ಉಪವಿಭಾಗ ಸಹಾಯಕ ಕಾರ್ಯರ್ನಿಹಕ ಎಂಜಿನಿಯರ್ ಮೇಲೆ ದೂರು
ಉಪವಿಭಾಗ ಸಹಾಯಕ ಕಾರ್ಯರ್ನಿಹಕ ಎಂಜಿನಿಯರ್ ಮೇಲೆ ದೂರು
ಜಮಖಂಡಿ28; ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ ಫೂಲ್ಸಿಂಗ್ ಚವ್ಹಾಣ ಅವರಿಂದ ರೂ,2 ಕೋಟಿ ಸುಲಿಗೆ ನಡೆಸಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅಣ್ಣ ಗೋಪಾಲ ಜೋಶಿ ಜೊತೆಗೆ 4ನೇ ಆರೋಪಿ ಜಮಖಂಡಿ ಜಿಲ್ಲಾ ಪಂಚಾಯತ ಉಪವಿಭಾಗ ಸಹಾಯಕ ಕಾರ್ಯರ್ನಿಹಕ ಎಂಜಿನಿಯರ್ ಸೋಮಶೇಖರ್ ನಾಯಕ ಭಾಗಿಯಾಗಿದ್ದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದ. ಹಿನ್ನಲೆ ಜಿಪಂ ಸಿಇಒ ಶಶಿಧರ ಕುರೇರ ಸೇವೆಯಿಂದ ಅಮಾನತು ಮಾಡಬೇಕೆಂದು ಸರಕಾರಕ್ಕೆ ಶಿಪಾರಸು ಮಾಡಿದ್ದಾರೆ.ದೇವಾನಂದ ಚವ್ಹಾಣ ಗೋಪಾಲ ಜೋಶಿ ಹುಬ್ಬಳ್ಳಿಯ ನಿವಾಸದಲ್ಲಿ ಭೇಟಿ ಮಾಡಿದ್ದರು. ಎಂಜಿನಿಯರ್ ಸೋಮಶೇಖರ ನಾಯಕ ಭೇಟಿ ಮಾಡಿಸಿದ್ದರು. ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ ಜೋಶಿ ವರ್ಚಸ್ಸು ಚೆನ್ನಾಗಿದ್ದು ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟೆಕೆಟ್ ಕೊಡಿಸುವುದಾಗಿ ಗೋಪಾಲ ಜೋಶಿ ಆಮಿಷವೊಡ್ಡಿದ್ದರು. ಇದಕ್ಕಾಗಿ ರೂ,5 ಕೋಟಿ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಿದ್ದರು. ಅಷ್ಟು ಹಣವಿಲ್ಲ ಎಂದಾಗ ಸದ್ಯಕ್ಕೆ ರೂ,25 ಲಕ್ಷ ಕೊಡುವಂತೆ ತಿಳಿಸಿದ್ದರು. ಆ ಹಣವನ್ನು ಗೋಪಾಲ ಜೋಶಿ ಸೂಚಿಸಿದ ವಿಜಯಕುಮಾರಿ ಮನೆಗೆ ತಲುಪಿಸಲಾಗಿತ್ತು. ಅಲ್ಲದೇ ರೂ,5 ಕೋಟಿ ಮೌಲ್ಯ ನಮೂದಿಸಿದ್ದ ಚೆಕ್ ಸಹ ಪಡೆದುಕೊಂಡಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ದೇವಾನಂದ ಚವ್ಹಾಣ ಪತ್ನಿ ಸುನಿತಾ ಚವ್ಹಾಣ ದೂರು ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಜಿಪಂ ಸಿಇಓ ಶಶಿಧರ ಕುರೇರ ಜಿಲ್ಲಾ ಪಂಚಾಯತ ಉಪವಿಭಾಗ ಸಹಾಯಕ ಕಾರ್ಯರ್ನಿಹಕ ಎಂಜಿನಿಯರ್ ಸೋಮಶೇಖರ ನಾಯಕ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.ಜಮಖಂಡಿ ಜಿಲ್ಲಾ ಪಂಚಾಯತ ಉಪವಿಭಾಗ ಸಹಾಯಕ ಕಾರ್ಯರ್ನಿಹಕ ಎಂಜಿನಿಯರ್ ಸೋಮಶೇಖರ ನಾಯಕ ಈ ಹಿಂದೆ ಮೇ ತಿಂಗಳ ಲೋಕಸಭೆ ಚುಣಾವಣೆ ನೀತಿಸಂಹಿತೆಯಲ್ಲಿ ಕಚೇರಿ ಸಮಯದಲ್ಲಿ ಸರಕಾರ ಪ್ರವಾಸಿ ಮಂದಿರ ರಮಾ ನಿವಾಸದಲ್ಲಿ (ಐಬಿ)ಯಲ್ಲಿ ಎಣ್ಣಿ ಪಾರ್ಟಿ ಮಾಡಿ. ದುರುಪಯೋಗ ಮಾಡಿಕೊಂಡು ಸಾರಾಯಿಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತು.್ತ ಅಂದಿನ ಚುಣಾವಣಾಧಿಕಾರಿಗಳು ಅಮಾನತ್ತು ಮಾಡಿದ್ದರು.ಇವಾಗ ಮತ್ತೇ ಲೋಕಸಭೆಗೆ ಟಿಕೇಟ್ ಕೊಡಿಸುವ ಭರವಸೆ ನೀಡಿದ ಗೋಪಾಲ ಜೋಶಿ ಪರವಾಗಿ ದೂರುದಾರರ ಮನವೊಲಿಸಿ ಹಣಕೊಡಿಸುವಂತೆ ಮಾಡಿರುವ ಆರೋಪದಡ್ಡಿ ಪೋಲಿಸರು ಬಂಧಿಸಿದ್ದಾರೆ.