ಕನ್ನಡ ಹಬ್ಬ ವಿಜೃಭಂಣೆಯಿಂದ ಆಚರಣೆ: ಅರುಣಕುಮಾರ ಶಾಹ
ಜಮಖಂಡಿ 22: ಕನ್ನಡ ನಾಡದೇವಿ ಭುವನೇಶ್ವರಿ ಹಬ್ಬವನ್ನು ಅತೀ ವಿಜೃಭಂಣೆಯಿಂದ ಮತ್ತು ಕನ್ನಡದ ನಾಡು, ನುಡಿ, ಜಲದ ಬಗ್ಗೆ ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಕನ್ನಡ ಸಂಘದ ಅಧ್ಯಕ್ಷ ಅರುಣಕುಮಾರ ಶಾಹ ಹೇಳಿದರು.
ನಗರದ ತಾಲೂಕಾಡಳಿತ ಸೌಧದ ಸಂಭಾಂಗನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಹಬ್ಬವನ್ನು ಗೌರವದಿಂದ ವ್ಯವಸ್ಥಿತವಾಗಿ ಹಬ್ಬವನ್ನು ಆಚರಣೆ ಮಾಡಬೇಕು. ಅಂದು ದೀಪಾವಳಿಯ ಹಬ್ಬವು ಕೂಡಾ ಇರುತ್ತದೆ, ನಾಡದೇವಿ ಭುವನೇಶ್ವರಿ ಮೆರವಣಿಗೆ ಇರುತ್ತದೆ. ಅಂಗಡಿ, ಮುಂಗಟ್ಟುಗಳ ಮುಂದೆ ಶಾಮೀಯಾನವನ್ನು ಹಾಕಿರುತ್ತಾರೆ, ಮೆರವಣಿಗೆ ಸಮಯದಲ್ಲಿ ಅಡಚಣೆಯಾಗದಂತೆ ಎಲ್ಲ ವ್ಯಾಪಾರಸ್ಥರಿಗೆ ಸೂಚನೆಯನ್ನು ನೀಡಬೇಕು ಎಂದರು.
ತಹಶೀಲ್ದಾರ ಮಾತನಾಡಿ, ನಗರದ ಹೊಕ್ಕಲಬಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬೆಳಗ್ಗೆ 8 ಗಂಟೆಗೆ ಜರುಗಲಿದೆ. ವಿವಿಧ ಶಾಲಾ ಮಕ್ಕಳು ವಿವಿಧ ವೇಶಭೂಷನಗಳನ್ನು ಧರಿಸಿಕೊಂಡಿರುತ್ತಾರೆ. ಅಂತಹ ಮಕ್ಕಳಿಗೆ ಮೆರವಣಿಯಲ್ಲಿ 12 ಟ್ರ್ಯಾಕ್ಟರ್ಗಳನ್ನು ಆರ್,ಟಿ,ಓ ಹಾಗೂ ಪೋಲಿಸರು ವ್ಯವಸ್ಥೆಯನ್ನು ಮಾಡಬೇಕು, ಸಿಡಿಪಿಒ ಇಲಾಖೆಯ ಅಧಿಕಾರಿಗಳು 50 ಜನ ಮಹಿಳೆಯರನ್ನು ಕುಂಬಮೇಳದ ಪಾಲ್ಗೊಳುವಂತೆ ನೋಡಿಕೊಳ್ಳಬೇಕು. ಐದು ನೂರು ಕನ್ನಡದ ಬ್ಯಾಚ್ ಮತ್ತು ಕೊಳಪಟ್ಟಿಯನ್ನು ಹಾಗೂ ನೂರು ಕನ್ನಡದ ಧ್ವಜಗಳನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ,ಸಿ,ಎಮ್ ಇಲಾಖೆಯು ಕೊಡಬೇಕು. ನಗರದಲ್ಲಿ ಇರುವ ಪ್ರಮುಖ ಸರ್ಕಲ್ಗಳಿಗೆ ವಿದ್ಯುತ್ ದೀಪದ ಅಲಂಕಾರವನ್ನು ನಗರಸಭೆಯವರು ಮಾಡಬೇಕು. ಮೆರವಣಿಗೆಯ ಸಮಯದಲ್ಲಿ ವಿದ್ಯುತ್ ತಂತಿಗಳು ತಗುಲದ ಹಾಗೆ ಹೆಸ್ಕಾಂದವರು ನೋಡಬೇಕು. ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳಗಳು ಇರುತ್ತವೆ. ಎಲ್ಲ ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಲು ಶಿಕ್ಷಣ ಇಲಾಖೆಯವರು ನೋಡಿಕೊಳ್ಳಬೇಕು. ಮೆರವಣಿಗೆಯಲ್ಲಿ ಭಾಗವಹಿಸಿದ ಅತೀ ಸುಂದರವಾಗಿ ಕನ್ನಡ ನಾಡು, ನುಡಿ ಬಗ್ಗೆ ವೇಷಭೂಷನ ಧರಿಸಿದ ಮೂರು ಮಕ್ಕಳಿಗೆ ಬಹುಮಾನವನ್ನು ನೀಡಲಾಗುತ್ತದೆ. ಹಾಗೂ ಕನ್ನಡ ನಾಡು,ನುಡಿ,ಜಲ, ಕನ್ನಡದ ಕುರಿತು ಹೋರಾಟ ಮಾಡಿದ ಒಬ್ಬ ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆರ್,ಟಿ,ಒ, ಮತ್ತು ಅಬಕಾರಿ ಇಲಾಖೆಯವರು ಬೆಳಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಬೇಕು. ಕಾರ್ಯಕ್ರಮದ ದಿನದಂದು ಯಾವುದೇ ತೊಂದರೆಗಳು ಆಗದಂತೆ ಪೋಲಿಸ್ ಇಲಾಖೆ ಕಾರ್ಯವನ್ನು ನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.