ಆಹಾರ

ನವಣೆ ತಪ್ಪಿಸುವುದು ಬವಣೆ - ನವಣೆ ಬೆಳೆಯ ಕ್ಷೇತ್ರೋತ್ಸವ

ನವಣೆ ತಪ್ಪಿಸುವುದು ಬವಣೆ - ನವಣೆ ಬೆಳೆಯ ಕ್ಷೇತ್ರೋತ್ಸವ

ಗದಗ 07: ನವಣೆ ಹಲವಾರು ಉತ್ತಮ ಪೋಷಕಾಂಶಗಳನ್ನ ಒಳಗೊಂಡಿರುವಂತಹ ಸಿರಿಧಾನ್ಯ. ಅಂತರಾಷ್ಟ್ರೀಯ ಸಿರಿಧಾನ್ಯದ ವರ್ಷ 2023 ರ ಅಂಗವಾಗಿ ನವಣೆ ಬೆಳೆಯಲ್ಲಿ ಉತ್ತಮ ಇಳುವರಿ ಕೊಡುವಂತಹ ಹಾಗೂ ಬರ ಸಹಿಷ್ಣುತೆ ತಳಿಯಾದ ಎಚ್‌.ಎನ್‌-46 ತಳಿಯನ್ನು ಮುಂಗಾರು ಹಂಗಾಮಿನಲ್ಲಿ ಗದಗ ತಾಲೂಕಿನ ಅಸುಂಡಿ ಹಾಗೂ ನರಗುಂದ ತಾಲೂಕಿನ ಮೂಗನೂರು ಗ್ರಾಮಗಳಲ್ಲಿ 2023-24 ನೇ ಸಾಲಿನಲ್ಲಿ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿತ್ತು.  

ಇದರ ಅಂಗವಾಗಿ ಅಸುಂಡಿಗ್ರಾಮದ ಸುವರ್ಣ ಭೂಮಕ್ಕನವರ ಇವರ ಹೊಲದಲ್ಲಿ ದಿ. 05-10-2023 ರಂದು ನವಣೆ ಬೆಳೆಯಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ತಾಜುದ್ದೀನ ಓಲೇಕಾರ, ಅಧ್ಯಕ್ಷರು, ಗ್ರಾಮ ಪಂಚಾಯತ, ಅಸುಂಡಿ ಇವರು ಮಾತನಾಡಿ ಪ್ರತಿಯೊಬ್ಬರೂ ಹೆಚ್ಚು ಇಳುವರಿ ಕೊಡುವಂತಹ ನವಣೆ ಬೆಳೆಯನ್ನು ಮುಂದಿನ ವರ್ಷ ಬೆಳೆದು ದಿನ ನಿತ್ಯ ಸೇವಿಸಿರಿ ಎಂದು ತಿಳಿಸಿದರು.ಪ್ರಗತಿಪರ ರೈತರಾದ ಸೋಮರಡ್ಡಿ ರಾಮೇನಹಳ್ಳಿ ಇವರು ಮಾತನಾಡಿ ನಮ್ಮ ಹಿರಿಯೆಲ್ಲರೂ ದಿನ ನಿತ್ಯ ನವಣೆ ಸೇವಿಸಿ ಉತ್ತಮ ಆರೋಗ್ಯವನ್ನು ಹೊಂದಿದ್ದರು. ಕಾರಣ ದಿನನಿತ್ಯ ನವಣೆಯನ್ನು ಊಟ ಮಾಡಿರಿ ಎಂದು ತಿಳಿಸಿದರು.  

ಡಾಽಽ ಸುಧಾ ಮಂಕಣಿ, ಪ್ರಭಾರಿ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಮಾತನಾಡಿ ನವಣೆಯ ಪೋಷಕಾಂಶಗಳು ಹಾಗೂ ಅದರ ಬಳಕೆ ಮತ್ತು ವಿವಿಧ ಮೌಲ್ಯವರ್ಧಿತ ಪದಾರ್ಥಗಳ ಕುರಿತು ಮಾಹಿತಿಯನ್ನು ನೀಡಿದರು.ಡಾ. ವಿನಾಯಕ ನಿರಂಜನ, ವಿಜ್ಞಾನಿಗಳು, ಕೃಷಿ ಇಂಜಿನಿಯರಿಂಗ್‌ಇವರು ನವಣೆ ಸಂಸ್ಕರಣೆ ಹಾಗೂ ನವಣೆಸಂಸ್ಕರಣೆಯ ವಿವಿಧ ಯಂತ್ರೋಪಕರಣಗಳ ಕುರಿತು ಮಾಹಿತಿ ನೀಡಿದರು.  ಸುವರ್ಣ ಭೂಮಕ್ಕನವರ ಇವರು ಮಾತನಾಡಿ ದಿನನಿತ್ಯ ತಾವು ಉಪಯೋಗಿಸುತ್ತಿರುವ ಸಿರಿಧಾನ್ಯಗಳು ಹಾಗೂ ಅವುಗಳ ಬೇಸಾಯ ಕುರಿತು ತಿಳಿಸಿದರು.ನಂತರ ಪ್ರಾತ್ಯಕ್ಷಿಕೆಯ ತಾಕುಗಳಿಗೆ ಕ್ಷೇತ್ರ ಭೆಟ್ಟಿಯನ್ನು ಏರಿ​‍್ಡಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರದ ಹೇಮಾವತಿ ಹಿರೇಗೌಡರ, ತೋಟಗಾರಿಕೆ ತಜ್ಞರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 55 ಜನ ರೈತರು, ರೈತ ಮಹಿಳೆಯರು ಹಾಗೂ ಮಹಿಳಾ ಒಕ್ಕೂಟದ ಸಿಬ್ಬಂದಿ ಹಾಗೂ ಸದಸ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ