ಗದಗ

ಕ್ರೀಡಾಪಟುಗಳ ಪಾಲಕರ ಸಭೆ

ಕ್ರೀಡಾಪಟುಗಳ ಪಾಲಕರ ಸಭೆ

ಗದಗ 20: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿ ನಡೆಸುತ್ತಿರುವ ಕ್ರೀಡಾಶಾಲೆ / ವಸತಿ ನಿಲಯದಲ್ಲಿ 74 ಕ್ರೀಡಾಪಟುಗಳು ಕುಸ್ತಿ, ಹಾಕಿ ಹಾಗೂ ಸೈಕ್ಲಿಂಗ್ ಕ್ರೀಡೆಯಲ್ಲಿ ವಸತಿ ಸಮೇತ ಕ್ರೀಡಾಬ್ಯಾಸ ಮಾಡುತ್ತಿದ್ದು,  2022-23 ರ ಅವಧಿಯ ಕ್ರೀಡಾಪಟುಗಳ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಲುವಾಗಿ ಪಾಲಕರ ವಾರ್ಷಿಕ ಸಭೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡ್ರ ಅವರ  ಅಧ್ಯಕ್ಷತೆಯಲ್ಲಿ ಫೆ. 16ರಂದು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಪಾಲಕ/ ಪೋಷಕರ ಸಭೆಯನ್ನು ಕರೆಯಲಾಗಿತ್ತು.    

  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಜಾಬಗೌಡ್ರ  ಮಾತನಾಡಿ  ಮುಂದಿನ ದಿನಮಾನಗಳಲ್ಲಿಯೂ ಕೂಡ ಕ್ರೀಡಾಶಾಲೆಯ ಮಕ್ಕಳು ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ  ಸಾಧನೆ ಮಾಡಲು ಇಲಾಖೆ ಹಾಗೂ ಪಾಲಕರು ಶ್ರಮಿಸಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಲಾಖೆಯು ಪ್ರಥಮ ಆದ್ಯತೆಯನ್ನು ನೀಡುತ್ತದೆ  ಎಂದರು.   ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಕಾರಣರಾದ  ಎಲ್ಲ ತರಬೇತುದಾರರಿಗೆ ಹಾಗೂ ಸಹಾಯಕ ನಿರ್ದೇಶಕರಿಗೆ ಪಾಲಕರು ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.   

     2022-23 ನೇ ಸಾಲಿನಲ್ಲಿ ತಮ್ಮ ತಮ್ಮ ವಿಭಾಗದ ಕ್ರೀಡೆಗೆ ಸಂಬಂಧಿಸಿದ ಕ್ರೀಡಾಪಟುಗಳ ಸಾಧನೆಯ ವರದಿಯನ್ನು ಕ್ರೀಡಾಪಟುಗಳ ಪಾಲಕರಿಗೆ ನೀಡಿದರು. ಕ್ರೀಡಾಪಟುಗಳ ಪಾಲಕರು ತರಬೇತುದಾರರೊಂದಿಗೆ ತಮ್ಮ ತಮ್ಮ ಮಕ್ಕಳ ಸಾಧನೆಯ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು.  ಪಾಲಕರ ಸಭೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸೈಕ್ಲಿಂಗ್ ಹಾಗೂ ಹಾಕಿ ತರಬೇತುದಾರರು ಹಾಜರಿದ್ದರು. 

ಸುದ್ದಿ ಓದಿ