ದೇವದಾಸಿ ಕುಟುಂಬದ ಮಕ್ಕಳು ಮತ್ತು ಮಹಿಳೆಯರಿಗೆ ಆರೋಗ್ಯ ಸೇವೆ
ಜಮಖಂಡಿ 07 : ನಗರದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ಚಿಲ್ಡ್ರನ್ ಆಪ್ ಇಂಡಿಯಾ ಪೌಂಡೇಶನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಪ್ರಾಥಮಿಕ ಆರೋಗ್ಯ ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ದೇವದಾಸಿ ಕುಟುಂಬದ ಮಕ್ಕಳು ಮತ್ತು ಮಹಿಳೆಯರಿಗೆ ಆರೋಗ್ಯ ಸೇವೆಗಳಿಗಾಗಿ ವಕಾಲತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸಸಿಗೆ ನೀರನ್ನು ನೀರುಣಿಸುವ ಮೂಲಕ ದೇವದಾಸಿ ಮಹಿಳೆಯರು ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ್ದ ಚೈತನ್ಯ ಮಹಿಳಾ ಸಂಘ ಕಾರ್ಯದರ್ಶಿ ರೇಣುಕಾ ಗಾಡಿ ಮಾತನಾಡಿ, ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಅರೋಗ್ಯ ಸೇವೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ.ಆರೋಗ್ಯ ಇಲಾಖೆ ಸಿಬ್ಬಂದಿಗಳು ಯಾವತ್ತು ಇಂತಹ ಕಾರ್ಯಕ್ಕೆ ಬೆಂಬಲವಾಗಿರಬೇಕು ಎಂದರು.
ಅತಿಥಿಗಳಾಗಿದ್ದ ತಾಲೂಕಾ ಅರೋಗ್ಯಾಧಿಕಾರಿ ಡಾ.ಗೈಬುಸಾಬ ಗಲಗಲಿ, ಆರೋಗ್ಯ ನಿರಿಕ್ಷಣಾಧಿಕಾರಿ ಉಮೇಶ ಜೋಶಿ, ಟಿಐ ವ್ಯವಸ್ಥಾಪಕ ಕಾಶಿನಾಥ ಶಿವನಕ್ಕನವರ ಮಾತನಾಡಿದರು. ಪಲ್ಲವಿ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ಕಡಕೋಳ ಸ್ವಾಗತಿಸಿದರು. ಮುತ್ತಪ್ಪ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಷ್ಮಿತಾ ಐಹೊಳೆ ನಿರೂಪಿಸಿ, ವಂದಿಸಿದರು.