ಜಮಖಂಡಿ

ಅಧಿಕಾರಿಗಳ ನಿರ್ಲಕ್ಷ್ಯ: ಕತ್ತಲೆಯಲ್ಲಿ ಸಂಚರಿಸುತ್ತಿರುವ ಸಾರ್ವಜನಿಕರು

ಅಧಿಕಾರಿಗಳ ನಿರ್ಲಕ್ಷ್ಯ: ಕತ್ತಲೆಯಲ್ಲಿ ಸಂಚರಿಸುತ್ತಿರುವ ಸಾರ್ವಜನಿಕರು

ವರದಿ ಶಶಿಕಾಂತ ತೇರದಾಳ, 

ಜಮಖಂಡಿ 23: ನಗರದ ಕೆಲವು ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ಬೀದಿ ದೀಪದ ವ್ಯವಸ್ಥೆಯ ಸರಿಯಾಗಿ ಇರದ ಕಾರಣ ಸಾರ್ವಜನಿಕರು ಹಾಗೂ ನಿವಾಸಿಗಳು ರಾತ್ರಿ ಸಮಯದಲ್ಲಿ ಕತ್ತಲೆಯಲ್ಲಿ ಸಂಚರಿಸಬೇಕಾಗಿದ್ದು. ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಬೇಕಾದ ನಗರಸಭೆ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಇಲ್ಲಿನ ನಿವಾಸಿಗಳ ಆರೋಪಿಸುತ್ತಿದ್ದಾರೆ. 

ಇಲ್ಲಿನ ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿ ಬೀದಿ ದೀಪಗಳ ಕಂಬಗಳಿದ್ದರೂ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಹೆಸರಿಗೆ ಮಾತ್ರ ವಿದ್ಯುತ್ ಕಂಬಗಳಿವೆ, ವರ್ಷಗಳು ಕಳೆದರೂ ದುರಸ್ತಿ ಆಗಿರುವುದಿಲ್ಲ. ಇದರ ಬಗ್ಗೆ ಗೊತ್ತಿದ್ದರು ಸಹ ನಗರಸಭೆ ಆಡಳಿತ ಮಾತ್ರ ದುರಸ್ತೆ ಮಾಡಲು ಮುಂದಾಗುತ್ತಿಲ್ಲ, ನಗರಸಭೆ ಅಧಿಕಾರಿಗಳು ಜಾನ ಕುರುಡರಂತೆ ಇದ್ದಾರೆ. ಬೀದಿ ದೀಪ ಅಳವಡಿಸಲು ಅಧಿಕಾರಿಗಳಿಗೆ ಕೆಲವು ಬಡಾವಣೆಯ ನಿವಾಸಿಗಳು ಮನವಿ ಮಾಡಿದರೂ ಸಹ ಕ್ಯಾರೆ ಮಾಡುತ್ತಿಲ್ಲ. ನಮ್ಮ ಬಡಾವಣೆಗಳಲ್ಲಿ ಕತ್ತಲಮಯ ಪ್ರದೇಶವಾಗಿದ್ದು. ಕತ್ತಲೆಯಲ್ಲಿ ಸಂಚರಿಸುತ್ತಿದ್ದೇವೆ ಎಂದು ದರ್ಗಾ ಕಾಲೋನಿ ನಿವಾಸಿಗಳು ಆರೋಪಿಸುತ್ತಿದ್ದಾರೆ. 

ಒಂದು ವರ್ಷ ಕಳೆದರೂ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ :  

ನಗರದ ಎ,ಜಿ,ದೇಸಾಯಿ ವೃತ್ತದಿಂದ ಟನಿಂರ್ಗ್ ಪಾಯಿಂಟ್‌ದವರೆಗೆ ಒಂದು ವರ್ಷಗಳ ಹಿಂದೆ ರಸ್ತೆ ವಿಭಜಕ ನಿರ್ಮಾಣವಾಗಿದೆ ವಿಭಜಕದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಆದರೆ, ಕಡಪಟ್ಟಿ ಕ್ರಾಸ್‌ದವರಿಗೆ ಎರಡು ತಿಂಗಳ ಹಿಂದೆ ವಿದ್ಯುತ್ ದೀಪದ ವ್ಯವಸ್ಥೆ ಆಗಿದೆ. ಅಲ್ಲಿಂದ ಮಿನಿ ವಿಧಾನಸೌಧ, ಕೈಲಾಸ ಪತಿಗುಡಿ, ವೀರರಾಣಿ ಚೆನ್ನಮ್ಮ ಸರ್ಕಲ್, ಜಿ,ಎಲ್,ಬಿ,ಸಿ, ಬಸ್ ನಿಲ್ದಾಣ ಹಾಗೂ ಟನಿಂರ್ಗ್ ಪಾಯಿಂಟ್‌ದವರೆಗೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕಾಗಿದೆ, ಇದು ನಗರದ ಪ್ರಮುಖ ರಸ್ತೆಗಳಾಗಿವೆ. 

ಜಮಖಂಡಿಯ ಬೈಪಾಸ್ ರಸ್ತೆಯು ಸುಮಾರು 1,5 ಕಿಮೀ ಉದ್ದದ ರಸ್ತೆ ಇದ್ದು. ಆದರೆ ಎಸ್,ಆರ್,ಎ ಕ್ಲಬ್‌ದಿಂದ ಬಸವೇಶ್ವರ ಕಾಲೇಜಿನವರಿಗೆ ಮಾತ್ರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ, ಅಲ್ಲಿಂದ ಲಕ್ಕನಕೆರೆ, ಜಂಬುಕೇಶ್ವರ ದೇವಸ್ಥಾನದವರೆಗೆ ಸುಮಾರು 1 ಕಿಮೀದವರಿಗೆ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ , ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಿಯ ನಿವಾಸಿಗಳಿಗೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.  

ಕತ್ತಲಿನಲ್ಲಿ ಕಳ್ಳತನಕ್ಕೆ ಯತ್ನ,  

ಬೀದಿ ದೀಪಗಳು ಇಲ್ಲದೆ ಇರುವ ಕಾರಣದಿಂದ ನಗರದಲ್ಲಿ ಕಳ್ಳತನಕ್ಕೂ ಕಾರಣವಾಗುತ್ತಿದೆ. ಬೆಳಕಿನ ವ್ಯವಸ್ಥೆ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಕಳ್ಳರು ರಾತ್ರಿ ಹೊತ್ತಲ್ಲಿ ಕಳ್ಳತನಕ್ಕೆ ಯತ್ನ ಮಾಡುತ್ತಿದ್ದಾರೆ. ಹೊಸ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವುದು ಕೂಡ ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. 

ಬೀದಿ ಬದಿಗಳಲ್ಲಿ ವಿದ್ಯುತ್ ದೀಪಗಳು ಇಲ್ಲದ ಸಮಸ್ಯೆ ಒಂದಡೆಯಾದರೆ, ಕತ್ತಲೆ ಆದರೆ ಸಾಕು ಜನರು ರಸ್ತೆಗೆ ಬರಲು ಹಿಂಜರಿಯುತ್ತಾರೆ, ಅಪಘಾತಗಳು ಸಂಭವಿಸುತ್ತವೆ, ಪಾದಚಾರಿಗಳು ಸಂಚಾರ ಮಾಡುವುದು ಕೂಡ ಕಷ್ಟಕರವಾಗಿದೆ. ನಗರಸಭೆ ಅಧಿಕಾರಿಗಳು ಕೂಡಲೇ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ವಿದ್ಯುತ್ ದೀಪಗಳು ಇಲ್ಲದ ಕಾರಣ ಸಂಜೆ ವೇಳೆ ಸಂಚರಿಸುವುದು ತುಂಬಾ ಕಷ್ಟವಾಗುತ್ತಿದೆ ಕೂಡಲೇ ನಗರಸಭೆ ಅಧಿಕಾರಿಗಳು ಬೀದಿ ಬದಿಯ ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಿದರೆ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.  

ರಾಜು ಪೋತರಾಜ  

(ಸಾಮಾಜಿಕ ಹೋರಾಟಗಾರರು ಜಮಖಂಡಿ) 

ಬೀದಿ ಬದಿಯ ವಿದ್ಯುತ್ ದೀಪಗಳ ಅಳವಡಿಕೆಗೆ ಟೆಂಡರ್ ಅನುಮೋದನೆ ಗೊಂಡಿದೆ ಅತಿ ಶೀಘ್ರದಲ್ಲಿಯೇ ವಿದ್ಯುತ್ ದೀಪಗಳನ್ನು ಅಳವಡಿಸಿ. ಸಾರ್ವಜನಿಕರಿಗೆ ಅನುಕೂಲದ ವ್ಯವಸ್ಥೆ ಕಲ್ಪಿಸಲಾಗುತ್ತದೆ. 

ಪರಮಾನಂದ ಗವರೋಜಿ  

(ಅಧ್ಯಕ್ಷರು ನಗರಸಭೆ ಜಮಖಂಡಿ) 


ಸುದ್ದಿ ಓದಿ