ಶಿಕ್ಷಣದಿಂದ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ: ಬೆಳಗಲಿ
ಜಮಖಂಡಿ 8: ಶಿಕ್ಷಣದಿಂದ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಾರು ಶಿಕ್ಷಣದಿಂದ ವಂಚಿತರಾಗುತ್ತಾರೆ ಅವರಿಗೆ ಜಾತಿ ತಾರತಮ್ಯ ಎದ್ದು ಕಾಣಿಸುತ್ತದೆಂದು ಮಾಜಿ.ಜಿಪಂ.ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಹೇಳಿದರು.
ತಾಲೂಕಿನ ಕಾಜೀಬೀಳಗಿ ಗ್ರಾಮದಲ್ಲಿ ನಡೆದ ದುರ್ಗಾದೇವಿ ಶಿಖರ ಉದ್ಘಾಟನೆ ಹಾಗೂ ಪಂಚ ಕಳಸಾರೋಹನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬಡತನ ಬಹಳ ಇದೆ. ಸಮಾಜದಲ್ಲಿ ಬದುಕಲಿಕ್ಕೆ ಮೊದಲು ಶಿಕ್ಷಣವನ್ನು ಕಲಿಯಬೇಕಾಗಿದೆ. ಸಮಾಜದಲ್ಲಿ ಬದುಕಲಿಕೆ ಸಾಧ್ಯವಾಗುತ್ತದೆ. ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದುಷ್ಟಶಟ್ಟಗಳಿಂದ ದೂರ ಇರಬೇಕಾಗಿರುವದು ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ಯುವಕರು ಹಿರಿಯರು ಒಕ್ಕಟಾಗಿದ್ದರೆ ಮಾತ್ರ ಸಮಾಜ ಮುಂದೆ ಬರಲು ಸಾಧ್ಯವಾಗುತ್ತದೆ. ಸತತವಾಗಿ 5 ದಿನಗಳ ಕಾಲ ಜಾತ್ರೆಯನ್ನು ಮಾಡುವದು ಹೆಮ್ಮೆಯ ವಿಷಯವಾಗಿದೆ. ಜಾತಿ. ಮತ.ಭೇದ.ಭಾವಗಳನ್ನು ಮರೆತು ಎಲ್ಲರೂ ಒಂದಾಗಬೇಕಾಗಿದೆ. ಶಿಕ್ಷಣದಿಂದ ಇಂದಿನ ಮಕ್ಕಳು ಯಾರು ವಂಚಿತರಾಗಬಾರದು ಎಂದರು.
ಮಾದಿಗ ಸಮಾಜದ ಹೋರಾಟದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ ಮಾತನಾಡಿ, ಸಮಾಜ ಒಂದಾಗಿದ್ದರೆ ಮಾತ್ರ ಸಮಾಜ ಸುಧಾರಣೆವಾಗಲು ಸಾಧ್ಯವಾಗಿದೆ. ಸದಾಶಿವ ಆಯೋಗ ಜಾರಿಗೆ ಬರಲು ಕಾರಣ ಸಮಾಜ ಒಕ್ಕೂಟದಿಂದ ಇರುವ ಕಾರಣದಿಂದ ಮಾತ್ರ ಸಾಧ್ಯವಾಗಿದೆ. ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯವಾಗಿದೆ. ಶಿಕ್ಷಣದಿಂದ ಉನ್ನತ ಸ್ಥಾನದಲ್ಲಿ ಬರಲು ಸಾಧ್ಯವಾಗುತ್ತದೆ. ರಾಜಕೀಯ ಮತ್ತು ಸರಕಾರದ ಮೇಲೆ ಯಾರು ಅವಲಂಬನೆಯಾಗದೆ, ಎಲ್ಲ ಕ್ಷೇತ್ರದಲ್ಲಿ ನಮ್ಮ ಸಮಾಜ ಮುಂದೆ ಬರಬೇಕಾಗಿದೆ ಎಂದರು.
ಮಾಜಿ ತಾ.ಪಂ.ಅಧ್ಯಕ್ಷ ಶಿವಪ್ಪ ಅತಾಲಟ್ಟಿ ಮಾತನಾಡಿ. ಸುಮಾರು ವರ್ಷಗಳ ಕಾಲದಿಂದ ಇರುವ ದೇವಿಯ ದೇವಸ್ಥಾನ ಅಭಿವೃದ್ಧಿ ಮಾಡಬೇಕೆಂದು ಸಮಾಜ ಮುಖಂಡರ ಕನಸು ಕಂಡಿದರು. ಅದರಂತೆ ಇಂದು ದೇವಿಯ ಕಳಸಾರೋಹನ ನೇರೆವೇರಿದೆ. ಸಮಾಜದಲ್ಲಿ ಮೊದಲ ಶಿಕ್ಷಣದಿಂದ ಮುಂದೆ ಬಂದರೆ ಮಾತ್ರ ಇಂತಹ ಅಭಿವೃದ್ಧಿ ಪರ ಕೆಲಸಗಳು ಆಗಲು ಸಾಧ್ಯ ಎಂದರು.ಬಿಇಒ ಅಶೋಕ ಬಸನ್ನವರ ಮಾತನಾಡಿ. ಜಾತ್ರೆ ಮಾಡುವುದರಲ್ಲಿ ಸಮಾಜ ಬಹಳ ಮುಂದೆ ಇದೆ ಎಂದರು. ಮುಖ್ಯ ಶಿಕ್ಷಕಿ ಸುಮಂಗಲಾ ಮಾದರ ಮಾತನಾಡಿ, ಸುಮಾರು ಒಂದು ವರ್ಷದ ಕಾಲ ಗೋಪುರ ಹಾಗೂ ಕಳಸಾರೋಹನ ಕಾರ್ಯಕ್ರಮ ಮಾಡಬೇಕೆಂದು ನಮ್ಮ ಸಮಾಜದ ಬಂಧುಗಳು ಕನಸುಗಳನ್ನು ಕಂಡಿದ್ದರು. ಅದು ಇಂದು ಈಡೇರಿದೆ. ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದು ಸಮಾಜ ಸುಧಾರಣೆಯನ್ನು ಮಾಡಬೇಕಾಗಿದೆ ಎಂದರು. ಆನಂದ ಪತ್ತಾರ.ರಾಘವೇಂದ್ರೆ ಎನ್ನಾರಪೂರ. ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಿವಾನಂದ ಬಿರಾದರ, ಮಾದೇವಿ ಐಗಳಿ, ನಾಗರಾಜ ಶೇಗುಣಸಿ, ಆನಂದ ಪತ್ತಾರ, ಆನಂದ ಸಸಾಲಟ್ಟಿ, ಸುಮಂಗಲಾ ಜಡರಾಯ, ಮಲ್ಲಿಕಾರ್ಜುನ ಸವದಿ, ಸಂಗಪ್ಪ ಚಿಮ್ಮಡ, ಸುರೇಶ ಕುರಣಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಮ್ಮಣ್ಣ ಅರ್ದಾಊರ ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿದರು. ರವಿ ಐಗಳಿ ನಿರೂಪಿಸಿದರು.ಕಾಶಿರಾಯ ಜಂಗನ್ನವರ ವಂದಿಸಿದರು.