ಕನಕಾಲ್ಗೆ ರಾಜ್ಯಮಟ್ಟದ ಸಿರಿಗನ್ನಡ ಸಾಧಕ ಪ್ರಶಸ್ತಿ
ದೇವರಹಿಪ್ಪರಗಿ 16 : ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕ ಅಧ್ಯಕ್ಷರಾದ ರಹಿಮಾನಸಾಬ್ ಕನಕಾಲ್ ಇವರಿಗೆ ಅಮ್ಮ ಫೌಂಡೇಶನ್ ವತಿಯಿಂದ ಕೊಡುವ "ರಾಜ್ಯಮಟ್ಟದ ಸಿರಿಗನ್ನಡ ಸಾಧಕ" ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನವೆಂಬರ್ 22ರಂದು ನಡೆಯುವ "ರಾಜ್ಯಮಟ್ಟದ ಸಿರಿಗನ್ನಡ ಸಂಭ್ರಮ 2026" ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಮ್ಮ ಫೌಂಡೇಶನ್ ಗೌರವಾಧ್ಯಕ್ಷ ಯು.ಐ.ಶೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ನಾಡು-ನುಡಿ, ನೆಲ ಜಲ ಭಾಷೆಗಾಗಿ ಹಲವಾರು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಾ ಸಮಾಜಮುಖಿ ಕಾರ್ಯನಿರ್ವಹಿಸುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.