ಜಮಖಂಡಿ

ಕನ್ನಡ ಭಾಷೆ ಶ್ರೀಮಂತ ಭಾಷೆ ಎಲ್ಲರೂ ಉಳಿಸಿ ಬೆಳಸಬೇಕಾಗಿದೆ: ಎಸಿ.ಶ್ವೇತಾ ಬೀಡಿಕರ

ಕನ್ನಡ ಭಾಷೆ ಶ್ರೀಮಂತ ಭಾಷೆ ಎಲ್ಲರೂ ಉಳಿಸಿ ಬೆಳಸಬೇಕಾಗಿದೆ: ಎಸಿ.ಶ್ವೇತಾ ಬೀಡಿಕರ

ಜಮಖಂಡಿ 01: ಕನ್ನಡ ಭಾಷೆ. ಕನ್ನಡ ಲಿಪಿಗಳು ಹಲವು ಶತಮಾನದಿಂದ ಇದೆ. ಶಿಲ್ಪಗಳ ಮೇಲೆ ಕನ್ನಡ ಲಿಪಿಗಳು ಇವೆ. ಭಾಷೆ ಎಂಬುವದು ಜ್ಞಾನ. ಸಾಹಿತ್ಯ. ಭಂಡಾರವನ್ನು ತುಂಬಿಕೊಂಡಿರುವ ಭಾಷೆ ಯಾವುದಾದರೂ ಇದ್ದರೆ ಕನ್ನಡ ಮಾತೃ ಭಾಷೆಯಲ್ಲಿ ಇದೆ. ಕನ್ನಡ ಉಳಿಸಿ. ಬೆಳಸಬೇಕು ಎಂದು ಎಸಿ.ಶ್ವೇತಾ ಬೀಡಿಕರ ಹೇಳಿದರು. ನಗರದ ಹೊಕ್ಕಳ ಬಾವಿಯಲ್ಲಿ ನಡೆದ 69ನೇ  ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ  ಭಾವಚಿತ್ರಕ್ಕೆ ಹಾಗೂ ಕನ್ನಡ ಬಾವುಟ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು, 1973ರಲ್ಲಿ ಕನ್ನಡ ಸಂಘ ಕನ್ನಡ ರಾಜೋತ್ಸವ ಆಚರಿಸುತ್ತಾ ಬಂದಿರುತ್ತೆವೆ. ಇಂದು ಎರಡು ಶುಭಾಶಯಗಳು ಒಂದು ದೀಪಾವಳಿ. ಎರಡನೇದು ಕನ್ನಡ ರಾಜೋತ್ಸವದ ಬಗ್ಗೆ ತಿಳಿಸುತ್ತೇನೆ ಎಂದರು. ಕನ್ನಡ ಶ್ರೀಮಂತಿಕೆ, ಭಾಷಾವಾರು. ಕನ್ನಡದ ಬಗ್ಗೆ ಇತಿಹಾಸದ ಬಗ್ಗೆ ಮೆಲಕು ಹಾಕಬೇಕಾಗಿದೆ.  

ಜಮಖಂಡಿ ನಗರದಲ್ಲಿ 50 ವರ್ಷದ ಹಿಂದೆ ಮರಾಠಿಯ ಭಾಷೆಯಲ್ಲಿ ರೂಡಿಯಲ್ಲಿ ಇತ್ತು. ಬೆಳಗಾವಿ ಕೆಲವು ಭಾಗದಲ್ಲಿ ಸಹ ಮರಾಠಿ ಭಾಷೆ ರೂಡಿಯಲ್ಲಿ ಇದೆ. ಕನ್ನಡ ಭಾಷೆಯನ್ನು ಉಳಿಸಿ.ಬೆಳಸಬೇಕಾಗಿದೆ. ಕನ್ನಡದ ಅಭಿಮಾನಿಗಳು ರಾಜ್ಯದಲ್ಲಿ ಅಷ್ಟೇ ಅಲ್ಲ. ಬೇರೆ ರಾಜ್ಯದಲ್ಲಿ. ದೇಶದಲ್ಲಿ ಕನ್ನಡಿಗರು ಕನ್ನಡ ರಾಜೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ. ಬ್ರಿಟಿಷ್ ರು ಆಡಳಿತದಲ್ಲಿ ಎರಡು ಹೊಇರಾಟಗಳು ನಡೆದವು.ಒಂದು ಕನ್ನಡ ಏಕೀಕರಣ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟಗಾರ ನಡೆಯುತ್ತಾ ಬಂದಿತು. ಕನ್ನಡ ಬಗ್ಗೆ ಹೋರಾಟವನ್ನು ಆಲೂರ ವೈಕಂಟರಾಯರು ಹೀಗೆ ಹಲವಾರು ಮಹನೀಯರು ಕನ್ನಡದ ಬಗ್ಗೆ ಹೋರಾಟ ಮಾಡಿದರು. ಹುಯಿಲಗೋಳ ಅವರು ಕನ್ನಡ ಹಾಡನ್ನು ಹಾಡಿದರು. ದಕ್ಷಿಣ ಕನ್ನಡದಲ್ಲಿ ಭಾಷಾವಾರು ಕೂಗು ಕೇಳಿ ಬಂದಿತ್ತು. ಮುಂಬಯಿ ಕರ್ನಾಟಕದಲ್ಲಿ ಮರಾಠಿ ಭಾಷೆಯಲ್ಲಿ ದಾಖಲಾತಿಗಳು ಇದ್ದವು. ಇವಾಗ ಹಳೆ ದಾಖಲಾತಿಗಳು ಸಹ ಬೇಕಾದರೆ ಮರಾಠಿ ಭಾಷೆಯಲ್ಲಿ ದೊರೆಯುತ್ತವೆ.  

ಮೈಸೂರು ಪ್ರಾಂತ್ಯದಲ್ಲಿ ಇವಾಗ ಕರ್ನಾಟಕವಾಗಿ ಬದಲಾವಣೆ ಹೊಂದಿತ್ತು.  ಸಂಸ್ಕೃತ ಭಾಷೆಯು ಪುಸ್ತಕದಲ್ಲಿ ಮಾತ್ರ ಇದೆ. ಕನ್ನಡ ಭಾಷೆ ಹಾಗೆ ಆಗಬಾರದು ಉಳಿಸಬೇಕು. ಬೆಳಸಬೇಕು. ಬೇರೆ ರಾಜ್ಯದಿಂದ ಬಂದ ವ್ಯಾಪಾರಿಗಳಿಗೆ ಇಂಗ್ಲಿಷ್‌. ಹಿಂದಿ ಭಾಷೆಯಲ್ಲಿ ಮಾತನಾಡದೆ. ಕನ್ನಡ ಭಾಷೆಯಲ್ಲಿ ಮಾತನಾಡಿದರೆ. ಮಾತ್ರ ಬೇರೆ ರಾಜ್ಯದಲ್ಲಿ ಸಹ ಕನ್ನಡ ಭಾಷೆ ಬೆಳೆಯುತ್ತದೆ. ದ್ರಾವಿಡ ಭಾಷೆಗಳು ತನ್ನದೆಯಾದ ಛಾಪುಗಳನ್ನು ಮೂಡಿಸಿವೆ. ಸ್ವರಗಳು. ವ್ಯಂಜನಗಳಲ್ಲಿ ಸಹ ಬದಲಾವಣೆಗಳನ್ನು ಹೊಂದಿವೆ.ಶಬ್ದಗಳ ಕನ್ನಡ ವ್ಯಾಕರಣಗಳಲ್ಲಿ ಪರಿಪೂರ್ಣ ಹೊಂದಿದ ಭಾಷೆಯಾಗಿದೆ. ಪತ್ರಿಕೋದ್ಯಮ ಕನ್ನಡ ಭಾಷೆಗಳಲ್ಲಿ ಬರೆದಿರುವ ಲೇಖನಗಳು. ಕನ್ನಡದ ಬಗ್ಗೆ ಉಳಿವಿಗಾಗಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾಗಿದ್ದವು. ಸರಕಾರದ ಸುತ್ತೋಲೆ ಪ್ರಕಾರ ಪ್ರತಿಶತ 50ರಷ್ಡುಎಲ್ಲ ಕಡೆಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಅದರ ಜೊತೆಗೆ ಕನ್ನಡ ಅಭಿಮಾನಿಗಳು ಬದಲಾವಣೆ ಮಾಡಿದರೆ ಮಾತ್ರ ಕನ್ನಡದ ಅಭಿಮಾನ ತೋರಿಸಿದಂತೆ ಆಗುತ್ತದೆ. ಕನ್ನಡ ಪುಸ್ತಕ. ಹಾಡುಗಳನ್ನು. ಚಿತ್ರಗಳನ್ನು ನೋಡುವದು. ಓದುವದು ರೂಡಿಮಾಡಿಕೊಳಬೇಕು ಎಂದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ. ಕನ್ನಡ ಭಾಷೆ ಉಳಿಸಬೇಕು. 

ಬೆಳಸಬೇಕು.ಕನ್ನಡ ಭಾಷೆಗಳು ಮಾತನಾಡುತ್ತಿದ್ದರು ಸಹ ಕೆಲವರು ಕನ್ನಡದಲ್ಲಿ ಮಾತನಾಡದೆ. ಬೇರೆ ಭಾಷೆಯಲ್ಲಿ ಮಾತನಾಡುತ್ತಿರುವುದು ದುಃಖದ ಸಂಗತಿ. 50 ವರ್ಷದ ಇತಿಹಾಸ ಹೊಂದಿರುವ ಜಮಖಂಡಿ ಕನ್ನಡ ಸಂಘವಾಗಿದೆ. ಮೊದಲು ಮಾರಾಠಿ ಭಾಷೆಯಾಗಿತ್ತು. ಇಲ್ಲಿನ ಹಿರಿಯರ ಹೋರಾಟದಿಂದ ಕನ್ನಡ ಭಾಷೆ ಉಳಿದಿದೆ. ಇಂದಿನ ಯುವಕರು ಕನ್ನಡ ಭಾಷೆಯನ್ನು ಉಳಿಸಿ.ಬೆಳಸಬೇಕಾಗಿದೆ. ನಮ್ಮ ರಾಜ್ಯದಲ್ಲಿ ಸಿರಿ.ಸಂಸತ್ತು ಹೊಂದಿರುವ ಪ್ರದೇಶ ಹೊಂದಿರುವ ರಾಜ್ಯವಾಗಿದೆ. ಕನ್ನಡ ಸಾಹಿತ್ಯ ಸಮೇಳನದ ನಡೆದಿರುತ್ತದೆ ಆದರೆ ಕೇವಲ ರಾಜಕೀಯ ಪಕ್ಷಕ್ಕೆ ಮಾತ್ರ ಸೀಮಿತವಾಗಿವೆ. ಹಾಗೆ ಆಗಬಾರದು. ಪಕ್ಷ ಭೇದ ಭಾವ ಮರೆತು ಕನ್ನಡ ಸಾಹಿತ್ಯ ಸಮೇಳನ ಕಾರ್ಯಕ್ರಮ ನಡೆಯಬೇಕು. ಇಂದಿನ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು. ಶಿಕ್ಷಕರು ಬಾರದೆ ಇರುವದು ಕಾರ್ಯಕ್ರಮದಲ್ಲಿ ಎದ್ದು ಕಾಣಿಸುತ್ತಿದೆ.  

ಕನ್ನಡದ ಅಭಿಮಾನ ಎಲ್ಲರಲ್ಲಿ ಮೂಡಬೇಕು. ಮುಂದಿನ ದಿನಮಾನದಲ್ಲಿ ಕಡ್ಡಾಯವಾಗಿ ತಾಲೂಕಿನ ಮಟ್ಟದ ಅಧಿಕಾರಿಗಳು ಹಾಜರಾಗಬೇಕೆಂದು ಮನವಿ ಮಾಡಿಕೊಳ್ಳುತ್ತೆನೆ ಎಂದರು. 

ಕನ್ನಡ ರಾಜೋತ್ಸವ ಕಾರ್ಯಕ್ರಮ ನಿರೂಪಣೆಯಲ್ಲಿ ಹಾಗೂ ನಾಡಗೀತೆಯಲ್ಲಿ ಶಾಲಾ ಮಕ್ಕಳು ಹಾಡುವ ಸಮಯದಲ್ಲಿ ಕನ್ನಡ ಭಾವಗೀತೆಗಳನ್ನು ಹಾಕದೆ. ಸೌಂಡ್ ಸಿಸ್ಟಮ್ ದಲ್ಲಿ ಬೇರೆ ಚಲನಚಿತ್ರ ಮ್ಯೂಸಿಕ್ ಹಾಕಿದರು. ಕನ್ನಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.ಬಾಕ್ಸ್‌ : ಜಮಖಂಡಿ ಡಿಎಸ್ ಪಿ.ಶಾಂತವೀರ ಈ. ಅವರು ಮದಕರಿ ನಾಯಕನ ಏಕಪಾತ್ರವನ್ನು ಅಭಿನಯವನ್ನು ನಟಿಸಿದರು. ವೇದಿಕೆಯಲ್ಲಿ ಸೇರಿದ ಎಲ್ಲರ ಗಮನವನ್ನು ಸೆಳೆದರು.ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅರುಣಕುಮಾರ ಶಹಾ. ಮಾಜಿ.ವಿಪ ಸದಸ್ಯ ಜಿ.ಎಸ್‌. ನ್ಯಾಮಗೌಡ. ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ. ನಗರ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ. ಶಿಕ್ಷಕರ ಸಂಘದ ಅಧ್ಯಕ್ಷ. ಪಿ.ಬಿ.ಅಜ್ಜನ್ನವರ. ಸಾಹಿತ್ಯ ಸಮೇಳನದ ಅಧ್ಯಕ್ಷ ಸಂತೋಷ ತಳಕೇರಿ. ಡಿ.ಎಸ್‌.ಪಿ.ಶಾಂತವೀರ ಈ.ತಾ.ಪಂ.ಸಂಜು ಜುನ್ನೂರ. ನಗರಸಭೆ ಪೌರಾಯುಕ್ತ ಜೋತಿ ಗೀರೀಶ ಸೇರಿದಂತೆ ಕನ್ನಡ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು. ತಹಶೀಲ್ದಾರ ಸದಾಶಿವ  ಸ್ವಾಗತಿಸಿದರು. ರವಿ ತೇಲಿ ನಿರೂಪಿಸಿದರು.ಪೋಟೋ : ಎ.ಬಿ.ಜಮಖಂಡಿ ನಗರದ ಹೊಕ್ಕಳಬಾವಿಯಲ್ಲಿ ನಡೆದ 69ನೇ ಕನ್ನಡ ರಾಜೋತ್ಸವ ಕಾರ್ಯಕ್ರಮವನ್ನು ಎಸಿ. ಶ್ವೇತಾ ಬೀಡಿಕರ ಕನ್ನಡ ಧ್ವಜಾರೋಹಣ ನೇರವೆರಿಸಿ.ಮಾತನಾಡಿದರು. 


ಸುದ್ದಿ ಓದಿ