ರಾಣೆಬೆನ್ನೂರ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪ್ರೋತ್ಸಾಹ ಅಗತ್ಯ: ಉದಯಕುಮಾರ್

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪ್ರೋತ್ಸಾಹ ಅಗತ್ಯ: ಉದಯಕುಮಾರ್

ರಾಣೆಬೆನ್ನೂರು 02: ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಂಸ್ಕಾರಯುತ ಬೆಳವಣಿಗೆಗೆ ಪ್ರಮುಖ ಮಾತ್ರ ವಹಿಸಬೇಕಾದ ಇಂದಿನ ಅಗತ್ಯವಿದೆ ಎಂದು ನಗರಸಭೆ ಪೌರಾಯುಕ್ತ ಉದಯಕುಮಾರ್ ಬಿ.ಟಿ., ಕರೆ ನೀಡಿದರು. 

ಅವರು ನಾಗರ ಹೊರವಲಯದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ, 20ನೇವಾರ್ಷಿಕೋತ್ಸವ  " ಸಂವರ್ಧನಿ "-2022-23 ನೇ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ, ಗುರುಗಳ  ಮಾರ್ಗದರ್ಶನ, ಪಾಲಕರ ವಾಕ್ಯ ಪರಿಪಾಲನೆ, ಸ್ನೇಹಿತರ ಪ್ರೀತಿ ವಿಶ್ವಾಸ  ಗಳಿಸಿ ಉತ್ತಮವಾದ ಶಿಕ್ಷಣ ಪಡೆದು, ಶೈಕ್ಷಣಿಕ ಪ್ರಗತಿಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸದಾಕಾಲ ಗೌರವ, ಮಾನ ಮನ್ನಣೆ ಸಿಗಲು ಸಾಧ್ಯವಾಗುವುದು ಎಂದರು. 

ಉದಯಕುಮಾರ್ ಅವರು 20ನೇ ವಾಷರ್ಿಕೋತ್ಸವದ " ಜ್ಞಾನಾಮೃತ " ಸಂಚಿಕೆ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾಸುದೇವಸಾ ಲದವಾ ಅವರು ಸಮಾಜದಲ್ಲಿ ಸಮಾನತೆ ಹೊಂದಬೇಕಾದರೆ ಮೊದಲು ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ತಮ್ಮ ಶಿಕ್ಷಣ ಸಂಸ್ಥೆ  ಸಂಪೂರ್ಣ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಸದಾಕಾಲ ಮುಂದೆ ಇದೆ ಎಂದು ಹೇಳಿದರು. ಕ್ರೀಡೆ, ಪಟ್ಟೆತರ ಚಟುವಟಿಕೆ,ಸಿಬಿ ಎಸ್ಇ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಮತ್ತು ದಶಕಗಳ ಕಾಲ ಸೇವೆ ಸಲ್ಲಿಸಿದ ಬೋಧಕ-ಭೂದಕೇತರ ಸಿಬ್ಬಂದಿಗಳಿಗೆ ಅಮೃತ ಮಹೋತ್ಸವ ಸ್ಮರಣೆಯಲ್ಲಿ ನಗದು ಮೂತ್ತ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ, ಡಾ . ಬಿ ಆರ್ ಸಾಹುಕಾರ, ಡಾ . ಎಂ. ಎಂ. ಅನಂತರೆಡ್ಡಿ, ತುಳಜಪ್ಪ ಲದ್ವಾ ಮಲ್ಲಿಕಾಜರ್ುನ ಅಂಗಡಿ, ವಜ್ರೇಶ್ವರಿ ಲದ್ವ, ಪರಶುರಾಮ ಕಬಾಡಿ, ವಿದ್ಯಾ ಮುರಡಣ್ಣನವರ, ಸುಧಾ ನರಸಗೊಂಡರ, ಪ್ರಾಚಾರ್ಯರಾದ  ಪ್ರಕಾಶ್ ಎಸ್  ಇಸ್ಮಾಯಿಲ್ ಸೇರಿದಂತೆ ಮತ್ತಿತರ ಗಣ್ಯರು, ಸದಸ್ಯರು ಅಧ್ಯಾಪಕರು ಉಪಸ್ಥಿತರಿದ್ದರು. 

ಕವಿತಾ ಸಂಗಡಿಗರು ಪ್ರಾಥರ್ಿಸಿದರು, ರಾಜಶ್ರೀ ವರಗಿರಿ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ನಾಗೇಶ್ ಮುರಡಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಪ್ರಕಾಶ್ ಎಸ್ ಅವರು ವರದಿ ವಾಚಿಸಿದರು. ಬಸವರಾಜ ಕಂಬಳಿ ನಿರೂಪಿಸಿ ವಂದಿಸಿದರು. ನಂತರ ನಡೆದ ಜಾನಪದ ನೃತ್ಯ, ಸಂಗೀತ,  ಜಾನಪದ ಗೀತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಪರ್ಧಾತ್ಮಕವಾಗಿ ಪಾಲಕರ ಗಮನ ಸೆಳೆದವು 

ಸುದ್ದಿ ಓದಿ