ಬಾವೂರ ಹೆಚ್.ಪಿ.ಎಸ್ ಶಾಲೆಗೆ ಶಾಸಕ ನಾಡಗೌಡ ಭೇಟಿ
ತಾಳಿಕೋಟಿ 16 : ತಾಲೂಕಿನ ಬಾವೂರ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಕೆಎಸ್ಡಿಎಲ್ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಶಾಸಕರಾದ ಅಪ್ಪಾಜಿ ನಾಡಗೌಡರು ಶನಿವಾರ ಭೇಟಿ ನೀಡಿದರು. ಗ್ರಾಮದಲ್ಲಿ ಪ್ರಜಾಸೇವಾ ಆಂದೋಲನದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರು ಈ ಶಾಲೆಗೆ ಭೇಟಿ ನೀಡಿದ ರು. ಈ ಸಂದರ್ಭದಲ್ಲಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಡಾ.ಎಂ.ಎಂ. ಬೆಳಗಲ್ ಅವರಿಂದ ಶಾಲೆಯ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ಅವರು ಮಾತನಾಡಿ ಶಾಲೆಯ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಹೋಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಲ್ಲಿ ಅಗತ್ಯವಾಗಿ ಬೇಕಾಗಿರುವ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಆರ್ ಓ ಪ್ಲಾಂಟ್ ಹಾಗೂ ಗಣಕ ಯಂತ್ರ (ಕಂಪ್ಯೂಟರ್)ಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದರು. ಈ ಸಮಯದಲ್ಲಿ ಸಿಆರ್ಿ ಬಿಎಸ್ ಬಸರಕೋಡ, ಮುಖ್ಯ ಗುರುಗಳಾದ ವಿಶ್ವನಾಥ್ ಪತ್ತಾರ, ಬಿ ಆರ್ ಪಿ, ಎಸ್. ಎಸ್ ಬಾಬಣ್ಣವರ, ಗುರಿಕಾರ ಮೇಡಮ್, ಶಿಕ್ಷಕರಾದ ಶಿವಕುಮಾರ ಹಡಪದ, ಅಶೋಕ ಹೂಗಾರ, ಗುರುಮಾತೆಯರಾದ ವಿಜಯಲಕ್ಷ್ಮಿ ಒಣರೊಟ್ಟಿ, ಮಂಜುಳ ಕೆ, ಅಟೆಂಡರ್ ಮಾಲಾಶ್ರೀ ಮತ್ತಿತರರು ಇದ್ದರು.