ನಗರಸಭೆ ಸಿಬ್ಬಂದಿಗಳಿಗೆ ನೀರು ಸೇವಾ ಸನ್ನದು ತರಬೇತಿ ಕಾರ್ಯಗಾರ
ರಾಣೇಬೆನ್ನೂರು 25: ಪ್ರತಿಯೊಬ್ಬ ಮನುಷ್ಯನಿಗೂ ನೀರು ಬಹು ಅಗತ್ಯ ಪಿತ ಮಿತವಾಗಿ ಬಳಸುವುದರಿಂದ ನೀರಿನ ರಕ್ಷಣೆ ಯಾಗುವುದು ನೀಟ್ಟಿನಲ್ಲಿ ಸಾರ್ವಜನಿಕರು ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಕೆ ಯು ಐ ಡಿ ಎಫ್ ಉಪ ಯೋಜನಾ ನಿರ್ದೇಶಕ ರವೀಂದ್ರ ಕುಂದಗೋಳ್ ಹೇಳಿದರು.
ಅವರು ಇತ್ತೀಚಿಗೆ ನಡೆದ ದಿನದ 24 ತಾಸು ನೀರು ಸೇವಾ ಸನ್ನದು ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದಿನ ಪದ್ಧತಿಯಲ್ಲಿ ನಾಗರಿಕರು ಮತ್ತೇನಿರು ಬರುತ್ತೋ ಇಲ್ಲವೋ ಎನ್ನುವ ಧಾವಂತದಲ್ಲಿ ನೀರು ಕಾಂಗ್ರೆಸ್ ಇಟ್ಟುಕೊಂಡು ಪುನ: ನೀರು ಬಂದ ತಕ್ಷಣ ಚೆನ್ನುಲ್ಲುವ ಪರಿಪಾಠ ಬೆಳೆಸಿಕೊಂಡಿದ್ದರು. ಆದರೆ ದಿನದ 24 ತಾಸು ನೀರು ಯಾವುದೇ ಅಡೆತಡೆ ಇಲ್ಲದೆ ಸರಬರಾಜು ಆಗುವುದರಿಂದ ನೀರು ಸಂಗ್ರಹಿಸುವ ಪ್ರಶ್ನೆ ಉದ್ಭವಾಗುವುದಿಲ್ಲ, ಬೇಕೆಂದಾಗ ನೇರವಾಗಿ ನೀರು ಪಡೆಯಬಹುದಾಗಿದೆ ಎಂದ ಅವರು ನೀರಿನ ಸದ್ಬಳಕೆ ಆಗಬೇಕೆ ಹೊರತು ದುರ್ಬಳಕೆ ಆಗದಂತೆ ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ, ಸಹಾಯಕ ಕಾರ್ಯ ಪಾಲಕ ಅಭಿಯಂತೆ ಶ್ರೀಮತಿ ಮಂಜುಳಾ ಮುಂಡಾಸದ, ಲೆಕ್ಕಾಧೀಕ್ಷಕಿ ಶ್ರೀಮತಿ ವಾಣಿಶ್ರೀ, ಸಮಾಲೋಚಕರಾದ ಡಿಟಿಎಲ್ ಚಂದ್ರಶೇಖರ, ವಿವೋಲಿಯ ಯೋಜನಾ ವ್ಯವಸ್ಥಾಪಕ ನಿರ್ದೇಶಕ ವಾಸುದೇವ, ಎಫ್.ಎಂ. ಡಿ. ಸಿ. ಸೈಯದ್ ಅಹ್ಮದ್ ಖಾದ್ರಿ,. ನಗರಸಭಾಧ್ಯಕ್ಷ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಪ್ರಭಾವತಿ ತಿಳುವಳ್ಳಿ ಸಹಾಯಕ ಕಾರ್ಯಪಾಲಕ ಅಭಿಯಂತೆ ಮಂಜುಳಾ ಮುಂಡಾಸದ, ಲೆಕ್ಕಾಧಿಕ್ಷಕಿ ವಾಣಿಶ್ರೀ, ಸಮಾಲೋಚಕರಾದ ಡಿಟಿಎಲ್ ಚಂದ್ರಶೇಖರ್, ವಿವೋಲಿಯ ಯೋಜನಾ ವ್ಯವಸ್ಥಾಪಕ ವಾಸುದೇವ, ಎಫ್‌ಎಂ. ಡಿ. ಸಿ ಸೈಯದ್ ಅಹ್ಮದ್ ಖಾದ್ರಿ ಸೇರಿದಂತೆ ನಗರಸಭಾ ಸದಸ್ಯರು, ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.ಸಮುದಾಯ ಅಭಿವೃದ್ಧಿ ಸಹಾಯಕ ಮಾರುತಿ ಪಾಟೀಲ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.