ಬಳ್ಳಾರಿ: ಬಿಸಿಲಿಗೆ ಬಸವಳಿದ ಜನತೆಗೆ ಸಂಗೀತ ರಾಗಮಯ ರಾಮೋತ್ಸವ
ಲೋಕದರ್ಶನ ವರದಿ
ಬಳ್ಳಾರಿ 12: ನಗರದ ಡಾ.ರಾಜಕುಮಾರ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ಬಯಲು ರಂಗಮಂದಿರ ರಾಘವೇಂದ್ರ ಸ್ವಾಮಿ ಮಠ ಸತ್ಯನಾರಾಯಣಪೇಟೆಯಲ್ಲಿ ಯುಗಾದಿಯಿಂದ ನಡೆಯುತ್ತಿರುವ 'ಬಳ್ಳಾರಿ ರಾಮೋತ್ಸವ' ಪ್ರತಿನಿತ್ಯ ಸಂಗೀತ, ನೃತ್ಯ, ಉಪನ್ಯಾಸ, ಭಜನೆ ಹೀಗೆ ವಿವಿಧ ಕಲಾಪ್ರಕಾರಗಳಿಂದ ಜನಮನ ಸೆಳೆಯುತ್ತಿದೆ. ಬೇಸಿಗೆಯ ಬಿರು ಬಿಸಿಲಿಗೆ ಬಸವಳಿದ ಜನತೆಗೆ ಸಂಜೆ ಆಹ್ಲಾದಮಯ ರಾಮೋತ್ಸವ ಎನ್ನಿಸಿದೆ.
ರಾಮೋತ್ಸವ ಹಿಂದುಸ್ಥಾನಿ ಹಾಗೂ ಕರ್ನಾಟಕ ಸಂಗೀತಗಳ ಉಭಯ ರಾಗಮಯ ರಾಮೋತ್ಸವವಾಗಿ ಮಾರ್ಪಟ್ಟಿದ್ದು ಜನ ಸಂತಸದಿಂದ ಆಲಿಸುವಂತಾಯಿತು. ಆರಂಭದಲ್ಲಿ ರಾಯಚೂರಿನ ಸಂಗೀತ ಕಲಾವಿದ ವಿದ್ವಾನ್ ರಘುಪತಿ ಪೂಜಾರ ದಿನ್ನಿ ಅವರು ಖ್ಯಾತ ಕ್ಲಾರಿಯೋನೇಟ್ ವಾದಕರು, ಪಾಶ್ಚಿಮಾತ್ಯ ವಾದ್ಯವಾದ ಕ್ಲಾರಿಯೋನೇಟ್ನ್ನು ಅಪ್ಪಟ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿ ಖ್ಯಾತರಾದ ಕಲಾವಿದರ ತಂಡವೇ ರಾಯಚೂರಿನಲ್ಲಿದೆ. ರಘುಪತಿ ಇವರು ಶ್ರೀರಾಮನ ಕುರಿತಾದ ಹಿಂದೂಸ್ಥಾನಿ ರಾಗಗಳ ರಚನೆಗಳನ್ನು ಸೊಗಸಾಗಿ ನುಡಿಸಿದರು. ಹಾಮರ್ೊನಿಯಂನಲ್ಲಿ ಅಮರೇಗೌಡ ಮತ್ತು ತಬಲಾದಲ್ಲಿ ಗಣಪತಿ ರವರು ಸಾಥ್ ನೀಡಿದರು.
ನಂತರ ನಡೆದ ಕರ್ನಾಟಕ ಸಂಗೀತ ಕಚೇರಿಯಲ್ಲಿ ನಗರದ ಬಳ್ಳಾರಿ ಮ್ಯೂಜಿಕಲ್ ಕ್ಲಬ್ ಕಾರ್ಯದಶರ್ಿ ಸಂಧ್ಯಾರಾವ್ ನಡೆಸಿಕೊಟ್ಟರು. ದಾಸರ ಕೀರ್ತನೆಗಳನ್ನೇ ಎತ್ತಿಕೊಂಡ ಅವರು ಪುರಂದರ ದಾಸ, ತ್ಯಾಗರಾಜ, ರಾಮದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅವರಿಗೆ ವಯಲಿನ್ನಲ್ಲಿ ಬೆಂಗಳೂರಿನ ಗೋವಿಂದರಾಜು ಹಾಗೂ ಮೃದಂಗದಲ್ಲಿ ಗೌತಮ ಜೊತೆ ನೀಡಿದರು. ಒಂದೇ ದಿನ ಅದೇ ವೇದಿಕೆಯಲ್ಲಿ ಹಿಂದೂಸ್ಥಾನಿ-ಕರ್ನಾಟಕ ಸಂಗೀತದ ಗಾಯನ ಹಾಗೂ ವಾದನ ಎರಡೂ ರುಚಿ ದೊರೆತದು ರಾಮೋತ್ಸವ ವಿಶೇಷವಾಗಿತ್ತು.
ವೇದಿಕೆಯಲ್ಲಿ ಸಂಗನಕಲ್ಲು ವೆಂಕಟೇಶ್ವರ ದೇವಸ್ಥಾನದ ಗೋವಿಂದರಾಜ, ನಗರದ ಖ್ಯಾತ ದಂತ ವೈದ್ಯರಾದ ಡಾ.ವೈ.ಶೇಷಗಿರಿರಾವ್, ಜಯಪ್ರಕಾಶ್ ಗುಪ್ತಾ, ಪ್ರೊ.ಹರಿಕುಮಾರ, ಡಾ.ಹರೀಶರಾವ್, ಡಾ.ವಸ್ತ್ರದ, ಡಾ. ಕೃಷ್ಣ, ಪ್ರಭುದೇವ ಕಪ್ಪಗಲ್ಲು ಇದ್ದರು.