ಕಂಪ್ಲಿ

ಬರಗಾಲದ ನಡುವೆ ಗೌರಿ ಹಬ್ಬದ ಸಂಭ್ರಮಕ್ಕೆ ಸಿದ್ಧ :ಗೌರಿಹುಣ್ಣಿಮೆ ಪ್ರಯುಕ್ತ ಮೂರ್ತಿಗಳಿಗೆ ಜೀವಕಳೆ : ಸಕ್ಕರೆ ಆರತಿಗಳ ತಯಾರಿ ಹಾಗೂ ಮಾರಾಟ ಜೋರು

ಬರಗಾಲದ ನಡುವೆ ಗೌರಿ ಹಬ್ಬದ ಸಂಭ್ರಮಕ್ಕೆ ಸಿದ್ಧ :ಗೌರಿಹುಣ್ಣಿಮೆ ಪ್ರಯುಕ್ತ ಮೂರ್ತಿಗಳಿಗೆ ಜೀವಕಳೆ : ಸಕ್ಕರೆ ಆರತಿಗಳ ತಯಾರಿ ಹಾಗೂ ಮಾರಾಟ ಜೋರು
Preparations for Gauri Festival Celebrations Amidst Drought: Idols Brought to Life for Gauri Purnima

ಲೋಕದರ್ಶನ ವರದಿ 

           ಕಂಪ್ಲಿ 24 : ಗೌರಿ ಹುಣ್ಣಿಮೆಗೆ ಪ್ರತಿಷ್ಠಾಪನೆಗೊಳ್ಳಲು ಗೌರಿ ಮೂರ್ತಿಗಳು ಕಲಾವಿದರಿಂದ ಅಂತಿಮ ಸ್ಪರ್ಶ ಪಡೆದು ಮಾರಾಟಕ್ಕೆ ಸಿದ್ಧಗೊಳ್ಳುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಗೌರಿದೇವಿಗೆ ಪ್ರಿಯವಾದ ಸಕ್ಕರೆ ಆರತಿಗಳ ತಯಾರಿಕೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಭರ್ಜರಿಯಾಗಿ ಕಂಪ್ಲಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಂಡು ಬರುತ್ತಿದೆ.

             ಪಟ್ಟಣದ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ತಮ್ಮ ಪರಶುರಾಮಪ್ಪ ಚಿತ್ರಗಾರ ಅವರ ಕರಕುಶಲದಲ್ಲಿ ಮಣ್ಣಿನಲ್ಲಿ ಕಾಷ್ಟದ ಗೌರಿ ಪ್ರತಿಮೆಗಳು ಜೀವಕಳೆ ಪಡೆಯುತ್ತಿವೆ. ಒಂದುವರೆ ತಿಂಗಳಿನಿಂದಲೇ ಮಣ್ಣಿನ ಗೌರಿ ಪ್ರತಿಮೆಗಳ ತಯಾರಿಕೆಗೆ ಪೂರ್ವ ಸಿದ್ಧತೆ ನಡೆದಿದೆ.

             ಮಣ್ಣು ಹದ ಮಾಡಿಕೊಳ್ಳುವ ಪೀಠ ತಯರಿಸಿ ಅದರ ಮೇಲೆ ದಿಂಬ ಕೂಡಿಸಿ, ಮೂರ್ತಿ ತಯಾರಿನಕ್ರಿಯೆ ಆರಂಭಗೊಳ್ಳುತ್ತದೆ. ಒಣಗಿದ ನಂತರ ರಸಾಯನಿಕ ಮುಕ್ತವಾದ ಜಲವರ್ಣ ನೀಡಿ ಜೀವಕಳೆ ತುಂಬಲಾಗುತ್ತದೆ.

              ಪಟ್ಟಣ ಸೇರಿ ಜಿಲ್ಲೆ,ಹೊರಜಿಲ್ಲೆಗಳ ದೇವಸ್ಥಾನದಲ್ಲಿ ಗೌರಿ ಪ್ರತಿಷ್ಠಾಪಿಸಲು, ಸಂಪ್ರದಾಯದ ಕೆಲ ಮನೆಯವರು ಗೌರಿ ಪ್ರತಿಮೆ ಖರೀದಿಗೆ ಧಾವಿಸುತ್ತಿದ್ದಾರೆ. ಅರ್ಧ ಅಡಿಯಿಂದ ನಾಲ್ಕು ಅಡಿಗಳವರೆಗಿನ ಗೌರಿ ಮೂರ್ತಿಗಳು ಸಿದ್ಧವಾಗಿವೆ. ಸಂಪ್ರದಾಯದ ಕಲೆ ಬಿಡಬಾರದು ಎಂದು ಪ್ರತಿವರ್ಷ ಗೌರಿ ಹುಣ್ಣಿಮೆಗೆ ಗೌರಿ ಮೂರ್ತಿಗಳನ್ನು ತಯಾರಿಸಲಾಗುತ್ತದೆ.

             ಆದರೆ ಮನೆ ಮಂದಿಯಲ್ಲಾ ಕುಳಿತು ಮಾಡುವ ಈ ಕಸುಬಿಗೆ ಸೂಕ್ತ ಬೆಲೆ ಸಿಕ್ಕರೆ ಸಾಕೆನ್ನುವಂತಾಗಿದೆ ಎನ್ನುವಂತಾಗಿದೆ.  ಉತ್ತಂಗಿ ಸುರೇಶ ಶಂಭಣ್ಣ ಅವರು ಕಳೆದ ಹಲವು ವರ್ಷಗಳಿಂದ ಪಟ್ಟಣದ ನಡುವಲ ಮಸೀದಿ ಬಳಿಯ ಆಂಜನೇಯ್ಯ ದೇವಸ್ಥಾನದ ಹತ್ತಿರದ ಮುಖ್ಯರಸ್ತೆ ಬದಿಯಲ್ಲಿ ತಳ್ಳುವ ಬಂಡಿಯಲ್ಲಿ ವಿವಿಧ ಅಲಂಕೃತ ಆರತಿ ಗೊಂಬೆಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ,

              ಪ್ರತಿ ವರ್ಷದಲ್ಲಿ 8-10 ಕ್ವಿಂಟಲ್ ನಷ್ಟು ಆರತಿ ಗೊಂಬೆಗಳನ್ನು ಮಾರಾಟದ ವ್ಯಾಪಾರವಾಗುತ್ತದೆ. ಆದರೆ, ಈ ಬಾರಿ ಬರಗಾಲದ ಹಿನ್ನಲೆ ಆರತಿ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆ ಜೊತೆಗೆ ಇದ್ದಷ್ಟರಲ್ಲಿ ಗೌರಮ್ಮನ ಹಬ್ಬ ಆಚರಿಸುತ್ತಿದ್ದಾರೆ. ಇದರಿಂದ ಆರತಿ ವ್ಯಾಪಾರಕ್ಕೆ ಸ್ವಲ್ಪ ಮಟ್ಟಿಗೆ ಹೊಡೆತ ಬಿದ್ದಿದೆ.

             ಸಮೃದ್ಧ ಮಳೆ, ಬೆಳೆ ಇದ್ದರೆ, ರೈತರಲ್ಲಿ ಮಂದಹಾಸ ಮೂಡಿ, ಹಬ್ಬಗಳು ಚೆನ್ನಾಗಿ ಆಗಲು ಸಾಧ್ಯ. ಈ ಸಲ ರೈತರ ಮತ್ತು ಜನರ ಆರ್ಥಿಕ ಸಂಕಷ್ಟವನ್ನು ಎದರುತ್ತಿದ್ದಾರೆ. ಆಗಾಗಿ ವ್ಯಾಪಾರ ಕಡಿಮೆಯಾಗುವಂತಾಗಿದೆ. ಪಟ್ಟಣದ ಪ್ರಮುಖ ಬೀದಿಯ ಎರೆಡು ಬದಿಯಲ್ಲಿಯೂ ತಳ್ಳುಗಾಡಿಯಲ್ಲಿ ಅಂಗಡಿಗಳ ಮುಂದೆ ಸಕ್ಕರೆ ಆರತಿಗಳ ಮಾರಾಟ ಭರ್ಜರಿಯಾಗಿ ನಡೆದಿದೆ.

            ಒಂದು ಕೇಜಿ ಸಕ್ಕರೆ ಆರತಿಗೆ 180 ರಿಂದ 190 ರೂಗಳ ವರೆಗೆ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಗೌರಿ ಹುಣ್ಣಿಮೆಯ ಗೌರಿ ಪೂಜೆಗೆ ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಭರ್ಜರಿ ಸಿದ್ಧತೆಗಳು ನಡೆದಿವೆ. 


ಸುದ್ದಿ ಓದಿ