲ, ಶ್ರೀದೇವಿ ಬಿರಾದಾರ,

                ಸೈಜಾದ್ ಬೇಗಂ, ರೇಣುಕಾ ಸಜ್ಜನ , ವಿಜಯಲಕ್ಷ್ಮಿ ಕವಿತಾಳ, ನಾಗಮ್ಮ ನಾವಿ, ಅಶ್ವಿನಿ ಸಜ್ಜನ್, ರಾಜಶ್ರೀ ಸುರಪುರ, ಮುಂತಾದ ಶಿಕ್ಷಕರು ಹಾಗೂ ಬೇರೆ ಬೇರೆ ಶಾಲೆಯ ನಿರ್ಣಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸುಮಂಗಲ ಯಾಳವಾರ, ಸ್ವಾಗತ ಪರಿಚಯವನ್ನು ಮುಖ್ಯ ಗುರುಗಳಾದ ಮಹೇಶ್ ಓದಿ ನೆರವೇರಿಸಿದರು, ವಂದನಾರೆ​‍್ಣಯನ್ನು ಶಶಿಕಲಾ ಕುಂಟೋಜಿ ನೆರವೇರಿಸಿದರು. 


ಸುದ್ದಿ ಓದಿ