ಜಮಖಂಡಿ

ಡಾ,ಡಿ,ಎಲ್, ನರಂಸಿಹಚಾರ್ಯ ದತ್ತಿನಿಧಿ ಅಂಗವಾಗಿ ಹಳೆಕನ್ನಡ ಸಾಹಿತ್ಯ ಬೋದನಾ ತರಬೇತಿ ಶಿಬಿರ ಕಾರ್ಯಕ್ರಮ

ಡಾ,ಡಿ,ಎಲ್, ನರಂಸಿಹಚಾರ್ಯ ದತ್ತಿನಿಧಿ ಅಂಗವಾಗಿ ಹಳೆಕನ್ನಡ ಸಾಹಿತ್ಯ ಬೋದನಾ ತರಬೇತಿ ಶಿಬಿರ ಕಾರ್ಯಕ್ರಮ

 ಡಾ,ಡಿ,ಎಲ್, ನರಂಸಿಹಚಾರ್ಯ ದತ್ತಿನಿಧಿ ಅಂಗವಾಗಿ ಹಳೆಕನ್ನಡ ಸಾಹಿತ್ಯ ಬೋದನಾ ತರಬೇತಿ ಶಿಬಿರ ಕಾರ್ಯಕ್ರಮ 

ಜಮಖಂಡಿ 16 : ಪ್ರಾಥಮಿಕ ಶಾಲೆಯಲ್ಲಿ ಕನ್ನಡದಲ್ಲಿ ಶಿಕ್ಷಣ ಪ್ರಾರಂಭಗೊಂಡ ವಿವಿಧ ಪದವಿ ಹೊಂದುವ ಮಕ್ಕಳಿಗೆ ಕನ್ನಡ ಬಹಳ ಮುಖ್ಯವಾಗಿದೆ. ಪ್ರತಿಯೊಂದು ಶಾಲಾ, ಕಾಲೇಜಿನ ಶಿಕ್ಷರಿಗೆ ಮತ್ತು ಮಕ್ಕಳಿಗೆ ಹಳೆ ಕನ್ನಡದ ಬಗ್ಗೆ ತಿಳಿಸುವದು ಬಹಳ ಮುಖ್ಯವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯ ಡಾ, ವಿರೇಶ ಬಡಿಗೇರ ಹೇಳಿದರು.ನಗರದ ಜಿ,ಜಿ,ಹೈಸ್ಕೂಲ್ ಶಾಲೆಯಲ್ಲಿ ನಡೆದ ಹಸ್ತಪ್ರತಿಶಾಸ್ತ್ರ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ. ಜಿಲ್ಲಾ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ, ಪ್ರೌಢಶಾಲಾ ವಿಭಾಗ ಸಹಯೋಗದಲ್ಲಿ ಡಾ,ಡಿ,ಎಲ್,ನರಂಸಿಹಚಾರ್ಯ ದತ್ತಿನಿಧಿ ಅಂಗವಾಗಿ ಹಳೆಕನ್ನಡ ಸಾಹಿತ್ಯ ಬೋದನಾ ತರಬೇತಿ ಶಿಬಿರ 19 ಕಾರ್ಯಕ್ರಮದಲ್ಲಿ ಮಾತನಾಡಿದರು.  

ಜಮಖಂಡಿ ಡಾ, ಓಲೇಮಠದ ಶ್ರೀಗಳು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮೊದಲನೆ ವಿದ್ಯಾರ್ಥಿಯಾಗಿ ಪಿಎಚ್‌ಡಿ ಪದವಿಯನ್ನು ಮುಗಿಸಿದ ವಿದ್ಯಾರ್ಥಿಯಾಗಿದ್ದರು. ಹಳೆಕನ್ನಡ ಸಾಹಿತ್ಯ ಬೋದನಾ ತರಬೇತಿ ಶಿಬಿರ 19 ವರ್ಷಗಳ ಕಾಲ ಕಾರ್ಯಕ್ರಮವನ್ನು ಮಾಡಿದೆ. ಅದಕ್ಕಾಗಿ 19ನೇ ಶಿಬಿರ ಎನ್ನಲಾಗಿದೆ. ಇದು ನಾಲ್ಕು ದಿನಗಳ ಕಾಲ ಶಾಲಾ,ಕಾಲೇಜಿನ ಶಿಕ್ಷಕರಿಗೆ ಈ ಶಿಬಿರವನ್ನು ಏರಿ​‍್ಡಸಲಾಗಿದ್ದು. ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಹಳೆ ಕನ್ನಡದ ಕುರಿತು ಪಾಠ ಬೋದನೆ ಮಾಡಲಿದ್ದಾರೆ. ಕನ್ನಡ ಕೇವಲ ಪದವಲ್ಲ. ಅದೊಂದು ಉಸಿರು ಆಗಿದೆ. ಮುಂದಿನ ದಿನಮಾನದಲ್ಲಿ ಮಕ್ಕಳಿಗೆ ಕನ್ನಡ ಬಗ್ಗೆ ತಿಳಿಸುವ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ತಿಳಿಸಲಾಗುವ ಬಗ್ಗೆ ಶಿಬಿರವನ್ನು ಮಾಡಲಾಗುತ್ತದೆ. ಮಕ್ಕಳಿಗೆ ಹಳೆ ಕನ್ನಡವನ್ನು ಉತ್ತರ ಕರ್ನಾಟಕ ಭಾಷೆಯಲ್ಲಿ ಮಕ್ಕಳಿಗೆ ತಿಳಿಸಿದರೆ ಮಾತ್ರ ಸಾರ್ಥಕತೆಯಾಗುತ್ತದೆ ಎಂದರು.ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಿ,ವಿ,ಪರಮಮೂರ್ತಿ, ಡಾ,ಪ್ರೋ.ಪಿ.ಬಿ.ಬಡಿಗೇರ ಮಾತನಾಡಿದರು. ನಿವೃತ್ತ ಕುಲಪತಿ ಕೆ,ಮುರಗೇಪ್ಪ. ಪ್ರೋ,ಆನಂದ ದೇಶಪಾಂಡೆ, ಪ್ರೋ,ಪಿ,ಬಿ,ಬಡಿಗೇರ, ಬಿಇಒ ಅಶೋಕ ಬಸನ್ನವರ, ಕನ್ನಡ ಸಾಹಿತ್ಯ ಪರಿಷತ್ ತಾ, ಅಧ್ಯಕ್ಷ ಸಂತೋಷ ತಳಕೇರಿ, ಜಿ,ಜಿ,ಹೈಸ್ಕೂಲ್ ಉಪಪ್ರಾಚಾರ್ಯ ಮಾಂತೇಶ ನರಗೊಂಡ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೇಲ್ಲಿಕೆರಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.  

ಪೋಟೋ : ಜಮಖಂಡಿ ನಗರದ ಜಿ,ಜಿ,ಹೈಸ್ಕೂಲ್ ಶಾಲೆಯಲ್ಲಿ ನಡೆದ ಹಸ್ತಪ್ರತಿಶಾಸ್ತ್ರ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ. ಡಾ,ಡಿ,ಎಲ್, ನರಂಸಿಹಚಾರ್ಯ ದತ್ತಿನಿಧಿ ಅಂಗವಾಗಿ ಹಳೆಕನ್ನಡ ಸಾಹಿತ್ಯ ಬೋದನಾ ತರಬೇತಿ ಶಿಬಿರ 19 ಕಾರ್ಯಕ್ರಮ ಜರುಗಿತು, 


ಸುದ್ದಿ ಓದಿ