ಇಂಡಿ

ದ್ರಾಕ್ಷಿ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಕಾರ್ಯಾಗಾರ

ದ್ರಾಕ್ಷಿ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಕಾರ್ಯಾಗಾರ

ಇಂಡಿ: ದ್ರಾಕ್ಷಿಯಲ್ಲಿ ಅಕ್ಟೋಬರ್ ಚಾಟನಿ ನಂತರ ನೀರು ನಿರ್ವಹಣೆ, ಸಸ್ಯ ಪ್ರಚೋದಕಗಳನ್ನು ಬಳಕೆ, ದ್ರಾಕ್ಷಿ ತೋಟದ ನಿರ್ವಹಣೆ ಮತ್ತು ದ್ರಾಕ್ಷಿಯಲ್ಲಿ ಕಾಡುವ ಸಸ್ಯ ಶಾರೀರಕ ನೂನ್ಯತೆಗಳ ಕುರಿತು ಸಂರ​‍್ೂಣ ಮಾಹಿತಿ ನೀಡಿ ತೋಟಗಾರಿಕೆ ಸಂಶೋಧನಾ ವಿಸ್ತರಣಾ ಕೇಂದ್ರದ ತಿಡಗುಂದಿಯ  ಡಾ. ಆರ್‌. ಡಿ. ರಾವತ ಹೇಳಿದರು. 

ಸೋಮವಾರ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಕ್ಟೋಬರ್ ಚಾಟನಿ ನಂತರ ದ್ರಾಕ್ಷಿ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. 

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರದ ಡಾ. ಸಿದ್ದಣ್ಣ್ಣ ಟೋಕೆ, ಇವರು ಆನ್ ಲೈನ್ ಮುಖಾಂತರ ಕಾರ‌್ಯಕ್ರಮದಲ್ಲಿ ಭಾಗವಹಿಸಿ ದ್ರಾಕ್ಷಿ ಬೆಳೆಯುಲ್ಲಿ ಬರುವ ರೋಗಗಳ ಲಕ್ಷಣ ಮತ್ತು ಅವುಗಳ ನಿರ್ವಹಣೆ ಕುರಿತು  ಪವರ ಪಾಯಿಂಟ್  ಸ್ಲೈಡಗಳ ಮುಖಾಂತರ ವಿವರಿಸಿದರು.  

ತೋಟಗಾರಿಕೆ ವಿಜ್ಞಾನಿ ಹೀನಾ ಎಂ.ಎಸ್‌.  ಅಧ್ಯಕ್ಷತೆ ವಹಿಸಿದರು,      

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರೇಮಾ, ಡಾ. ಸವಿತಾ, ಡಾ. ಅರ್ಜುನ್ ಸೂಲಗಿತ್ತಿ, ಶ್ರೀನಿವಾಸ ದ್ರಾಕ್ಷಿ ಬೆಳೆಯಲ್ಲಿ ಮಣ್ಣು ಮತ್ತು ನೀರು ಮಾದರಿ ಸಂಗ್ರಹಣೆ, ಎಲೆ ಮಾದರಿ ಸಂಗ್ರಹಣೆ ಕುರಿತು ಮಾತನಾಡಿದರು. 

ಕಾರ‌್ಯಕ್ರಮದಲ್ಲಿ ದ್ರಾಕ್ಷಿ ಬೆಳೆಯುವ ಪ್ರಗತಿಪರ ರೈತ ಬೀರ​‍್ಪ  ವಗ್ಗಿ ಸೇರಿದಂತೆ ಸುಮಾರು 75 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದರು. 


ಸುದ್ದಿ ಓದಿ