ಜಮಖಂಡಿ

ನದಿಗೆ ಹಾರಿ ಯುವತಿ ಆತ್ಮಹತ್ಯೆ

ನದಿಗೆ ಹಾರಿ ಯುವತಿ ಆತ್ಮಹತ್ಯೆ

ನದಿಗೆ ಹಾರಿ ಯುವತಿ ಆತ್ಮಹತ್ಯೆ  

ಜಮಖಂಡಿ 05: ತಾಲ್ಲೂಕಿನ ಆಲಗೂರ ಗೌಡರ ಗಡ್ಡೆ ಬಳಿ ಚಿಕಪಡಸಲಗಿ ಕೃಷ್ಣಾ ನದಿಗೆ ಯುವತಿಯೊರ್ವಳು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ವಿಜಯಪುರ ತಾಲೂಕಿನ ಮಹಲ ಐನಾಪೂರ ಗ್ರಾಮದ ಕಲ್ಪನಾ ಚಂದು ಬಂಡಿ (20) ನದಿಗೆ ಹಾರಿ ಸಾವನ್ನಪ್ಪಿದ ದುರ್ದೈವಿ. ತಾಲ್ಲೂಕಿನ ಆಲಗೂರ ಗ್ರಾಮದ ಗೌಡರ ಗಡ್ಡೆ ಬಳಿ ಇರುವ ಬೀರ​‍್ಪ ದೇವರಿಗೆ ತಾಯಿ ಮತ್ತು ಮಗಳು ಬಂದು ಮರಳಿ ಹೋಗುವ ಸಮಯದಲ್ಲಿ ತಾಯಿಯ ಕೈಯಲ್ಲಿ ದೇವರ ಸಾಮಗ್ರಿಗಳನ್ನು ಒಪ್ಪಿಸಿ. ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಳಾದಕಲ್ಪನಾ ಬಂಡಿ ಅವಳು ಚಿಕ್ಕಪಡಸಲಗಿ ಕೃಷ್ಣಾ ನದಿಗೆ ಹಾರಿ ಸಾವನ್ನಪ್ಪಿದ್ದಾಳೆಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ. ಸಾವಳಗಿ ಪಿಎಸ್ ಐ ಶಿವಾನಂದ ಶಿಂಗನ್ನವರ ಹಾಗೂ ಸಿಬಂಧಿಗಳಾದ ಆರ್‌. ಬಿ. ಕೋಳಿ. ಎಸ್‌. ಸಿ. ಜನವಾಡ.ಹಾಗೂ ಅಗ್ನಿಶಾಮಕ ಅಧಿಕಾರಿಗಳು. ಸಿಬಂಧಿಗಳಾದರಾಜು ತಳವಾರ. ಮಹದೇವ ಹಳೆಗೌಡರ.ಶ್ರೀಧರ ಚಿಟೇರಿ. ಕುಮಾರ ದೊಡಮನಿ. ಅಶೋಕ. ಶಿವಪುತ್ರ ಪರಶುರಾಮ ಇದ್ದು.ಕಳೆದ ಮೂರು ದಿನಗಳ ಕಾಲ ಅಗ್ನಿಶಾಮಕ ದಳದ ಸಿಬಂಧಿಗಳು ಹಾಗೂ ಪೋಲಿಸರು ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರು.ಈ ಕುರಿತು ಸಾವಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ. 


ಸುದ್ದಿ ಓದಿ