ಕಾರವಾರ ನಗರಸಭೆಯ ಸಾಮಾನ್ಯ ಸಭೆ
ಹಿಂದೆ ನಡೆದ 21 ಕಾಮಗಾರಿಗಳ ಅವ್ಯವಹಾರ ತನಿಖೆಗೆ ನಗರಸಭೆ ಅಧ್ಯಕ್ಷ ರಿಂದ ತನಿಖಾ ಸಮಿತಿ ರಚನೆ
ಕಾರವಾರ 30: ನಗರಸಭೆಯ ಸಮಾನ್ಯ ಸಭೆ ಶನಿವಾರ ಮಧ್ಯಾನ್ಯ ಸಮಾವೇಶಗೊಂಡಿತು. ಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ್ ಅಧ್ಯಕ್ಷತೆಯಲ್ಲಿ ಆರಂಭವಾಗುತ್ತಿದ್ದಂತೆ, ಹಿಂದಿನ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವಧಿಯ 21 ಕಾಮಗಾರಿಗಳ ಹಗರಣಕ್ಕೆ ಹಣ ಮಂಜೂರು ಮಾಡುವಾಗ ಸ್ಥಾಯಿ ಸಮಿತಿಯಲ್ಲಿ ಕಾಮಗಾರಿ ಪರೀಶೀಲಿಸದೆ, ಬಿಲ್ ಗಳ ಮೊತ್ತ ಅನುಮಾನಿಸದೆ ಪಾವತಿಸಲಾಗಿದೆ. ಈ ಬಗ್ಗೆ ತನಿಖೆಗೆ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈಗ ಮುಂದಿನ ಕ್ರಮ ಏನು ಎಂದು ಕಾಂಗ್ರೆಸ್ ಸದಸ್ಯ ಮಕ್ಬೂಲ್ ಶೇಖ್ ಪ್ರಶ್ನಿಸಿದರು. ಇದಕ್ಕೆ ಸದಸ್ಯ ಮಕ್ಬೂಲ್ ಶೇಖ್, ಜಿ.ವಿ.ನಾಯ್ಕ, ಪ್ರೇಮಾನಂದ ಬೆಂಬಲ ನೀಡಿದರು.
ಈ ಬೇಡಿಕೆಗೆ ಅಧ್ಯಕ್ಷ ಅಂಕೋಲೇಕರ್ ಪ್ರತಿಕ್ರಿಯೆ ನೀಡಿ ತನಿಖಾ ಸಮಿತಿ ರಚಿಸುವುದಾಗಿ ಪ್ರಕಟಿಸಿ, ತನಿಖಾ ಸಮಿತಿ ಸದಸ್ಯರ ಹೆಸರು ಹೇಳಿದರು. ಸಮಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರೇಮಾನಂದ ಗುನಗಾ, ಮಕ್ಬೂಲ್, ರಾಜೇಶ್, ಕಿಣಿ ಇದ್ದಾರೆ ಎಂದರು. ಆಗ ಜಿ.ವಿ.ನಾಯ್ಕ ಮಾತನಾಡಿ ಹಿರಿಯ ಸದಸ್ಯನಾದ ನನ್ನನ್ನು ಸಮಿತಿಯಲ್ಲಿ ಸೇರಿಸಿಲ್ಲ ಎಂದರು. ಈಗ ಸೇರಿಸಿದರೂ ನಾ ಕೆಲಸ ಮಾಡಲ್ಲ. ಆದರೆ ತನಿಖಾ ವರದಿ ಸರಿಯಾಗಿ ಮಾಡಿ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಹುಲಸ್ವಾರ ನಾನು ಸಹ ತನಿಖಾ ಸಮಿತಿಯಲ್ಲಿರಬೇಕು ಎಂದರು. ಅದಕ್ಕೆ ಅಧ್ಯಕ್ಷರು ಸಮ್ಮತಿಸಿದರು. ಸಭೆಯಲ್ಲಿ ಚರ್ಚೆ ಮುಂದುವರಿಯಿತು. ನಗರದಲ್ಲಿ ವಾರಕ್ಕೆ 538 ಕಡೆ ನಗರಸಭೆ ಯಿಂದ ಕುಡೊಯುವ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ಟ್ಯಾಂಕ್ ನೀರು ಸಪ್ಲೈಗೆ 6000 ಚಾರ್ಜ ಕೊಡಲಾಗುತ್ತಿದೆ ಎಂದು ಅಧಿಕಾರಿ ಸಭೆಯ ಗಮನಕ್ಕೆ ತಂದರು.
ಸದಸ್ಯ ಮಕ್ಬೂಲ್ ಶೇಖ್ ಮಾತನಾಡಿ ಹತ್ತು ಇಂಚಿನ ಬೋರ್ ವೆಲ್ ಹಾಕಲು 49000 ಖರ್ಚು ತೋರಿಸಿ, ಹಣ ಪಾವತಿಸಲಾಗಿದೆ. ಈ ಬಗ್ಗೆ ತನಿಖೆ ಯಾಗಬೇಕೆಂದು ಮಕ್ಬೂಲ್ ಶೇಖ್ ಆಗ್ರಹ ಮಾಡಿದರು . ನಗರಸಭೆಯ ಬಾಡಿಗೆ ವಾಹನಕ್ಕೆ ತಿಂಗಳ ಬಾಡಿಗೆ ಎಷ್ಟು ನೀಡಲಾಗುತ್ತಿದೆ ಎಂದು ಪಿ.ಗುನಗಾ ಪ್ರಶ್ನಿಸಿದರು. ವಾಹನ ಬಾಡಿಗೆ42000 ಹಾಗೂ ಜಿಎಸ್ ಟಿ. ಸೇರಿಸಿ ನೀಡಲಾಗುತ್ತದೆ ಎಂಬ ಉತ್ತರ ಬಂದಾಗ , ನಗರಸಭೆಯಿಂದ ವಾಹನವನ್ನೇ ಖರಿದಿಸಿ, ಬಾಡಿಗೆ ವೆಹಿಕಲ್ ಬೇಡ ಎಂದು ಸದಸ್ಯ ಸಲಹೆ ನೀಡಿದರು. ಆಗ ಪೌರಾಯುಕ್ತರು ಮಧ್ಯ ಪ್ರವೇಶಿಸಿ 9 ಲಕ್ಷಕ್ಕಿಂತ ರೂ.ಗಿಂತ ಹೆಚ್ಚು ವ್ಯಹಿಸಿ ವಾಹನ ಖರೀದಿಗೆ ಅವಕಾಶ ಇಲ್ಲ. ಮೇಲಾಗಿ 42 ಸಾವಿರದಲ್ಲಿ ವಾಹನ ಮಾಲೀಕರು ಡೆಸೆಲ್ ಮತ್ತು ವಾಹನ ಚಾಲಕನ ವೇತನ ಅವರೇ ಕೊಡುತ್ತಾರೆ. ಹಾಗಾಗಿ ನಗರಸಭೆ ಗೆ ಅದೇ ಲಾಭದಾಯಕ ಎಂದರು.
ಆರ್.ಪಿ.ನಾಯ್ಕ ಕಟ್ಟಿದ ಸಾಮ್ರಾಜ್ಯ: ನಗರ ಸಭೆ ಈಜುಕೊಳದ ಬಳಿಹೂ ಹಣ್ಣು ಮಾರುಕಟ್ಟೆ ಗೆ 68 ರೂ. ಲಕ್ಷ ವೆಚ್ಚ ಮಾಡಿ ಕಟ್ಟಿದವರು ಪ್ರಭಾರ ಪೌರಾಯುಕ್ತ ಹಾಗೂ ಇಂಜಿನಿಯರ್ ಆರ್ .ಪಿ.ನಾಯ್ಕ. ಆದರೆ ಅದರಿಂದ ನಗರಸಭೆಗೆ ಆದಾಯ ಬರಲಿಲ್ಲ. ಪ್ರಯೋಜನವೂ ಆಗಲಿಲ್ಲ. ಇಂತಹ ವೇಸ್ಟ್ ಮಳಿಗೆಗಳನ್ನು ಪಾಕಿಂರ್ಗ್ ಸಹ ಬಿಡದೆ ಕಟ್ಟಿ , ಇಲ್ಲಿಂದ ವರ್ಗಾವಣೆ ಆದರು ಎಂದು ಸದಸ್ಯರೊಬ್ಬರು ಗೊಣಗಿಕೊಂಡರು. ಬಿಡಾಡಿ ದನ ಮತ್ತು ಬೀದಿ ನಾಯಿ ಬಗ್ಗೆ ಸ್ವಾರಸ್ಯ ಚರ್ಚೆ:ನಗರಸಭೆಯ ಸಮಾನ್ಯಸಭೆಯಲ್ಲಿ ಬಿಡಾಡಿ ದನ ಮತ್ತು ಬೀದಿ ನಾಯಿ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಸದಸ್ಯ ನಂದಾ ನಾಯ್ಕ ರಾತ್ರಿ ಬೀದಿ ನಾಯಿ ಬೊಗಳುವುದರಿಂದ ನಿದ್ರೆ ಬರಲ್ಲ. ಅದೆಂಥ ಸಂತಾನಹರಣ ಮಾಡ್ತಿರೋ ??? ನಾಯಿಗಳು ಮಾತ್ರ ವರ್ಷದಲ್ಲಿ ಎರಡು ಸಲ ಸಂತಾನೋತ್ಪತ್ತಿ ಮಾಡುತ್ತವೆ ಎಂದಾಗ ಮಹಿಳಾ ಸದಸ್ಯರು ಬಿದ್ದು ಬಿದ್ದು ನಕ್ಕರು. ಕೈ ಮುಗಿತಿನಿ , ನಂದನಗದ್ದಾ ವಾರ್ಡ್ ನಿಂದ ಬೀದಿ ನಾಯಿ ಸ್ಥಳಾಂತರ ಮಾಡಿ ಎಂದು ವಿನಂತಿಸಿದರು. ಬೀದಿ ನಾಯಿಗೆ ಬಿರಿಯಾನಿ ಹಾಕಿದವರು ಇದ್ದಾರೆ ಎಂದು ಸದಸ್ಯರೊಬ್ಬರು ಕೂಗಿದರು. ಆಗ ನಂದಾ ನಾಯ್ಕ ಪೇಪರ್ ನಲ್ಲಿ ಪೋಟೋ ಹಾಕಿಸಿಕೊಳ್ಳಲು ಒಂದು ದಿನ ನಾಯಿಗಳಿಗೆ ಬಿರಿಯಾನಿ ಹಾಕಿದ್ರು. ಮರಿದಿನ ಅವರು ನಾಪತ್ತೆ ಯಾದರು ಎಂದು ತಿರುಗೇಟು ನೀಡಿದರು. ಬೀದಿನಾಯಿಗಳಿಗೆ ಬೀದಿನಾಯಿ ವಾಸಸ್ಥಾನ ಕಟ್ಟಿ ಎಂದು ಸಲಹೆ ನೀಡಿದರು. ಇನ್ನು ಬಿಡಾಡಿದನಗಳನ್ನು ಹಳಿಯಾಳ, ಸಿದ್ದಾಪುರ, ಕುಮಟಾ ಗೋಶಾಲೆಗೆ ಸ್ಥಳಾಂತರ ಮಾಡಿ, ದನದ ಮಾಲೀಕರಿಗೆ ಕೊನೆಯ ಎಚ್ಚರಿಕೆ ನೀಡಿ , ಪತ್ರಿಕಾಪ್ರಕಟಣೆ ಕೊಡಿ ಎಂಬ ಸಲಹೆಗಳು ಸಭೆಯಲ್ಲಿ ಬಂದವು. ಬಿಣಗಾದಲ್ಲಿ ಅರಣ್ಯ ಇಲಾಖೆಯಿಂದ ಹತ್ತು ಎಕರೆ ಜಾಗ ಕೇಳಿ .ಅಲ್ಲಿ ನಗರಸಭೆ ವತಿಯಿಂದ ಗೋಶಾಲೆ ಮಾಡೋಣ ಎಂದು ಸದಸ್ಯ ನಂದಾ ನಾಯ್ಕ ಸಲಹೆ ನೀಡಿದರು. ರಸ್ತೆಯಲ್ಲಿ ದನ ಮಲಗಿ ಅಪಘಾತ ಆಗುತ್ತಿವೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೇಗಾದರೂ ಮಾಡಿ ಬೀಡಾಡಿ ದನ ಸಮಸ್ಯೆ ಬಗೆ ಹರಿಸಿ ಎಂದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು ನಗರದಲ್ಲಿ 350 ಬಿಡಾಡಿ ದನ ಇವೆ. ಇವು ರಸ್ತೆಯಲ್ಲಿ ಇರದಂತೆ ಏನಾದರೂ ಮಾಡೋಣ ಎಂದರು.
ಬೀದಿ ದೀಪ ನಿರ್ವಹಣೆ, ಕುಡಿಯುವ ನೀರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯ 35 ಕೋಟಿ ಅನುದಾನ ಬಳಕೆ ಬಗ್ಗೆ ಚರ್ಚೆಯಾಯಿತು. ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ಮಾಡಿ ನಿರ್ಣಯಕ್ಕೆ ಬರಲು ಸಾಮಾನ್ಯ ಸಭೆ ನಿರ್ಧರಿಸಿತು . 31 ವಾರ್ಡಗಳ ಪೈಕಿ 29 ವಾರ್ಡಗಳ ಸದಸ್ಯರು ಸಭೆಯಲ್ಲಿ ಹಾಜರಿದ್ದರು.