ಜಮಖಂಡಿ

ಡಾ,ಅಭಿನವಕುಮಾರ ಸ್ವಾಮಿಜೀ ನಿಧನ

ಡಾ,ಅಭಿನವಕುಮಾರ ಸ್ವಾಮಿಜೀ ನಿಧನ

ಜಮಖಂಡಿ 09 : ನಗರದ ಓಲೇಮಠದ ಡಾ,ಅಭಿನವಕುಮಾರ ಚನ್ನಬಸವ ಮಾಹಾಸ್ವಾಮಿಜೀಯವರು (62) ನಿಧನ ಹೊಂದಿದ್ದಾರೆ. 

ಪ್ರಾಥಮಿಕ ಶಿಕ್ಷಣ ಬಿದರಿ ಗ್ರಾಮದಲ್ಲಿ ಹಾಗೂ ಪ್ರೌಢ, ಪದವಿ ಹಂಪಿ, ಬನಾರಸ ಹಲವು ಕಡೆಗಳಲ್ಲಿ ಶಿಕ್ಷಣ ಮುಗಿಸಿ. ಎಮ್,ಎ,ಪಿಎಚ್‌ಡಿ, ಸಂಸ್ಕೃತ, ಕನ್ನಡ ಪದವಿ ಹೊಂದಿದರು. 

ವಚನ, ಸಾಹಿತ್ಯ, ಪುರಾಣ ಪ್ರವಚನ ಹೇಳುವ ಶ್ರೀಗಳು. ವಚನ, ಕಾವ್ಯ, ಸಾಹಿತ್ಯ, ಗದ್ಯದ ಬರಣಿಗೆ ಮೂಲಕ ಪುಸ್ತಕಗಳನ್ನು ಬರೆದಿದ್ದು. ಜಮಖಂಡಿ, ಕಡಕೋಳ, ನವಿಲುತೀರ್ಥ, ಒಡಕಹೊಳಿ,ಕೊರವನಕೊಳ್ಳ, ಸವದತ್ತಿ, ಶಿಗ್ಗಾಂವಿ, ಹುಲಗೂರ ವಿರಕ್ತಮಠ ಹೀಗೆ ಹಲವು ಮಠಗಳಿಗೆ ಮಠಾಧೀಶರಾಗಿದ್ದರು. 

ಶ್ರೀಗಳು ನಿಧನಕ್ಕೆ ಗಣ್ಯಮಾನ್ಯರು, ರಾಜಕೀಯ ಧುರೀಣರು, ವ್ಯಾಪಾರಸ್ಥರು, ತಾಲೂಕಿನ ಜನತೆ ಹಾಗೂ ಕರ್ನಾಟಕ ಪ್ರೇಸ್ ಕ್ಲಬ್, ಕಾನಿಪಾ ಧ್ವನಿ ಪತ್ರಕರ್ತರ ಸಂಘಟನೆಗಳು ಸಂತಾಪಾ ಸೂಚಿಸಿದ್ದಾರೆ.ಓಲೇಮಠದ ಆವರದಲ್ಲಿ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಲಿಂಗಾಯತ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿತು.ಸಹಸ್ರಾರು ಭಕ್ತರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ