ಭಕ್ತ ಕನಕದಾಸರ 537 ನೇ ಜಯಂತ್ಯೋತ್ಸವ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಭಕ್ತ ಕನಕದಾಸರ 537 ನೇ ಜಯಂತ್ಯೋತ್ಸವ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಜಮಖಂಡಿ 18 : ಭಕ್ತ ಕನಕದಾಸರು ಒಂದೆ ಜಾತಿಗೆ, ಒಂದೆ ಸಮಾಜಕ್ಕೆ ಸಿಮೀತರಲ್ಲ. ಡಾ, ಬಿ,ಆರ್, ಅಂಬೇಡ್ಕರ್ ಸಹ ಒಂದೇ ಜಾತಿಗೆ ಸಿಮೀತಲ್ಲ. ಎಲ್ಲ ಸಮಾಜಕ್ಕೆ ಬೇಕಾಗಿರುವ ಮಹಾನ ವ್ಯಕ್ತಿಗಳು. ಸಮಾಜಕ್ಕೆ, ಸ್ವಾಭಿಮಾನಕ್ಕೆ ದಕ್ಮೆ ಬಂದರೆ ಸಂಗೊಳ್ಳಿ ರಾಯಣ್ಣ ಆಗಬೇಕಾಗುತ್ತದೆ ಎಂದು ಮಾಜಿ ಜಿಪಂ,ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಹೇಳಿದರು.
ನಗರದ ಕನಕದಾಸರ ವಿದ್ಯಾವರ್ಧಕ ಶಾಲೆಯ ಆವರಣದಲ್ಲಿ ನಡೆದ ತಾಲೂಕು ಆಡಳಿತ, ತಾಲೂಕು ಪಂಚಾಯತ, ನಗರಸಭೆ, ಕುರುಬರ ಸಂಘ, ಕನಕದಾಸ ವಿದ್ಯಾವರ್ಧಕ ಸಂಘ, ಯುವ ಕುರುಬರ ಸಂಘ, ಮಹಿಳಾ ಕುರುಬರ ಸಂಘ, ಕನಕ ನೌಕರರ ಸಂಘ ಸಹಯೋಗದಲ್ಲಿ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸರ 537 ನೇ ಜಯಂತ್ಯೋತ್ಸವ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಮುಖಂಡ ಈಶ್ವರ ವಾಳನ್ನವರ ಅವರು ನಗರಸಭೆ ಅಧ್ಯಕ್ಷರಾಗಿ ಕೆಲವು ವರ್ಷಗಳ ಹಿಂದೆ ಆಗಬೇಕಾಗಿತ್ತು. ಸಮಾಜ ಮುಖಂಡರನ್ನು ಮೇಲೆಕ್ಕೆ ಎತ್ತುವ ಕೆಲಸ ಪಕ್ಷ ಮಾಡಲಿಲ್ಲ. ಸಾಕಷ್ಟು ಪಕ್ಷಕ್ಕಾಗಿ ದುಡಿದ್ದಾರೆ. ಸಮಾಜಕ್ಕೆ ಅನ್ಯಾಯವಾದರೆ ಅದರ ವಿರುದ್ಧ ಹೋರಾಟ ಮಾಡಿದರೆ ಮಾತ್ರ ನ್ಯಾಯ ದೊರೆಯುತ್ತದೆ ಎಂದರು.ಅರ್ಬನ್ ಬ್ಯಾಂಕ್ ರಾಹುಲ್ ಕಲೂತಿ ಮಾತನಾಡಿ. ಕನಕದಾಸರು ಮೊದಲು ಯೋಧರಾಗಿ ಸೇವೆ ಮಾಡಿದವರು. ಮರಳಿ ಸಂತರಾಗಿ ಸಮಾಜಕ್ಕೆ ಒಳಿತು ನೀಡುವ ಜೊತೆಗೆ ಸಮಾನತೆಗಾಗಿ ವಚನಗಳನ್ನು ಸಾರಿದರು. ಕುರುಬ ಸಮಾಜ ಒಮ್ಮೆ ಮಾತು ಕೊಟ್ಟರೆ ಮುಗಿಯಿತು. ನುಡಿದಂತೆ ನಡೆದುಕೊಳ್ಳುವ ಸಮಾಜ ಕುರುಬ ಸಮಾಜವಾಗಿದೆ. ಸಂತ ಭಕ್ತ ಕನಕದಾಸರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವನ ಸಾರ್ಥಕತೆಯಾಗುತ್ತದೆ ಎಂದರು.ಸಮಾಜ ಮುಖಂಡ ಈಶ್ವರ ವಾಳೇನ್ನವರ ಅವರು ನಗರಸಭೆ ಅಧ್ಯಕ್ಷರಾಗುತ್ತಾರೆ ಅಂದುಕೊಂಡು ಇನ್ನೇನು ಹೂ ಮಾಲೆಯನ್ನು ತೆಗೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಬೇರೆ ಆಗಿಬಿಟ್ಟಿತು. ಹೀಗಾಗಿ ಅನ್ಯಾಯವಾಗಿದೆ. ಮತ್ತು ಶ್ರೀಶೈಲ್ ದಳವಾಯಿ ಅವರಿಗೂ ಕೂಡ ಅನ್ಯಾಯವಾಗಿದೆ. ಅದರೆ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಅದಕ್ಕೆ ಕಾಲವೇ ಉತ್ತರ ನೀಡುತ್ತದೆ. ಅದರ ಜೊತೆಗೆ ಕುರಬ ಸಮಾಜವು ಕೂಡ ಉತ್ತರ ನೀಡಬೇಕಾಗಿದೆ ಎಂದರು.ಸಮಾಜ ಹಿರಿಯ ಮುಖಂಡ ನಾಗಪ್ಪ ಸನದಿ ಮಾತನಾಡಿ, ಮೋಸ, ವಂಚನೆ, ಸುಳ್ಳು ಹೇಳಬಾರದು. ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲಿಸಬೇಕು. ಶಿಕ್ಷಣ ಕಲಿತರೆ ಮಾತ್ರ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕೃಷ್ಣನ ಹೆಸರು ವಾಸಿಯಾಗಲು ಕಾರಣ ಕನಕದಾಸರಿಂದ ಕೃಷ್ಣನ ಹೆಸರು ವಾಸಿಯಾಗಿದೆ ಎಂದರು.ಅತಿಥಿ ಉಪನ್ಯಾಸಕ ಶಿವಲಿಂಗ ಸಿದ್ದನಾಳ ಮಾತನಾಡಿ, ಭಕ್ತಿ ಹುಟ್ಟಬೇಕಾದರೆ ಕನಕದಾಸರ ಆಚರಣೆಯಿಂದ. ಅವರ ಜೀವನದ ಕುರಿತು ತಿಳಿದುಕೊಂಡರೆ ಮಾತ್ರ ಜೀವನ ಸಾರ್ಥಕತೆಯಾಗುತ್ತದೆ. ಅವರೊಬ್ಬರು ಹಠವಾದಿಯಾಗಿದರು. ವೀರ, ಶೂರ, ಧೀರರಾಗಿದ್ದರು, ತಿಮ್ಮಪ್ಪ ನಾಯಕರಾಗಿದರು. ಹಿರಿಯರು ಹೇಳಿದಂತೆ ಸಮಾಜದಲ್ಲಿ ಸಮಾನತೆಗಾಗಿ ಸಂತರಾಗಿ ಪರಿವರ್ತನೆಯಾಗಿ ಸಮಾನತೆಕ್ಕಾಗಿ ಮಹಾನ ಸಂತರಾದರು. ವಚನಗಳ ಮೂಲಕ ಸಮಾನತೆಕ್ಕಾಗಿ ತ್ಯಾಗಮಾಡಿದರು. ಜ್ಞಾನ ಮತ್ತು ಶಿಕ್ಷಣ ಹೊಂದಿರುವ ವ್ಯಕ್ತಿಯಾಗಿದ್ದರು. ಸಾಕಷ್ಟು ಸಮಾನತೆಗಾಗಿ ಸಮಾಜವನ್ನು ತಿದ್ದಿದ ವ್ಯಕ್ತಿಯಾಗಿದ್ದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಅವರ ಚರಿತ್ರೆಯ ಬಗ್ಗೆ ತಿಳಿಸುವದು ಬಹಳ ಮುಖ್ಯವಾಗಿದೆ ಎಂದರು.ಜಕನೂರ ಮಾಧುಲಿಂಗ ಶ್ರೀಗಳು ಮಾತನಾಡಿದ, ಕನಕದಾಸರು ಹಾಲು ಮತದಲ್ಲಿ ಹುಟ್ಟಿರುವದು ಕುರುಬ ಸಮಾಜದಲ್ಲಿ ಅಷ್ಟೇ ಅಲ್ಲ. ಎಲ್ಲರ ಸಮಾಜದಲ್ಲಿ ಹುಟ್ಟಿದ್ದಾರೆ. ಅಚಲ ಮನಸು ಹೊಂದಿದವರು ಯಾರು ಇರುತ್ತಾರೆ ಅವರಲ್ಲಿ ಕನಕರು ಇರುತ್ತಾರೆ. ಹಾಲು ಮತ ಧರ್ಮ ಭಂಡಾರವನ್ನು ಹೊಂದಿದ ಧರ್ಮವಾಗಿದೆ. ಶುಭ ಸಮಾರಂಭಗಳಲ್ಲಿ ಸಹ ಭಂಡಾರವನ್ನು ಬಳಸುತ್ತಾರೆ ಅದಕ್ಕಾಗಿ ಹಾಲು ಮತ ಸಮಾಜವಾಗಿದೆ. ಇಂದಿನ ಮಕ್ಕಳಿಗೆ ಸಂಸ್ಕೃತ ಶಾಲೆಯನ್ನು ತೆರೆಯಬೇಕು. ಸಂಸ್ಕೃತ ವೇದ ಪಾಠಶಾಲೆಯನ್ನು ತೆರೆಯುವದು ಅತೀ ಅವಶ್ಯವಾಗಿದೆ ಎಂದು ಮನವಿ ಮಾಡಿಕೊಳ್ಳುತ್ತೆನೆ ಎಂದು ಆರ್ಶೀವಚನ ನೀಡಿದರು.
ರಾಜು ಮೇಲಿಕೆರಿ ಮಾತನಾಡಿದರು, ತಹಶೀಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಧನಗರ ನಿರೂಪಿಸಿದರು. ವೇದಿಕೆಯಲ್ಲಿ ಮಾಜಿ ಭೂ ಸೇನಾ ನಿಗಮ ಅಧ್ಯಕ್ಷ ಶ್ರೀಶೈಲ ದಳವಾಯಿ, ಈಶ್ವರ ವಾಳೇನ್ನವರ, ಬಿ,ಜಿ,ಪಾಟೀಲ, ಮಲ್ಲು ಮೇಳಿ, ಡಿ,ಬಿ, ಪೂಜಾರಿ, ಈಶ್ವರ ದಳವಾಯಿ, ಮಹಾನಿಂಗ ತಳವಾರ, ಹನಮಂತ ಬಾಂಗಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೋಟೋ : ಎ, ಬಿ, ಸಿ,
ಜಮಖಂಡಿ ನಗರದ ಕನಕದಾಸರ ವಿದ್ಯಾವರ್ಧಕ ಶಾಲೆಯ ಆವರಣದಲ್ಲಿ ನಡೆದ ತಾಲೂಕು ಆಡಳಿತ, ತಾಲೂಕು ಪಂಚಾಯತ, ನಗರಸಭೆ, ಕುರುಬರ ಸಂಘ, ಕನಕದಾಸ ವಿದ್ಯಾವರ್ಧಕ ಸಂಘ, ಯುವ ಕುರುಬರ ಸಂಘ, ಮಹಿಳಾ ಕುರುಬರ ಸಂಘ, ಕನಕ ನೌಕರರ ಸಂಘ ಸಹಯೋಗದಲ್ಲಿ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸರ 537 ನೇ ಜಯಂತ್ಯೋತ್ಸವ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಜಿ ಜಿಪಂ,ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಉದ್ಘಾಟಿಸಿದರು,