ದಿ.ಸುರೇಶಬಾಬು ಜತ್ತಿ ಅವರ ಸ್ಮರಣಾರ್ಥ ಅನ್ನದಾಸೋಹ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ : 8: ಕಾನೂನಿನ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ. ಕಾನೂನಿನ ಪರಿಪಾಲನೆ ರಾಷ್ಟ್ರವನ್ನು ಅಭಿವೃದ್ದಿ ಪಥದತ್ತ ಕೊಂಡಯ್ಯಲು ನೆರವಾಗುತ್ತದೆ. ಕಾನೂನಿನ ಅರಿವು ಇದ್ದಲ್ಲಿ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದು 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಅರ್ಜುನ ಮಳ್ಳೂರ ಹೇಳಿದರು.
ನಗರದ ಸರಕಾರಿ ಆಸ್ಪತ್ರೆಯಲ್ಲಿ ಲಯನ್ಸ ಸಂಸ್ಥೆ ಹಮ್ಮಿಕೊಂಡ ದಿ.ಸುರೇಶಬಾಬು ಜತ್ತಿ ಅವರ ಸ್ಮರಣಾರ್ಥ ಅನ್ನದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚುವರಿ ನ್ಯಾಯಾಧೀಶೆ ಕವಿತಾ ಉಂಡೋಡಿ, ಪ್ರಧಾನ ದಿವಾಣಿ ನ್ಯಾಯಾಧೀಶ ಅಬ್ದುಲ್ ರೆಹಮಾನ ಮುಲ್ಲಾ, ಹೆಚ್ಚುವರಿ ನ್ಯಾಯಾಧೀಶ ಹರ್ಷದ್ ಅನ್ಸಾರಿ, ಡಾ.ಹೆಚ್.ಜಿ.ದಡ್ಡಿ, ಡಾ.ರಂಗನಾಥ ಸೋನವಾಲ್ಕರ, ಡಾ ಶ್ರೀಶೈಲ ತೇಲಿ, ಡಾ,ವಿವೇಕ ಬಿರಾದಾರ, ವಕೀಲ ದಾನಪ್ಪ ಜತ್ತಿ, ರಾಜೇಂದ್ರ ನಾಯಕ, ಡಾ.ವಿಜಯಲಕ್ಮಿ ತುಂಗಳ, ಪ್ರಕಾಶ ಚೌರಡ್ಡಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಸಂಗಮೇಶ ಕೌಜಲಗಿ, ಕಾಡು ಮಾಳಿ, ಕಾರ್ಯದರ್ಶಿ ನರೇಂದ್ರ ಮಾನೆ, ರಾಜಶೇಖರ ಅಕ್ಕಿ ಉಪಸ್ಥಿತರಿದ್ದರು. ಮುಖ್ಯ ವೈದ್ಯಾದಿಕಾರಿ ಡಾ.ಕೃಷ್ಣಾ ಬಣ್ಣದ ಮಾತನಾಡಿದರು.