ಜಮಖಂಡಿ

ಹಾಲಿನಲ್ಲಿ ಕಲಬೆರಿಕೆ ಪೌಡರ್ ಮಿಶ್ರಣ: ಪೊಲೀಸರಿಂದ ದಾಳಿ

ಹಾಲಿನಲ್ಲಿ ಕಲಬೆರಿಕೆ ಪೌಡರ್ ಮಿಶ್ರಣ: ಪೊಲೀಸರಿಂದ ದಾಳಿ

ಜಮಖಂಡಿ 27: ತಾಲೂಕಿನ ಸಾವಳಗಿ ಸಮೀಪದ ಅಡಿಹುಡಿ ಗ್ರಾಮದಲ್ಲಿ ಹಾಲಿನಲ್ಲಿ ಕಲಬೆರಿಕೆ ಪೌಡರ್ ಹಾಗೂ ಒಳ್ಳೆಣ್ಣೆ ಮಿಶ್ರಣ ಮಾಡಿ. ಮಾರಾಟಕ್ಕೆಂದು ಬೇರೆ ಕಡೆಗೆ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹಾಲಿನ ವಾಹನದ ಮೇಲೆ ಪಿಎಸ್‌ಐ ಶಿವಾನಂದ ಸಿಂಗನ್ನವರ ದಾಳಿ ನಡೆಸಿ. ಇಬ್ಬರು ಆರೋಪಿತರನ್ನು ಬಂಧಿಸಿರುವ ಘಟನೆ ನಡೆದಿದೆ. 

ಅಡಿಹುಡಿ ಗ್ರಾಮದ ಇಬ್ಬರು ಆರೋಪಿಗಳಾದ ಸಚೀನ ಲಕ್ಷ್ಮಣ ನರೋಟೆ, ಶಾಂತಿಲಾಲ ಮಹಾದೇವ ನರೋಟೆ ಇಬ್ಬರು ಕಲಬೆರಿಕೆ ಹಾಲು ತಯಾರಿಸುತ್ತಿದ್ದ ಆರೋಪಿತರನ್ನು ಬಂಧಿಸಿದ್ದಾರೆ. 28 ಹಾಲಿನ ಕ್ಯಾನ್‌ಗಳಲ್ಲಿ 1,120 ಲೀಟರ್ ಹಾಲಿನಲ್ಲಿ ಕಲಬೆರಿಕೆ ದಂಧೆಯಲ್ಲಿ ಬಳಸುತ್ತಿದ ವಸ್ತುಗಳಾದ ಪೌಡರ್ ಮತ್ತು ಒಳ್ಳೆಣ್ಣೆ ಮಿಶ್ರಣ ಮಾಡಿಕೊಂಡು ಮಾರಾಟಕ್ಕೆಂದು ಸಾಗಿಸುತ್ತಿದ್ದ 2 ಮಹೇಂದ್ರ ಪಿಕಪ್ ವಾಹನ, 28 ಹಾಲಿನ ಕ್ಯಾನಗಳು, ಮತ್ತು 2 ಚೀಲ ಹಾಲಿನ ಪೌಡರಗಳನ್ನು ವಶಪಡಿಸಿಕೊಂಡಿದ್ದಾರೆಂದು ಪೋಲಿಸರು ಮಾಹಿತಿಯನ್ನು ನೀಡಿದ್ದಾರೆ. 

ಜಲ್ಲಾ ಎಸ್‌ಪಿ, ಅಮರನಾಥ ರೆಡ್ಡಿ ಅವರ ಆದೇಶದ ಮೇರೆಗೆ, ಡಿಎಸ್‌ಪಿ ಶಾಂತವೀರ ಈ, ಸಿಪಿಐ, ಮಲ್ಲಪ್ಪ ಮಡ್ಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವಾನಂದ ಸಿಂಗನ್ನವರ, ಆಹಾರ ನೀರೀಕ್ಷಕ ಅಪ್ಪಾಜಿ ಹೂಗಾರ, ಪೊಲೀಸ್ ಸಿಬ್ಬಂದಿಗಳಾದ ಐ,ಎ ನದಾಫ, ಎಸ್,ಜಿ, ಭಜಂತ್ರಿ, ಬಸವಣ್ಣನವರ ಸೇರಿದಂತೆ ಇತರರು ದಾಳಿ ನಡೆಸಿದ್ದಾರೆ. ಈ ಕುರಿತು ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. 


ಸುದ್ದಿ ಓದಿ