ಜಮಖಂಡಿ

ತಾಲೂಕ ಚಲವಾದಿ ಮಹಾ ಸಮಿತಿ ಪದಾಧಿಕಾರಿಗಳ ಆಯ್ಕೆ

ತಾಲೂಕ ಚಲವಾದಿ ಮಹಾ ಸಮಿತಿ ಪದಾಧಿಕಾರಿಗಳ ಆಯ್ಕೆ


ತಾಲೂಕ ಚಲವಾದಿ ಮಹಾ ಸಮಿತಿ ಪದಾಧಿಕಾರಿಗಳ ಆಯ್ಕೆ  

 ಜಮಖಂಡಿ 25: ಚಲವಾದಿ ಮಹಾ ರಾಜ್ಯ ಸಮಿತಿ ಸಹಯೋಗದಲ್ಲಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ತಾಲೂಕ ಚಲವಾದಿ ಮಹಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ನಗರದ ರಮಾ ನಿವಾಸದಲ್ಲಿ ನಡೆದ ಜಿಲ್ಲಾ ಚಲವಾದಿ ಮಹಾ ಸಮಿತಿ ನೇತೃತ್ವದಲ್ಲಿ ತಾಲೂಕಾಧ್ಯಕ್ಷರಾಗಿ ಶಶಿಕಾಂತ ಎನ್ ತೇರದಾಳ ಅವರನ್ನು ಆಯ್ಕೆ ಮಾಡಲಾಯಿತು. 

ಉಪಾಧ್ಯಕ್ಷರಾಗಿ ರವಿ ದೊಡಮನಿ, ಗೌರವಧ್ಯಕ್ಷ ರವಿ ಶಿಂಗೆ, ಪ್ರಧಾನ ಕಾರ್ಯದರ್ಶಿ ದೀಲೀಪ ದಾಶ್ಯಾಳ, ಕಾರ್ಯದರ್ಶಿ ಲಕ್ಷ್ಮಣ ಕಾಂಬಳೆ,ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಆಲಬಾಳ, ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಸುತಾರ, ಖಜಾಂಚಿ ರಾಜು ಪೋತರಾಜ, ಪ್ರಚಾರ ಸಮಿತಿ ಅಧ್ಯಕ್ಷ ರವಿ ಜಂಬಗಿ, ಉಪಾಧ್ಯಕ್ಷ ಭರತೇಶ ಪಾನಕ್ಕನ್ನವರ, ಕಾನೂನು ಸಲಹಾ ಸಮಿತಿ ಅಧ್ಯಕ್ಷ ಶರಣಕುಮಾರ ಕಂಬಾಗಿ, ಸಾಬು ನಾಟೀಕರ, ಸಲಹಾ ಸಮಿತಿ ಪ್ರಶಾಂತ ನೀಲನಾಯಕ, ಸಲಹ ಸಮಿತಿ ಸದಸ್ಯರಾಗಿ ಪ್ರೇಮ ನಾಗನೂರ, ರಾಘವೇಂದ್ರ ನಾಟೀಕರ, ಸುಭಾಸ ರಬಕವಿ, ಮಂಜುನಾಥ ನಾಕ್ಕೂರ, ಸುರೇಶ ಕಾಂಬಳೆ, ಗಂಗಪ್ಪ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ, ಜಿಲ್ಲಾ ಸಮಿತಿ ಸದಸ್ಯರಾದ ಕುಶಾಲ ವಾಗಮೋರೆ, ಸುಭಾಸ ಬದಾಮಿ, ಶ್ರೀಧರ ಚಿಕ್ಕಲಕಿ, ರಾಮಣ್ಣ ಹಿರೇಮನಿ, ಸಂಗಪ್ಪ ನಾರಾಯಣಿ, ಡಿ,ಎಸ್,ಜೈಭೀಮ, ಸುರೇಶ ನಂದಿ ಸೇರಿದಂತೆ ಅನೇಕ ಇದ್ದರು. 


ಸುದ್ದಿ ಓದಿ