ಕ್ರೀಡಾ ದಿನಾಚರಣೆ: ಕಾರವಾರದಲ್ಲಿ ಸೈಕ್ಲೋಥಾನ್ ರನ್
ಕಾರವಾರ : ರಾಷ್ಟೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ಇವರ ಸಹಬಾಗಿತ್ವದಲ್ಲಿ ಕಾರವಾರ ನಗರದಲ್ಲಿ ಸೈಕ್ಲೊಥಾನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಬೈಸಿಕಲ್ ಕ್ಲಬ್ ಅಧ್ಯಕ್ಷ ಸುರೇಶ್ ಭಟ್ ಹಾಗೂ ಸದಸ್ಯರು ಸೈಕ್ಲೋಥಾನ್ ನಲ್ಲಿ ಭಾಗವಹಿಸಿದ್ದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಸೈಕ್ಲೋಥಾನ್ ಗೆ ಕ್ರೀಡಾಧಿಕಾರಿ ರವಿ ಚಾಲನೆ ನೀಡಿದರು. ಬೈಸಿಕಲ್ ರನ್ ನಗರದ ಮುಖ್ಯ ರಸ್ತೆಯ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತು ಕಿ.ಮೀ .ಸೈಕ್ಲೋಥಾನ್ ಮಾಡಿ ನಂತರ ರವೀಂದ್ರನಾಥ ಠಾಗೋರ್ ಬೀಚ್ ನಲ್ಲಿ ಮುಕ್ತಾಯವಾಯಿತು.