ಶಿಕ್ಷಕಿ ಕವಿತಾಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ
ಜಮಖಂಡಿ : 10: ತಾಲೂಕಿನ ಕಡಕೋಳ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕಿ ಕವಿತಾ ರಾಮದುರ್ಗ ಅವರಿಗೆ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಸಚಿವ ಆರ್.ಬಿ.ತಿಮ್ಮಾಪೂರ ಅವರು ನೀಡಿ ಗೌರವಿಸಿದರು.
ಶಾಸಕ ಎಚ್. ವೈ. ಮೇಟಿ, ಸಂಸದ ಪಿ. ಸಿ. ಗದ್ದಿಗೌಡರ, ವಿಧಾನ ಪರಿತ್ ಸದಸ್ಯ ಪಿ.ಎಚ್. ಪೂಜಾರ ,ಉಪನಿರ್ದೇಶಕ ಬಿ.ಕೆ. ನಂದನೂರ ಸೇರಿದಂತೆ ಅನೇಕರು ಇದ್ದರು.
ಕಡಕೋಳ ಗ್ರಾಮಸ್ಥರು, ಎಸ್ಡಿಎಮ್ಸಿ ಸದಸ್ಯರು ,ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಪಿ.ಕೆ.ಪಿ.ಸ್, ಹಾಲು ಉತ್ಪಾದಕರ ಸಂಘ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ರಮೇಶ ಅವಟಿ, ಸಿ, ಆರ್, ಪಿಬಿಆರ್ಪಿ ಹಾಗೂ ಶಿಕ್ಷಣ ಸಂಯೋಜಕರು, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ ಬಾಗೇನ್ನವರ, ತಾಲೂಕಾ ಅಧ್ಯಕ್ಷ ಸಿ.ಜಿ.ಕಡಕೋಳ, ಅಧ್ಯಕ್ಷ ಪಿ.ಬಿ.ಅಜ್ಜನ್ನವರ, ಶಿಕ್ಷಕರ ಸೋಸೈಟಿಯ ಅಧ್ಯಕ್ಷ, ನಿರ್ದೇಶಕರು ಹಾಗೂ ಶಾಲೆಯ ಮಕ್ಕಳು ಅಭಿನಂದನೆ ಸಲ್ಲಿಸಿದ್ದಾರೆ.