ಜಮಖಂಡಿ

ಧರಿದೇವರ- ಜಕ್ಕಮ್ಮದೇವಿಯ ಜಾತ್ರಾ ಆಮಂತ್ರಣ ಪತ್ರಿಕೆ ಬಿಡುಗಡೆ

ಧರಿದೇವರ- ಜಕ್ಕಮ್ಮದೇವಿಯ ಜಾತ್ರಾ ಆಮಂತ್ರಣ ಪತ್ರಿಕೆ ಬಿಡುಗಡೆ

ಜಮಖಂಡಿ 09 :ತಾಲ್ಲೂಕಿನ ಆಲಗೂರ ಗ್ರಾಮದ ಗೌಡ್ರ ಗಡ್ಡೆ ಬಳಿ ಧರಿದೇವರ ಹಾಗೂ ಜಕ್ಕಮ್ಮದೇವಿಯ ಜಾತ್ರೆಯು ನ, 9 ರಿಂದ 10 ವರಗೆ ಅತೀ ವಿಜೃಂಭಣೆಯಿಂದ ಜರುಗಲಿದೆ ಎಂದು ಧರಿದೇವರ ಮಠದ ಲಕ್ಷ್ಮಣ ಮುತ್ಯಾ ಹೇಳಿದರು. 

ತಾಲೂಕಿನ ಆಲಗೂರ ಗ್ರಾಮದ ಧರೀದೇವರ ಮಠದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನ ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ನವೆಂಬರ್ 9 ರಂದು ಪಂಚಾಮೃತ ಅಭಿಷೇಕ, ಅನ್ನಪ್ರಸಾದ, ಸಂಜೆ  ನಂದಿಕೋಳ ಬರುವುದು. ಕವಲಗುಡ್ಡದ ಕರಿಯೋಗ ಸಿದ್ದೇಶ್ವರ ಪಾಲಕಿ, ರಾಜಾಪೂರ  ಹಾಲಸಿದ್ದ ಪಾಲಕಿ, ಬಸ್ತವಾಡ ವೀರಮಲ್ಲಪ್ಪ ಒಡೆಯ ಪಾಲಕಿ, ಕಾತ್ರಾಳ ಸಿದ್ದೇಶ್ವರ ದೇವರ ಪಾಲಕಿ, ಮದರಿ ಮುತ್ತಪ್ಪ ಒಡೆಯ ಪಾಲಕಿ, ಬೆಳಗಲಿ ಲಕ್ಕವ್ವದೇವಿ ಪಾಲಕಿ, ಹೊಕ್ಕುಂಡಿ ಸಿದ್ರಾಮೇಶ್ವರ ದೇವರ ಪಾಲಕಿ, ಕಾಶಿಲಿಂಗೇಶ್ವರ ಪಾಲಕಿಗಳು ಆಗಮಿಸಲಿದ್ದು. ಸಾಯಂಕಾಲ 5 ಗಂಟೆಗೆ ಸಿದ್ದರ ಭೇಟಿ. ರಾತ್ರಿ 8 ಗಂಟೆಗೆ ಪೂಜಾ ಕಾರ್ಯಕ್ರಮ. ರಾತ್ರಿ 10-30 ಕ್ಕೆ ಶಾಂತಿನಾಥ ನಾಟ್ಯ ಸಂಘದಿಂದ ನಾಟಕ ನಡೆಯುವುದು ಎಂದರು. 

ನ, 10 ರಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಜಕ್ಕಮ್ಮದೇವಿಯ ಉಡಿತುಂಬುವದು, ವೀರಭದ್ರೇಶ್ವರ ಅಗ್ನಿಪಟ್ಟ, ತೇರಿಗೆ ಕಳಸ ಏರಿಸುವದು, ಧರ್ಮಸಭೆ, ಡೊಳ್ಳಿನ ಪದ, ಆನೆ ಮೆರವಣಿಗೆಯ ಜೊತೆಗೆ 108 ಕುಂಭಮೇಳ, ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ರಥೋತ್ಸವ, ಅಗ್ನಿ ಹಾಯುವದು, 1008 ಮುತೈದೇಯರಿಗೆ ಉಡಿತುಂಬುವದು ನಂತರ ಭಕ್ತಾದಿಗಳಿಗೆ ಅನ್ನಸಂತರೆ​‍್ಣ ಜರುಗುತ್ತದೆ. ಜಾತ್ರೆಯ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರುಗಳು ಹಾಗೂ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು. 

ನಂತರ ಜಾತ್ರೆಯ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು.ಇದೇ ಸಂದರ್ಭದಲ್ಲಿ ಪಿ.ಟಿ.ಪಾಟೀಲ, ಚಂದಪ್ಪ ನರಸಗೊಂಡ, ಚಿನ್ನಪ್ಪ ಬಂಗಿ, ಅಪಾಸಾಹೇಬ ಜೈನಾಪೂರ, ಪ್ರದೀಪ ಮೆಟ್ಟಗುಡ್ಡ ಹಾಗೂ ಮಠದ ಭಕ್ತಾದಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಮಠದ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಂತರ ಜಾತ್ರೆಯ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು. 


ಸುದ್ದಿ ಓದಿ