ಸಮರ್ಥ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ಸವ ಸರ್ವಧರ್ಮ ಸಮನ್ವಯ ಏಕಾತ ಬೃಹತ್ ಸಮಾವೇಶ ಕಾರ್ಯಕ್ರಮ ಜರುಗಲಿದೆ
ಸಮರ್ಥ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ಸವ ಸರ್ವಧರ್ಮ ಸಮನ್ವಯ ಏಕಾತ ಬೃಹತ್ ಸಮಾವೇಶ ಕಾರ್ಯಕ್ರಮ ಜರುಗಲಿದೆ
ಜಮಖಂಡಿ 16 : ಸಮರ್ಥ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ಸವ ಆಧ್ಯಾತ್ಮ ಸಪ್ತಾಹದಲ್ಲಿ ಸರ್ವಧರ್ಮ ಸಮನ್ವಯ ಏಕಾತ ಬೃಹತ್ ಸಮಾವೇಶ ಕಾರ್ಯಕ್ರಮ ನ.19 ರಿಂದ 21 ವರಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಹಿಪ್ಪರಗಿ ಇಂಚಗೇರಿ ಮಠದ ಪ್ರಭುಜಿ ಮಹಾರಾಜರು ಹೇಳಿದರು.
ನಗರದ ಮುಧೋಳ ರಸ್ತೆಯ ಗಿರಮಲ್ಲೇಶ್ವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಚಗೇರಿ ಸಂಪ್ರದಾಯದ ಗಿರಮಲ್ಲೇಶ್ವರ ಮಹಾರಾಜ ಪರಮ ಶಿಷ್ಯರಾದ ಸಂಗಮೇಶ್ವರ ಮಹಾರಾಜ ಪುಣ್ಯಸ್ಮರಣೋತ್ಸ ಆಧ್ಯಾತ್ಮ ಸಪ್ತಾಹ ಕಾರ್ತಿಕ ವದ್ಯ ಚತುರ್ಥಿ ನ,19 ರಂದು ಪ್ರಭುಜಿ ಮಹಾರಾಜ ಅಮೃತ ಹಸ್ತದಿಂದ ದಾಸಭೋದ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭಗೊಂಡು. 21 ರಂದು ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಸಪ್ತಾಹ ಮಂಗಲಗೊಳ್ಳುವುದು ಎಂದರು. ನ,19 ರಂದು ಮುಂಜಾನೆ 11 ಗಂಟೆಗೆ ದಿಂಡಿ ಪಲ್ಲಕಿ ಪಾದಯಾತ್ರಾರ್ತಿಗಳನ್ನು ಬರಮಾಡಿಕೊಳ್ಳುವದು ಹಾಗೂ ಸಪ್ತಾಹ ಪ್ರಾರಂಭೋತ್ಸವವಾಗುತ್ತದೆ. ನ,20 ರಂದು ಸಾಯಂಕಾಲ 5,30 ಗಂಟೆಗೆ ಸರ್ವಧರ್ಮ ಸಮನ್ವಯ ಏಕಾತ ಬೃಹತ್ ಸಮಾವೇಶ ಜರುಗಲಿದೆ. ನ,21 ರಂದು ಮುಂಜಾನೆ 9,30 ಕ್ಕೆ ಸಪ್ತಾಹ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರುಗಳು ಹಾಗೂ ವಿವಿಧ ಜಿಲ್ಲೆ, ವಿವಿಧ ರಾಜ್ಯದಿಂದ ಲಕ್ಷಾಂತರ ಭಕ್ತರು ಸೇರಲಿದ್ದು. ಜಿಲ್ಲೆಯ ರಾಜಕೀಯ ಮುಖಂಡರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರದೀಪ ಮೆಟ್ಟಗುಡ್ಡ, ಗುರುಸಿದ್ದಪ್ಪ ಮಹಾರಾಜರು, ಶಿವು ಶಿರಸಂಗಿ ಸುದ್ದಿಗೋಷ್ಠಿಯಲ್ಲಿ ಇದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು.
ಎ. ಜಮಖಂಡಿ ನಗರದ ಗಿರಮಲ್ಲೇಶ್ವರ ಮಠದಲ್ಲಿ ಇಂಚಗೇರಿ ಮಠದ ಪ್ರಭುಜಿ ಮಹಾರಾಜರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿ. ಜಮಖಂಡಿ ನಗರದ ಗಿರಮಲ್ಲೇಶ್ವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು.