ಜಮಖಂಡಿ

ಮಲ್ಲಿಕಾರ್ಜುನ ದೇವಸ್ಥಾನ ಮೂರ್ತಿ ಪ್ರತಿಷ್ಟಾಪನೆ

ಮಲ್ಲಿಕಾರ್ಜುನ ದೇವಸ್ಥಾನ ಮೂರ್ತಿ ಪ್ರತಿಷ್ಟಾಪನೆ

ಮಲ್ಲಿಕಾರ್ಜುನ ದೇವಸ್ಥಾನ ಮೂರ್ತಿ ಪ್ರತಿಷ್ಟಾಪನೆ  

ಜಮಖಂಡಿ 12: ಪಾರ್ವತಿ, ಪರಮೇಶ್ವರ ಅರ್ಜುನ ವೃಕ್ಷದಲ್ಲಿ ನಿತ್ಯ ನಿವಾಸ ಮಾಡುದಿದ್ದರು. ಮಲಿಗೆ ಬಳಿಯ ರೂಪ ತಾಳಿದ ಪಾರ್ವತಿ, ಅರ್ಜುನ ವೃಕ್ಷದಲ್ಲಿ ಪರಮೇಶ್ವರ ರೂಪ ತಾಳಿದರು. ಎರಡು ಸ್ವರೂಪವಾಗಿದವರು ಶ್ರೀಶೈಲ್‌ದಲ್ಲಿ ಲಿಂಗರೂಪದಲ್ಲಿ ಕಾಣಿಸಿಕೊಂಡ ಅವರು ಮಲ್ಲಿಕಾರ್ಜುನ ಶಿವಾಲಯವಾಯಿತು ಎಂದು ಗ್ರಂಥದಲ್ಲಿ ಉಲ್ಲೇಖವಾಗಿದೆ ಎಂದು ಶ್ರೀಶೈಲ್ ಪೀಠದ 1008 ಡಾ,ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. 

ತಾಲೂಕಿನ ಇನಾಂ ಹಂಚಿನಾಳ (ಪು.ಕೇ) ಗ್ರಾಮದಲ್ಲಿ ನಡೆದ ಮಲ್ಲಿಕಾರ್ಜುನ ದೇವಸ್ಥಾನ ಲೋಕಾರೆ​‍್ಣ, ಮೂರ್ತಿ ಪ್ರಾಣ ಪ್ರತಿಷ್ಠಾನ, ಕಳಸಾರೋಹನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಮೂರ್ತಿ ಪ್ರತಿಷ್ಟಾಪನೆ ಮಾಡಿದು ಪರಿಪೂರ್ಣವಾಗಿದೆ. ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಲ್ಲಿ ಬಹುಕಡೆಗಳಲ್ಲಿ ಭಕ್ತರು ಇದ್ದಾರೆ. ಜೊರ್ತಿಲಿಂಗ ಹೇಗೆ ಉದ್ಬವವಾಗಿದೆ ಎಂಬುವದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ.  

ಶಿವ, ಪಾರ್ವತಿಯರಿಗೆ ಇಬ್ಬರು ಮಕ್ಕಳು ಇರುತ್ತಾರೆ. ಅವರಿಗೆ ಶಿವನ ಪರಿವಾರ ಬೆಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಭೂ ಮಂಡಲ ಪ್ರದಕ್ಷಿಣೆ ಯಾರು ಮಾಡುತ್ತಾರೆ ಅವರ ಮೊದಲು ಮದುವೆ ಮಾಡಲಾಗುತ್ತದೆ. ಷಣ್ಮುಖ ನವಿಲಿನ ಮೇಲೆ ಹೋಗುತ್ತಾನೆ. ಗಣಪತಿ ಹೋಗಬೇಕಾದರೆ ಇಲಿಯ ಮೇಲೆ ಹೋಗಬೇಕಾದ ಪರಿಸ್ಥಿತಿ ಎದ್ದುರಾಗುತ್ತದೆ. ಶಿವ, ಪಾರ್ವತಿ ಅವರಿಗೆ ಮೂರು ಪ್ರದಕ್ಷಿಣೆ ಮಾಡುತ್ತಾನೆ. ಪ್ರತಿಯೊಬ್ಬ ಮನುಷ್ಯನಿಗೆ ಭೂಮಿಯನ್ನು ತೊರಿಸಿದ್ದವರೆ ತಂದೆ, ತಾಯಿಯವರು ಎಂದು ಪ್ರದಕ್ಷಣೆ ಹಾಕುತ್ತಾನೆ. ಆವಾಗ ಗಣಪತಿಗೆ ರಿದಿ, ಸಿದ್ದಿ ಎಂದು ಇಬ್ಬರನ್ನು ಮದುವೆಯಾಗುತ್ತಾನೆ. ಅವನಿಗೆ ಇಬ್ಬರು ಮಕ್ಕಳು ಶುಭ, ಲಾಭ ಮಕ್ಕಳು ಹುಟ್ಟುತ್ತಾರೆ. ಕೈಲಾಸ ಬಿಟ್ಟು ಕ್ರವಂಚ ಪರ್ವತಕ್ಕೆ ಷಣ್ಮುಖ ಬರುತ್ತಾನೆ. ಶಿವ, ಪಾರ್ವತಿ ಕ್ರವಂಚ ಪರ್ವತಕ್ಕೆ ಬರುತ್ತಾರೆ. ಅಲ್ಲಿ  ಷಣ್ಮುಖನು ಇರುವದಿಲ್ಲ. ಪಾರ್ವತಿ, ಪರಮೇಶ್ವರರು ಉಳಿಯುತ್ತಾರೆ ಅವರೆ ಇವಾಗ ಲಿಂಗವಾಗಿ ನಿರ್ಮಾಣವಾಗುತ್ತಾರೆ. ಅದುವೆ ಮಲ್ಲಿಕಾರ್ಜುನ ಶಿವಾಲಯವಾಯಿತು ಎಂದು ಗ್ರಂಥದಲ್ಲಿ ಉಲ್ಲೇಖವಾಗಿದೆ ಎಂದರು. 

ಪ್ರತಿಯೊಬ್ಬರು ವೃಕ್ಷಗಳನ್ನು ಉಳಿಸಿ, ಬೆಳಸಬೇಕು, ಹತ್ತು ಬೊರವೇಲ್ ಇಂದರು ಸಹ ಒಂದು ಬಾವಿಗೆ ಸಮಾನ, ಹತ್ತು ಕರೆ ಕಟ್ಟಿಸುವದು ಒಬ್ಬ ಉತ್ತಮ ಮಗುವಿಗೆ ಸಮಾನ, ಹತ್ತು ಉತ್ತಮ ಮಕ್ಕಳಿಗೆ ಜನ್ಮ ನೀಡುವದಕ್ಕೆ ಒಂದು ಮರಕ್ಕೆ ಸಮಾವಾಗಿದೆ. ಅದಕ್ಕಾಗಿ ಮರಗಳನ್ನು ಉಳಿಸಬೇಕು. ಬೆಳಸಬೇಕು. ಪ್ರತಿಯೊಬ್ಬರೂ ತಮ್ಮ ಮನೆಗಳ ಅಂಗಳದಲ್ಲಿ ವೃಕ್ಷಗಳ ನಡೆವುದು ಎಲ್ಲರೂ ಸಂಕಲ್ಪ ಮಾಡಬೇಕು. ಇದರಿಂದ ಪರಿಸರ ಪ್ರಕೃತಿ ಉಳಿಸಿ, ಬೆಳಸಬೇಕು, ಸಾಕಷ್ಟು ಅಭಿವೃದ್ಧಿ ಹೊಂದಿದವರು ಶ್ರೀಶೈಲ ಪೀಠಕ್ಮೆ ಪಾದಯಾತ್ರೆ ಮೂಲಕ ಬರುತ್ತಾರೆ. ಶ್ರೀಶೈಲ ಪೀಠಕ್ಕೆ ಬರುವ ಭಕ್ತರಿಗಾಗಿ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಆರ್ಶೀವಚನ ನೀಡಿದರು. 

ಕೊಣ್ಣೂರ ಹೊರಗಿನಮಠದ ವಿಶ್ವಪ್ರಭು ಶಿವಾಚಾರ್ಯ ಮಾತನಾಡಿ, ಮಲ್ಲಯ್ಯ ಎಂದರೆ ದೇವರು ಇರುವ ನಮ್ಮ ರಾಷ್ಟ್ರವಾಗಿದೆ. ಎಲ್ಲ ಊರುಗಳಲ್ಲಿ ಮಲ್ಲಯ್ಯ ಮತ್ತು ಹನುಮಂತನ ದೇವಸ್ಥಾನಗಳು ಇವೆ. ದೇವರು ಹೇಗೆ ಒಲಿಯುತ್ತಾನೆ ಎಂದರೆ ಹಣದಿಂದ ಮತ್ತು ಅಂಹಕಾರದಿಂದ ಒಳಿಯುವುದಿಲ್ಲ. ಭಕ್ತಿಭಾವದಿಂದ ದೇವರು ಒಲಿಯುತ್ತಾನೆ. ದೇವರು ಒಲಿಯಬೇಕಾಗದರೆ ಮನಸು ಸ್ಪೂರ್ತಿಯಿಂದ ಮಲ್ಲಯ್ಯನ ಜ್ಞಾನ ಮಾಡಿದರೆ ನಿಮಗೆ ಒಳಿತು ಆಗುತ್ತದೆ ಎಂದರು. ಸಾಕ್ಷತ ನಡೆದಾಡುವ ದೇವರು ಮಲ್ಲಯ್ಯ ದೇವರು ಆಗಿದ್ದಾರೆ. ದೇವರ ಮೇಲೆ ನಂಬಿಕೆಯಿರಬೇಕು ಎಂದರು. 

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ದೇವಸ್ಥಾನ ಆಗಬೇಕಾದರೆ ಗುರುವಿನ ಕರುಣಿ. ಆರ್ಶೀವಾದ ಇದ್ದರೆ ಮಾತ್ರ ದೇವಸ್ಥಾನ ನಿರ್ಮಾಣವಾಗುತ್ತದೆ. ನೋವು, ಕಷ್ಟಗಳು ನಿವಾರಣೆಗಳು ಆಗುತ್ತವೆ. ಜಮಖಂಡಿಯ ಸಮೀಪ ಹಿಪ್ಪರಗಿ ಗ್ರಾಮದ ಜಗದ್ಗುರು ಗುರುಗಳು ಶ್ರೀಶೈಲ ಪೀಠದ ಶ್ರೀಗಳು ಇರುವದು ನಮ್ಮ ಭಾಗದ ಭಕ್ತರ ಪುಣ್ಯ. ಶ್ರೀಶೈಲ ಪೀಠದವರಗೆ ಗಿಡ ಮರಗಳನ್ನು ನಡೆಯುವ ಕಾರ್ಯಕ್ರಮವನ್ನು ಮಾಡಿ. 10 ಎಕ್ಕರೆ ಜಮೀನು ಸರಕಾರದಿಂದ ಮಂಜೂರಾತಿ ಪಡೆದು 5ನೂರು ಭಕ್ತರಿಗೆ ವಸತಿ ನಿಲಯಗಳ ನಿರ್ಮಾಣ ಮಾಡುತ್ತಿದ್ದಾರೆ. ಕಂಬಿ ಮಂಟಪ, ಭವನ,  ಆರೋಗ್ಯ ಭವನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಭಕ್ತರಿಗೆ ಅನುಕೂಲತೆಗಾಗಿ ಸೇವೆಯನ್ನು ಗೈದಿದ್ದಾರೆ ಎಂದರು. 

21,50 ಲಕ್ಷ ರೂ, ಯುಕೆಪಿ.ಯಿಂದ 10 ಲಕ್ಷ ಮುಜರಾಯಿ ಇಲಾಖೆಯಿಂದ ಪಡೆದು. 8.50.ಲಕ್ಷ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಹಣವನ್ನು ಪಡೆದುಕೊಂಡು ಇಂದು ಈ ಭಾಗದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣವಾಗಬೇಕಾದರೆ ಶ್ರೀಶೈಲ ಜಗದ್ಗುರುಗಳ ಆರ್ಶೀವಾದದಿಂದ ಸುಂದರವಾದ ದೇವಸ್ಥಾನವಾಗಿದೆ. ನಾನು ದೇವಸ್ಥಾನ ನಿರ್ಮಾಣಕ್ಕೆ 30, ಲಕ್ಷ ರೂ,ಗಳ ಬಗ್ಗೆ ಮಲ್ಲಯ್ಯನಲ್ಲಿ ಸಂಕಲ್ಪ ಮಾಡಿದೆ. ಮಲ್ಲಯ್ಯನ ಸಂಕಲ್ಪ ಮಾಡಿದರೆ ಎಲ್ಲವೂ ಈಡೇರಿಸುವ ಕೆಲಸ ಮಾಡುತ್ತಾನೆ ಎಂಬುವದಕ್ಕೆ ಸಾಕ್ಷಿಯಾಗಿ ನಿಮ್ಮಗೆ ಮಲ್ಲಯ್ಯನ ದೇವಸ್ಥಾನ ನಿರ್ಮಾಣಕ್ಕೆ ಹಣ ಸಂಗ್ರಹವಾಗಿತ್ತು.  ಪ್ರತಿ ದಿನದ ಪೂಜಾ ಕಂಕರೈರೆಗಳು ನಡೆಯಬೇಕು. ಇಲ್ಲಿರುವ ಮೂಲಭೂತ ಸೌಲಭ್ಯಗಳು ರಸ್ತೆಗಳು, ಗಟಾರಗಳು ದುರಸ್ಥಿತಿಗೆ ಬಗ್ಗೆ ಸರಕಾರಕ್ಕೆ ವರದಿಯನ್ನು ಸಲಿಸಲಾಗಿದೆ ಬರುವ ದಿನಗಳಲ್ಲಿ ಎಲ್ಲ ಕೆಲಸಗಳನ್ನು ಮಾಡಲಾಗುತ್ತದೆ ಎಂದರು. 

ಹುಲ್ಯಾಳ ಹರ್ಷಾನಂದ ಶ್ರೀಗಳು ಮಾತನಾಡಿ, ಯಾವುದು ನಮ್ಮ ಜೊತೆಗೆ ಬರುವುದಿಲ್ಲ ಅದಕ್ಕಾಗಿ ಬಡಿದಾಟ ಮಾಡುತ್ತೆವೆ. ಯಾವುದೇ ಬರುತ್ತದೆ ಅದಕ್ಕಾಗಿ ಬಡಿದಾಡುವುದಿಲ್ಲ. ಮನೆ, ಆಸ್ತಿ ಪಾಸ್ತಿಗಳು, ಹೊಲಗದ್ದೆಗಳಿಗಾಗಿ, ಹಣ, ಅಂತಸ್ತಿನ ಬಗ್ಗೆ ಬಡಿದಾಡುತ್ತೇವೆ ಆದರೆ ಅವುಗಳು ಯಾವುದು ನಮ್ಮ ಜೊತೆಗೆ ಬರುದಿಲ್ಲ. ಎರಡು ಮಾತ್ರ ನಮ್ಮ ಜೊತೆ ಬರುತ್ತವೆ ಧರ್ಮ, ಕೀರ್ತಿ ಮಾತ್ರ ನಮ್ಮ ಜೊತೆ ಬರುತ್ತವೆ. ಭಗವಂತ ಸ್ಮರಣೆ ಮಾಡಬೇಕು. ಮನೆಯಲ್ಲಿ ಗುರುಗಳು ಬರುತ್ತಾ ಇರುಬೇಕು. ದೇವರ ಸ್ಮರಣೆ ಯಾರು ಮಾಡುತ್ತಾರೆ ಅವರಲ್ಲಿ ದೇವರು ಇರುತ್ತಾನೆ. ಸೂರ್ಯ ಎಲ್ಲರಿಗೂ ಬೆಳಕನ್ನು ನೀಡುತ್ತಾನೆ. ಸೂರ್ಯನು ಒಬ್ಬರಿಗೆ ಮಾತ್ರ ಸೀಮಿವಾಗಿಲ್ಲ. ಎಲ್ಲರಿಗೂ ಬೆಳಕು ನೀಡುತ್ತಾನೆ ಹಾಗೆ ದೇವರು ಎಲ್ಲರನ್ನೂ ಕಾಪಾಡುತ್ತಾನೆ. ಅದಕ್ಕಾಗಿ ದೇವರ ಸ್ಮರಣೆ ಮಾಡಬೇಕು. ಮಲ್ಲಯ್ಯನ ನಾಮಸ್ಮರಣಿ ಮಾಡಿದರೆ ಮಾತ್ರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಮಲ್ಲಯ್ಯನ ನಾಮ ಸಂಕಲ್ಪ ಮಾಡಬೇಕು.ಬೇಡಿದವರಿಗೆ ಬೇಡಿದನ್ನು ನೀಡುವ ಶಕ್ತಿ ಇದೆ. ಇಂದಿನ ಯುವಕರು. ಮಹಿಳೆಯರು ಮೊಬೈಲ್‌ನಲ್ಲಿ ರೀಲ್ಸ್‌ ಮಾಡಿದನ್ನು ನೋಡುವದನ್ನು ಬಿಟ್ಟು.  ಭಕ್ತಿ, ಭಾವದಿಂದ ದೇವರ ನಾಮ ಸ್ಮರಣೆ ಮಾಡಿದರೆ ಮಾತ್ರ ಎಲ್ಲ ಕಷ್ಟಗಳು ನಿವಾರಣೆ ಆಗಲು ಸಾಧ್ಯ ಎಂದು ಆರ್ಶೀವಚನ ನೀಡಿದರು. 

ಮುತ್ತಿನಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ದೇವಸ್ಥಾನ ಪರಿಪೂರ್ಣವಾಗಬೇಕಾದರೆ ಕಳಸಾರೋಹನ ಮಾಡಿದರೆ ಮಾತ್ರ ದೇವಸ್ಥಾನ ಪರಿಪೂರ್ಣವಾಗುತ್ತದೆ. ಜೀವನದಲ್ಲಿ ಮೂರು ತತ್ವಗಳನ್ನು ಅಳವಡಿಕೊಳ್ಳಬೇಕಾದರೆ ದೇವರು, ಧರ್ಮ, ಗುರುಗಳು ನಮ್ಮ ಜೊತೆಯಲ್ಲಿ ಇದ್ದರೆ ಮಾತ್ರ ದೇವರು ನಮ್ಮ ಮೇಲೆ ಇರುತ್ತಾರೆ. ಧರ್ಮವನ್ನು ಭಕ್ತಿಯಿಂದ ಆಚರಣೆ ಮಾಡಬೇಕೆಂದು. ಗುರುಗಳನ್ನು ಸಹ ಭಕ್ತಭಾವದಿಂದ ನಡೆದುಕೊಂಡು ಹೋದರೆ ಬದಕು ಸಾರ್ಥಕತೆಯಾಗುತ್ತದೆ ಆರ್ಶೀವಚನ ನೀಡಿದರು. 

ವೇದಿಕೆಯಲ್ಲಿ ಅನೇಕ ಮಠಾಧೀಶರುಗಳು ಹಾಗೂ ಗ್ರಾಮ ಪ್ರಮುಖರು ಸೇರಿದಂತೆ ಅನೇಕರು ಇದ್ದರು. 

, 



ಸುದ್ದಿ ಓದಿ