ತಾಳಿಕೋಟಿ

ಎಸ್‌.ಎಸ್‌.ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನ ಆಚರಣೆ

ಎಸ್‌.ಎಸ್‌.ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನ ಆಚರಣೆ


ತಾಳಿಕೋಟಿ 16 : ಪಟ್ಟಣದ ಶ್ರೀ ಎಸ್‌. ಎಸ್‌. ವಿದ್ಯಾಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಬ್ರಹ್ಮಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಕಿರಣ ಎಚ್‌.ಪಾಟೀಲರು ಚಾಚಾ ನೆಹರುರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಇಂದಿನ ವಿದ್ಯಾರ್ಥಿಗಳು ನಾಳಿನ ಪ್ರಜೆಗಳು ವಿದ್ಯಾರ್ಥಿಗಳು ತಂದೆ- ತಾಯಿ ಮತ್ತು ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕ ಜೆ.ಎಮ್‌.ಕೊಣ್ಣೂರ, ಹಿರಿಯ ಶಿಕ್ಷಕರುಗಳಾದ ವಿ.ಎ.ವಿಜಾಪುರ,ಸಿ.ಎಮ್‌.ಹಳ್ಳೂರ ಹಾಗೂ ಪ್ರಾಥಮಿಕ ಶಾಲೆಯ ಸಮಸ್ತ ಸಿಬ್ಬಂದಿಯವರು ವೇದಿಕೆಯಲ್ಲಿದ್ದರು.ವಿದ್ಯಾರ್ಥಿಗಳಿಗೆ ಅನೇಕ ಕ್ರೀಡೆಗಳನ್ನು ಆಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಎಮ್‌.ಎಸ್‌.ಬಿರಾದಾರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ