ನಾಡಿನ ಸಾಂಸ್ಕೃತಿಕ ಸಂಪತ್ತಿಗೆ ಬಹುದೊಡ್ಡ ಇತಿಹಾಸ ಪರಂಪರೆ ಇದೆ : ಸುಭಾಸ
ರಾಣೇಬೆನ್ನೂರು 26: ನಾಡಿನ ಸಾಂಸ್ಕೃತಿಕ ಸಂಪತ್ತಿಗೆ ಬಹುದೊಡ್ಡ ಇತಿಹಾಸ ಪರಂಪರೆ ಇದೆ ವಿಶೇಷವಾಗಿ ಭಾವಗೀತೆಗಳಿಗೆ ಭಾವನಾತ್ಮಕವಾದ ರಾಗಗಳ ಸಂಯೋಜನೆ ಬಹು ಮುಖ್ಯ ಪಾತ್ರ ವಹಿಸುತ್ತಲಿದೆ ಎಂದು ಆರ್. ಟಿ.ಇ ಎಸ್ ಕಾಲೇಜು ಅಧ್ಯಕ್ಷ ಸುಭಾಸ ಸಾಹುಕಾರ್ ಹೇಳಿದರು.
ಅವರು ನಗರ ಹೊರವಲಯದ ಕಾಲೇಜಿನ ಸಾಹುಕಾರ್ ಭವನದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಿದ್ಯಾರ್ಥಿಗಳ ಭಾವಗೀತೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕವಿ ಮತ್ತು ಕಾವ್ಯ ಗಾಯನ ಇವೆಲ್ಲವೂ ಸಮ್ಮೇಳತಗೊಂಡಾಗ ಮಾತ್ರ ಗಾಯನ ಮನ ತಣಿಸಲು ಸಾಧ್ಯವಾಗುವುದು ಎಂದ ಅವರು, ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ನೆಲಮೂಲದ ಸಂಸ್ಕಾರ ಸದಾ ಕಾಲ ಇರುತ್ತದೆ ಅವುಗಳ ಪ್ರದರ್ಶನಕ್ಕೆ ವೇದಿಕೆಗಳ ಅವಶ್ಯಕತೆ ಇಂದಿನ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ:ಸಿ.ಎ. ಹರಿಹರ ಅವರು, ಕಾಲೇಜು ಆಡಳಿತ ಸದಾವ ಕಾಲವು, ಶಿಕ್ಷಣ ಜೊತೆಗೆ ಸಾಹಿತ್ಯ ಸಂಗೀತ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಕಾರ್ಯವನ್ನು ನಿರ್ವಹಿಸುತ್ತಾ ಬಂದಿರುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯ ಕೆ.ಟಿ. ಉದಪುಡಿ, ಸದಾಶಿವ ಹುಲ್ಲತ್ತಿ, ಡಾ : ಜಗನ್ನಾಥ್ ಗೇನಣ್ಣವರ, ಡಾ:ಕಾಂತೇಶ್ ಅಂಬಿಗೇರ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅಂತರ ಕಾಲೇಜುಗಳಿಂದ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧಾತ್ಮಕವಾಗಿ ನಡೆದ ಭಾವಗೀತೆಯಲ್ಲಿ, ಧಾರವಾಡದ ಕೆ ಎಸ್ ಎಸ್ ಮಹಾವಿದ್ಯಾಲಯದ ಧನ್ಯ ಹೆಗಡೆ ( ಪ್ರಥಮ) ಹಿರೇಕೆರೂರು ಬಿ ಆರ್ ಟಿ ಕಾಲೇಜು ಚೈತ್ರಾ ಎನ್.ವಾಯ್. ( ದ್ವಿತೀಯ ) ಮತ್ತು ಧಾರವಾಡ ಜೆಎಸ್ಎಸ್ ಕಾಲೇಜು ಸೂರಜ ಕುಮಾರ್ ಅರಗಿ ತೃತಿಯ ಸ್ಥಾನ ಗಳಿಸಿದರು. ಹಾಗೂ ಹಾವೇರಿ ಜಿ ಎಚ್ ಕಾಲೇಜಿನ ಕು :ಹರಿಪ್ರಿಯಾ ಸಮಾಧಾನ ಕರ ಬಹುಮಾನ ಪಡೆದರು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಮರಣಿಕೆ, ನಗದು ಮೊತ್ತ ಮತ್ತು ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಸ್ಪಧರ್ೆಯ ನಿಣರ್ಾಯಕರಾಗಿ ಸಂಗೀತ ಕಲಾವಿದರಾದ ಗಣಪ್ಪ ಕುಲಕರ್ಣಿ ಮತ್ತು ಶ್ರೀಪಾದ ಕುಲಕರ್ಣಿ ಅವರು ಕಾರ್ಯನಿರ್ವಹಿಸಿದರು.