ಸ್ವಾವಲಂಭಿ ಜೀವನಕ್ಕೆ ಮಾದರಿ
ತಾಳಿಕೋಟೆ 17: ಪಟ್ಟಣಕ್ಕೆ ಅವಶ್ಯಕವಾಗಿದ್ದ ರೆಡಿಮೇಡ್ ಗಾರ್ಮೆಂಟ್ಸ ನ್ನು ಪ್ರಾರಂಭಿಸುವ ಮೂಲಕ 100 ಜನ ಮಹಿಳೆಯರಿಗೆ ಸ್ವಾವಲಂಭಿ ಜೀವನಕ್ಕೆ ದಾರಿಯಾಗಿರುವ ಪರಶುರಾಮ ತಂಗಡಗಿ ಅವರು, ಮಾದರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ. ಎಸ್. ಪಾಟೀಲ್ ಹೇಳಿದರು. ಅವರು ಪಟ್ಟಣದ ನೀರು ಶುದ್ಧೀಕರಣ ಘಟಕದ ಹಿಂಭಾಗದಲ್ಲಿ ಪ್ರಾರಂಭಿಸಲಾಗಿರುವ ನಂದಿ ರೆಡಿಮೇಡ್ ಗಾರ್ಮೆಂಟ್ಸ್ ಗೆ ಭೇಟಿ ನೀಡಿ ಸೋಮವಾರ ಮಾತನಾಡಿದರು.
ಇದನ್ನು ಸಂಸ್ಥಾಪಿಸಿರುವ ಪರಶುರಾಮ್ ತಂಗಡಗಿ ಅವರು ಮಾನಸಿಕ ಸ್ಥೈರ್ಯವಂತರು, ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಂಡು ಸ್ವಂತ ಕಾಲ ಮೇಲೆ ನಿಲ್ಲುವುದು ಹೇಗೆ ಎಂದು ಯುವಕರಿಗೆ ತೋರಿಸಿದ್ದಾರೆ. ಅವರಿಗೆ ಶುಭ ಕೋರುವೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಭೀಮಣ್ಣ ತಳವಾರ, ಶಶಿಕಾಂತ ಮೂಕಿಹಾಳ, ಮಲ್ಲು ನಾಯ್ಕೊಡಿ, ಪ್ರಕಾಶ ಸಾಸಾಬಾಳ