ಝೂಲ್ ಫಕೀರ ಮೆರವಣಿಗೆ
ಇಂಡಿ: ಹಿಂದು ಮುಸ್ಲಿಂ ಭಾವೈಕ್ಯ ಸಾರುವ ಮೊಹರಂ ಹಬ್ಬಕ್ಕೆ ಭಕ್ತಗಣ ಹೆಚ್ಚುತ್ತಿದ್ದು ಹುಸೇನಬಾಷಾ ದರ್ಗಾದಿಂದ ಶನಿವಾರ ಝುಲ್ ಫಕೀರ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಇಲಾಹಿ ಮಕಾನದಾರ ಮತ್ತು ಆರುಣ ಮಕಾನದಾರ ಝೂಲ್ ಫಕೀರ ನೇತೃತ್ವ ಜೊತೆಗೆ ಇವರ ಮೆರವಣೆಗೆ ನಡೆಯಿತು.
ಮನೆ ಮನೆ ತೆರಳಿ ಆಶೀರ್ವಾದ ನೀಡುವರು. ಮೆರವಣೆಗೆಯಲ್ಲಿ ನೂರಾರು ಝೂಲ್ ಫಕೀರ ಸೇರಿದಂತೆ ಭಕ್ತರು ಬಾಜಾ ಬಜಂತ್ರಿ ಸೇರಿದಂತೆ ದೇವಸ್ಥಾನ ಸಮಿತಿಯ ಮಹಿಬೂಬಷಾ ಮಕಾನದಾರ, ಮಹಮ್ಮದಷಾ ಮಕಾನಂದಾರ, ಇಸೂಫ್ ಮಕಾನಂದಾರ, ಸಮಿತಿಯ ಅಧ್ಯಕ್ಷ ರಫೀಕ ಮಕಾನಂದಾರ, ಇಸಾಕ ಮಕಾನದಾರ, ಹುಮಾಯೂನ ಮಕಾನದಾರ, ಆದಿಲ್ ಮಕಾನದಾರ, ಮಹಿಬೂಬ ಮಕಾನದಾರ, ಕಮರಲಿ ಮಕಾನದಾರ, ಕಾಶಿಮಷಾ ಇಸ್ಮಾಲಷಾ ಮಕಾನದಾರ ಪಾಲ್ಗೊಂಡಿದ್ದರು.
ಇಂದು ಪ್ರಸಿದ್ಧ ಆಟವಿ ಖತಾಲ ನಡೆಯಲಿದ್ದು ಪಟ್ಟಣ ಸೇರಿದಂತೆ ನೆರೆ ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯ, ವಿಜಯಪುರ ಸೇರಿದಂತೆ ಅಂತರ ಜಿಲ್ಲೆ ಕಲಬುರಗಿ, ಬಾಗಲಕೋಟ, ಮಹಾರಾಷ್ಟ್ರ ಸೋಲಾಪುರ ಕೇಂದ್ರಗಳಿಂದ ಖತಾಲದಲ್ಲಿ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನೀರೀಕ್ಷೆ ಇದೆ.