ಜಮಖಂಡಿ

ಮಲ್ಲಿಕಾರ್ಜುನ ದೇವಸ್ಥಾನ ಲೋಕಾರೆ​‍್ಣ, ಮೂರ್ತಿ ಪ್ರಾಣ ಪ್ರತಿಷ್ಠಾನ ಕಳಸಾರೋಹನದ ಕಾರ್ಯಕ್ರಮ

ಮಲ್ಲಿಕಾರ್ಜುನ ದೇವಸ್ಥಾನ ಲೋಕಾರೆ​‍್ಣ, ಮೂರ್ತಿ ಪ್ರಾಣ ಪ್ರತಿಷ್ಠಾನ ಕಳಸಾರೋಹನದ ಕಾರ್ಯಕ್ರಮ

ಮಲ್ಲಿಕಾರ್ಜುನ ದೇವಸ್ಥಾನ ಲೋಕಾರೆ​‍್ಣ, ಮೂರ್ತಿ ಪ್ರಾಣ ಪ್ರತಿಷ್ಠಾನ ಕಳಸಾರೋಹನದ ಕಾರ್ಯಕ್ರಮ 

ಜಮಖಂಡಿ  13 : ಪರಮೇಶ್ವರ ಅರ್ಜುನ ವೃಕ್ಷದಲ್ಲಿ ರೂಪ ತಾಳಿ. ಪಾರ್ವತಿಯು ಮಲಿಗೆ ಬಳಿಯ ರೂಪ ತಾಳಿ ನಂತರ ಲಿಂಗರೂಪದಲ್ಲಿ ಕಾಣಿಸಿಕೊಂಡ ಪರಮೇಶ್ವರ ಮಲ್ಲಿಕಾರ್ಜುನನಾಗಿ ಹುಟ್ಟಿದನ್ನು ಎಂದು ಶ್ರೀಶೈಲ್ ಪೀಠದ 1008 ಡಾ,ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು. 

ತಾಲೂಕಿನ ಇನಾಂ ಹಂಚಿನಾಳ (ಪು.ಕೇ) ಗ್ರಾಮದಲ್ಲಿ ನಡೆದ ಮಲ್ಲಿಕಾರ್ಜುನ ದೇವಸ್ಥಾನ ಲೋಕಾರೆ​‍್ಣ, ಮೂರ್ತಿ ಪ್ರಾಣ ಪ್ರತಿಷ್ಠಾನ, ಕಳಸಾರೋಹನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಮೂರ್ತಿ ಪ್ರತಿಷ್ಟಾಪನೆ ಮಾಡಿದು ಪರಿಪೂರ್ಣವಾಗಿದೆ. ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನ ಕುರಿತು ಗ್ರಂಥದಲ್ಲಿ ಉಲ್ಲೇಖವಾಗಿದೆ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಲ್ಲಿ ಬಹುಕಡೆಗಳಿಂದ ಭಕ್ತರು ಬರುತ್ತಿದ್ದಾರೆ. ಜೊರ್ತಿಲಿಂಗ ಹೇಗೆ ಉದ್ಬವವಾಗಿದೆ ಎಂಬುವದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ..ಪ್ರತಿಯೊಬ್ಬರು ವೃಕ್ಷಗಳನ್ನು ಉಳಿಸಿ, ಬೆಳಸಬೇಕೆಂದು ಸಂಕಲ್ಪ ಮಾಡಬೇಕು. ಇದರಿಂದ ಪರಿಸರ, ಪ್ರಕೃತಿಯನ್ನು ಉಳಿಸಿ, ಬೆಳಸಬೇಕಾಗಿದೆ ಎಂದು ಆರ್ಶೀವಚನ ನೀಡಿದರು. 

ಕೊಣ್ಣೂರ ಹೊರಗಿನಮಠದ ವಿಶ್ವಪ್ರಭು ಶಿವಾಚಾರ್ಯ ಮಾತನಾಡಿ, ಮಲ್ಲಯ್ಯ ಎಂದರೆ ದೇವರು, ದೇವರುಗಳು ಇರುವ ನಮ್ಮ ರಾಷ್ಟ್ರವಾಗಿದೆ. ಎಲ್ಲ ಊರುಗಳಲ್ಲಿ ಮಲ್ಲಯ್ಯ ಮತ್ತು ಹನುಮಂತನ ದೇವಸ್ಥಾನಗಳು ಇವೆ. ದೇವರು ಹೇಗೆ ಒಲಿಯುತ್ತಾನೆ ಎಂದರೆ ಹಣದಿಂದ ಮತ್ತು ಅಂಹಕಾರದಿಂದ ಒಳಿಯುವುದಿಲ್ಲ. ಭಕ್ತಿಭಾವದಿಂದ ದೇವರು ಒಲಿಯುತ್ತಾನೆ ಎಂದರು. 

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ದೇವಸ್ಥಾನ ಆಗಬೇಕಾದರೆ ಗುರುವಿನ ಕರುಣಿ. ಆರ್ಶೀವಾದ ಇದ್ದರೆ ಮಾತ್ರ ದೇವಸ್ಥಾನ ನಿರ್ಮಾಣವಾಗುತ್ತದೆ. ನೋವು, ಕಷ್ಟಗಳು ನಿವಾರಣೆಗಳು ಆಗುತ್ತವೆ.ಈ ದೇವಸ್ಥಾನ ನಿರ್ಮಾಣಕ್ಕೆ 21,50 ಲಕ್ಷ ರೂ, ಯುಕೆಪಿ.ಯಿಂದ 10 ಲಕ್ಷ ಮುಜರಾಯಿ ಇಲಾಖೆಯಿಂದ ಪಡೆದು. 8.50.ಲಕ್ಷ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಹಣವನ್ನು ಪಡೆದುಕೊಂಡು ಇಂದು ಈ ಭಾಗದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣವಾಗಿದೆ ಎಂದರು. 

ಹುಲ್ಯಾಳ ಹರ್ಷಾನಂದ ಶ್ರೀಗಳು ಮಾತನಾಡಿ, ಯಾವುದು ನಮ್ಮ ಜೊತೆಗೆ ಬರುವುದಿಲ್ಲ ಅದಕ್ಕಾಗಿ ಬಡಿದಾಟ ಮಾಡುತ್ತೆವೆ. ಯಾವುದೇ ಬರುತ್ತದೆ ಅದಕ್ಕಾಗಿ ಬಡಿದಾಡುವುದಿಲ್ಲ. ಮಲ್ಲಯ್ಯನ ನಾಮಸ್ಮರಣಿ ಮಾಡಿದರೆ ಮಾತ್ರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಮಲ್ಲಯ್ಯನ ನಾಮ ಸಂಕಲ್ಪ ಮಾಡಬೇಕು.ಬೇಡಿದವರಿಗೆ ಬೇಡಿದನ್ನು ನೀಡುವ ಶಕ್ತಿ ಇದೆ ಎಂದರು. 

ಮುತ್ತಿನಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ದೇವಸ್ಥಾನ ಪರಿಪೂರ್ಣವಾಗಬೇಕಾದರೆ ಕಳಸಾರೋಹನ ಮಾಡಿದರೆ ಮಾತ್ರ ದೇವಸ್ಥಾನ ಪರಿಪೂರ್ಣವಾಗುತ್ತದೆ. ಜೀವನದಲ್ಲಿ ಮೂರು ತತ್ವಗಳನ್ನು ಅಳವಡಿಕೊಳ್ಳಬೇಕಾದರೆ ದೇವರು, ಧರ್ಮ, ಗುರುಗಳು ನಮ್ಮ ಜೊತೆಯಲ್ಲಿ ಇದ್ದರೆ ಮಾತ್ರ ದೇವರು ನಮ್ಮ ಮೇಲೆ ಇರುತ್ತಾನೆ ಎಂದರು.  

ವೇದಿಕೆಯಲ್ಲಿ ಅನೇಕ ಮಠಾಧೀಶರುಗಳು ಹಾಗೂ ಗ್ರಾಮ ಪ್ರಮುಖರು ಸೇರಿದಂತೆ ಅನೇಕರು ಇದ್ದರು. 

ಜಮಖಂಡಿ  ತಾಲೂಕಿನ ಇನಾಂ ಹಂಚಿನಾಳ ಪು.ಕೇ ಗ್ರಾಮದಲ್ಲಿ ನಡೆದ ಮಲ್ಲಿಕಾರ್ಜುನ ದೇವಸ್ಥಾನ ಲೋಕಾರೆ​‍್ಣ, ಮೂರ್ತಿ ಪ್ರಾಣ ಪ್ರತಿಷ್ಠಾನ ಕಳಸಾರೋಹನದ ಕಾರ್ಯಕ್ರಮವನ್ನು ಶ್ರೀಶೈಲ್ ಪೀಠದ 1008 ಡಾ,ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು, 


ಸುದ್ದಿ ಓದಿ