ಜಮಖಂಡಿ

ಹುನ್ನೂರು ಗ್ರಾಮಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪತ್ರ ಚಳವಳಿ

ಹುನ್ನೂರು ಗ್ರಾಮಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪತ್ರ ಚಳವಳಿ

ಜಮಖಂಡಿ 12: ತಾಲೂಕಿನ ಹುನ್ನೂರು ಗ್ರಾಮಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ವಿದ್ಯುತ್ ಮಗ್ಗಗಳ ನೇಕಾರರು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿ ಪತ್ರ ಚಳವಳಿ ನಡೆಸಿದ್ದಾರೆ. 

10 ಹೆಚ್‌ಪಿ ವರೆಗಿನ ವಿದ್ಯುತ್ ಮಗ್ಗಗಳಿಗೆ ನಿಬಂಧನೆ ಹಾಕದೆ ಸಂಪೂರ್ಣವಾಗಿ ಉಚಿತ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳುವುದು, ವಿಶೇಷ ಯೋಜನೆಯಡಿ ಕಾರ್ಮಿಕ ಸೌಲಭ್ಯಗಳನ್ನು ಜಾರಿ ಮಾಡಲು ಜವಳಿ ಇಲಾಖೆಗೆ 1,500 ಕೋ,ರು, ಅನುದಾನ ಒದಗಿಸುವ ಕುರಿತು ನೇಕಾರ ಮುಖಂಡರೊಂದಿಗೆ ಕೂಡಲೇ ಸಭೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ನೇಕಾರರು ಪತ್ರ ಚಳವಳಿ ನಡೆಸಿದ್ದಾರೆ. 

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಅವರಿಗೆ ಪ್ರತ್ಯೇಕವಾಗಿ ಬರೆದ ಮನವಿ ಪತ್ರಗಳನ್ನು ನೇಕಾರರು ಹುನ್ನೂರು ಅಂಚೆ ಇಲಾಖೆ ಮುಖ್ಯಸ್ಥ ಶ್ರೀರಾಮ ಮನ್ನಿಕೇರಿ ಅವರಿಗೆ ಸಲ್ಲಿಸಿದರು.  

ನೇಕಾರರ ಮುಖಂಡ ಶಿದಮಲ್ಲಪ್ಪ ಗಡೆಪ್ಪನವರ, ಈರ​‍್ಪ ಹನಗಂಡಿ, ರುದ್ರ​‍್ಪ ಕೋಲಾರ, ಸದಾಶಿವ ಕಾಮಗೊಂಡ, ಉಮೇಶ ಹನಗಂಡಿ, ಈಶ್ವರ ಕರ್ಜಗಿ, ಸದಾಶಿವ ಮನ್ಮಿ, ಬಸವರಾಜ ಚಿಂಚಖಂಡಿ, ಶ್ರೀಕಾಂತ ಬಾಣಕಾರ ಅನೇಕರಿದ್ದರು. 


ಸುದ್ದಿ ಓದಿ