ಜಮಖಂಡಿ

ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಅಧಿಕಾರಿಗಳ ದಾಳಿ

ಪಡಿತರ ಅಕ್ಕಿ  ಅಕ್ರಮ ಸಂಗ್ರಹ: ಅಧಿಕಾರಿಗಳ ದಾಳಿ

ಪಡಿತರ ಅಕ್ಕಿ  ಅಕ್ರಮ ಸಂಗ್ರಹ: ಅಧಿಕಾರಿಗಳ ದಾಳಿ 

ಜಮಖಂಡಿ  11 :ತಾಲೂಕಿನ ಕುಂಚನೂರ ಗ್ರಾಮದ ತೋಟದಲ್ಲಿ ಸರಕಾರ ವಿವಿಧ ಯೋಜನೆಯಲ್ಲಿ ಹಂಚಿಕೆಯಾದ ಪಡಿತರ ಚೀಟಿಯ ಅಕ್ಕಿಯು ಸುಮಾರು 6720 ಕೆಜಿ ಅಕ್ರಮವಾಗಿ ಸಂಗ್ರಹಿಸಿದ ಶೆಡ್ಡ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಕುಂಚನೂರ ಗ್ರಾಮದ ಸರ್ವೇ ನಂ.115/6 ರಲ್ಲಿ ಪ್ರಕಾಶ ಲಕ್ಷ್ಮಣ ಮೋರೆ.ಪ್ರವೀಣ ಲಕ್ಷ್ಮಣ ಮೋರೆ ಅವರ ಜಮೀನಿನಲ್ಲಿ 50 ಕೆಜಿ ತೂಕದ 134 ಗೋಣಿ ಚೀಲಗಳು ಇದ್ದು. ಒಟ್ಟು ತೂಕ 6720 ಕೆಜಿ. ಪ್ರತಿ ಕೆಜಿಗೆ ಸುಮಾರು ರೂ.34.60 ರಂತೆ.ರೂ. 2.32.512 ಕಿಮ್ಮತ್ತಿನ ಅಕ್ಕಿಯನ್ನು ಸಾವಳಗಿ ಗ್ರಾಮದ ರಾಮು ಅಶೋಕ ತೋರತ್ ಅವರ ಪಿಕಪ್ ವಾಹನದಲ್ಲಿ  ಲೋಡ ಮಾಡಿ. ಸಂಗ್ರಹಿಸಿದ ಶೆಡ್ಡ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ.ಆರೋಪಿತನಾದ ಜಮಖಂಡಿಯ ಮುನ್ನಾ ಕುಡಚಿ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಹಂಚಿಕೆಯಾದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ತೆಗೆದುಕೊಂಡು. ಹೊರ ರಾಜ್ಯಗಳಿಗೆ ಹೆಚ್ಚಿನ ಬೆಲೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಅಕ್ಕಿಯನ್ನು ಸಂಗ್ರಹಿಸಿ ಕೋಳಿ ಪಾರ್ಮ ಶೆಡ್ಡಿನಲ್ಲಿ ಇಡಲಾಗಿದೆಂದು ಖಚಿತ ಮಾಹಿತಿ ಮೇರೆಗೆ ಆಹಾರ ನೀರೀಕ್ಷಕ ಆನಂದ ರೇವು ರಾಠೋಡ ಹಾಗೂ ಪೋಲಿಸ್ ಪದೆಗಳಾದ. ಎಸ್‌.ಬಿ.ಸನಗೌಡರ.ಎಸ್‌.ಬಿ.ಬಿರಾದಾರ ದಾಳಿ ನಡೆಸಿ.ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿಯನ್ನು ಹಾಗೂ ಪಿಕಪ್ ವಾಹನ ವಶಕ್ಕೆಪಡೆದುಕೊಂಡಿದ್ದಾರೆಂದು ಮಾಹಿತಿ ತಿಳಿಸಿದ್ದಾರೆ.ಈ ಕುರಿತು ಗ್ರಾಮೀಣ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.ಪೋಟೋ : ಜಮಖಂಡಿ ತಾಲ್ಲೂಕಿನ ಕುಂಚನೂರ ಗ್ರಾಮದ ಕೋಳಿ ಪಾರ್ಮನಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿದ ಶೆಡ್ಡ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 


ಸುದ್ದಿ ಓದಿ