ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ : ಶಾಸಕ ಜೆ.ಎನ್.ಗಣೇಶ
ಲೋಕದರ್ಶನ ವರದಿ
ಕಂಪ್ಲಿ 25: ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ. ಇದರಿಂದ ಮತ್ತೊಬ್ಬರ ಪ್ರಾಣರಕ್ಷಣೆ ಸಾಧ್ಯ ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದ ವರಲಕ್ಷ್ಮೀ ಬ್ಯಾಂಕ್ ಮುಂಭಾಗದ ಬಳಿಯಲ್ಲಿ ಆರೋಗ್ಯ ಇಲಾಖೆ, ಕಂಪ್ಲಿಯ 4ನೇ ವಾರ್ಡಿನ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತದ “ಬೃಹತ್ ರಕ್ತದಾನ ಶಿಬಿರ”ಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನದಿಂದ ಆರೋಗ್ಯ ಮತ್ತಷ್ಟು ವೃದ್ಧಿಯಾಗುತ್ತದೆ. ಯುವಜನತೆ ನಿಯಮಿತವಾಗಿ ರಕ್ತದಾನ ಮಾಡಬೇಕು. ರಕ್ತದಾನದ ಮಹತ್ವ ಅರಿತು, ಸಮಾಜಕ್ಕೆ ತಿಳಿಸಬೇಕು ಎಂದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ರುದ್ರಮುನಿ ನೇತೃತ್ವವಹಿಸಿ ಮಾತನಾಡಿ, ರಕ್ತದಾನದಿಂದ ಆರೋಗ್ಯ ಸುಧಾರಿಸುತ್ತದೆ. ಆದ್ದರಿಂದ ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಜೀವವನ್ನು ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ, ರಕ್ತದಾನಿಯಾದರೂ ಸಾಕು.
ನಾವು ನೀಡುವ ರಕ್ತ ಅತ್ಯಮೂಲ್ಯ ಜೀವವನ್ನು ಉಳಿಸುತ್ತದೆ. ರಕ್ತ ಸಂಗ್ರಹಿಸುವ ರಕ್ತ ಭಂಡಾರಗಳು ಬಡವರಿಗೆ ಅವಶ್ಯಕತೆ ಇದ್ದಾಗ ರಕ್ತವನ್ನು ನೀಡಬೇಕು ಎಂದರು. ತದನಂತರ ನೂರಾರು ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಿದರು. ರಕ್ತವನ್ನು ಸ್ವಾಮಿ ವಿವೇಕಾನಂದ ರಕ್ತ ಭಂಡಾರದಿಂದ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಜೆಸ್ಕಾಂ ನಿರ್ದೇಶಕ ಕೆ.ಷಣ್ಮುಖಪ್ಪ, ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಮುಖ್ಯಾಧಿಕಾರಿ ಮಲ್ಲಿಕಾರ್ಜುನ,
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ನೀಲಪ್ಪ, ವೈದ್ಯರಾದ ಡಾ.ರವೀಂದ್ರ ಕನಿಕೇರಿ, ಡಾ.ಮಲ್ಲೇಶಪ್ಪ, ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಕೇಂದ್ರದ ಮುಖ್ಯಸ್ಥ ಜಿ.ಗೋಪಾಲರೆಡ್ಡಿ, ಮುಖಂಡರಾದ ಬಿ.ನಾರಾಯಣಪ್ಪ, ಕರಿಬಸವನಗೌಡ, ಹೊನ್ನಳ್ಳಿ ಗಂಗಾಧರ, ಬಿ.ಸಿದ್ದಪ್ಪ, ಆಟೋ ರಘು, ಡಿಶ್ ಪ್ರಸಾದ್, ಎನ್.ಗಂಗಣ್ಣ, ಗೋಪಾಲ, ಪೇಂಟರ್ ಮಸ್ತಾನ್ ಸೇರಿದಂತೆ ಅನೇಕರಿದ್ದರು.