ಬಳ್ಳಾರಿ: ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ : ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ: ಡಾ.ರಮೇಶ ಹೇಳಿಕೆ
ಬಳ್ಳಾರಿ 14: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪುಣ್ಯ ಪುರುಷರ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ ಹಾಗೂ ದಿನನಿತ್ಯದ ಕಾರ್ಯವಿಧಾನದಲ್ಲೂ ನಮ್ಮನ್ನು ಆವರಿಸಿಕೊಂಡಿದ್ದಾರೆ ಹಾಗಾಗಿ ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ ಅವರು ವಿಶ್ವದ ಹೆಮ್ಮೆಯ ವ್ಯಕ್ತಿಯಾಗಿದ್ದಾರೆ ಹಾಗೂ ಇಂಥ ಮಹನೀಯರ ಜಯಂತಿಯಂದು ಅವರ ಪೂಜೆ ಮಾಡುವ ಬದಲಾಗಿ ಅವರ ವಿಚಾರಗಳ ಕುರಿತಾದ ಚಚರ್ೆ ಮತ್ತು ಉಪನ್ಯಾಸಗಳನ್ನು ಮಾಡುವುದರಿಂದ ನಾವು ಮನುಷ್ಯರಾಗಲು ಸಾಧ್ಯ ಮತ್ತು ಅಂಬೇಡ್ಕರ್ ಚಿಂತನೆಗಳಿಂದ ಮಾತ್ರ ಸಮ ಸಮಾಜದ ನಿಮರ್ಾಣ ಸಾಧ್ಯವಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದಲಿತ ಅಧ್ಯಯನ ಪೀಠದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನ್ರಾಮ ಅವರ 112ನೇ ಜಯಂತಿ ನಿಮಿತ್ತವಾಗಿ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಪಂಚದಲ್ಲಿಯೇ ಬೌದ್ಧಧರ್ಮ ಮಾತ್ರ ವಾಸ್ತಾವಾಂಶವನ್ನು ತಿಳಿಸುತ್ತದೆ. ಹಾಗಾಗಿ ಅಂಬೇಡ್ಕರ್ ಬೌದ್ಧಧರ್ಮವನ್ನು ಸ್ವೀಕರಿಸಿದರು.
ಅಂಬೇಡ್ಕರ ಮೂಲತಃ ಜ್ಞಾನದಾಹಿ. ಅವರು ತಮ್ಮ 23-24ನೇ ವಯಸ್ಸಿನಲ್ಲಿ ಬರೆದಿರುವ ಸಂಶೋಧನೆಯ ಬರವಣಿಗೆಗಳು ಅವರ ಆಳವಾದ ಪಾಂಡಿತ್ಯ ಮತ್ತು ಪ್ರತಿಭೆಗೆ ದೊಡ್ಡ ಸಾಕ್ಷಿ. ಅವರು ಯಾವುದೇ ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಂಡರೂ ಅದರ ಆಳ-ಅಗಲಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿದ್ದರು ಎಂದು ಕುಲಪತಿಗಳು ಹೇಳಿದರು. ಕಾರ್ಯಕ್ರಮದ ಮೊದಲಿಗೆ ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರಾರ್ಥನೆ ಗೀತೆ ಮತ್ತು ಬುದ್ಧ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಶೋಧನ ವಿದ್ಯಾಥರ್ಿನಿ ಸಾವಿತ್ರಿ ಮಠಪತಿ ಅವರು ನಡೆಸಿಕೊಟ್ಟರು. ಕೊನೆಯಲ್ಲಿ ಶ್ರೀಮತಿ ಮಂಜುಳಾ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.