ಜಲಧೂತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗ್ರಾ.ಪಂ ಅಧ್ಯಕ್ಷೆ ಸುನಂದಾ ವಾಲಿಕಾರ ಚಾಲನೆ
ಇಂಡಿ 10: ತಾಲ್ಲೂಕಿನ ತಡವಲಗಾ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಹಾಗೂ ತಡವಲಗಾ ಸಮುದಾಯದ ಆರೋಗ್ಯ ಕೇಂದ್ರದ ವತಿಯಿಂದ ಸರ್ಕಾರದ ಆದೇಶದಂತೆ ಜಲಧೂತ ಜಾಥಾ ಕಾರ್ಯಕ್ರಮಕ್ಕೆ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಅವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮೊದಲು ಎಲ್ಲಾ ಶಾಲಾ ಮಕ್ಕಳು,ಶಿಕ್ಷಕರು ಹಾಗೂ ಎಸ್, ಡಿ,ಎಮ್ ,ಸಿ ಅಧ್ಯಕ್ಷರಾದ ವಿಠೋಬಾ ವಿಜಯಪೂರ ಹಾಗೂ ಸದಸ್ಯರು ಹಾಗೂ ಗ್ರಾಮದ ಪ್ರಮುಖ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿ ಜಲಧೂತದ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಜನತೆಗೆ ಜಾಗ್ರತಿ ಮೂಡಿಸಿದರು ನಂತರ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ಬಸವರಾಜ ವಾಲಿಕಾರ ಅವರು ಮಾತನಾಡಿ ಗಾಳಿ ಎಲ್ಲರಿಗೂ ಎಷ್ಟು ಅವಶ್ಯಕವಾಗಿದೆಯೋ, ನೀರು ಕೂಡಾ ಅಷ್ಟೆ ಅವಶ್ಯಕವಾಗಿದೆ.
ಅದನ್ನು ಮಿತವಾಗಿ ಹಿತವಾಗಿ ಬಳಸಬೇಕೆಂದು ಪ್ರಾಸ್ಥಾವಿಕವಾಗಿ ಮಾತನಾಡಿದರು. ನಂತರ ಗುರುಮಾತೆಯರಾದ ಶ್ರೀಮತಿ ಜಿ ಎಮ್ ಬಿರಾದಾರ ಮಾತನಾಡಿ ನೀರನ್ನು ದುರ್ಬಳಕೆ ಮಾಡಲಾರದೆ ರಸ್ತೆಯ ಮೇಲೆ ನೀರನ್ನು ಹರಿದು ಬಿಡಲಾರದಂತೆ ನೋಡಿಕೊಳ್ಳಬೇಕು ಹಾಗೂ ಹೊಲದಲ್ಲಿ ಕೃಷಿ ಹೊಂಡಗಳನ್ನು ಮನೆಯಲ್ಲಿ ಮಳೆಕೊಯ್ಲುಗಳನ್ನು ನಿರ್ಮಿಸಕೊಳ್ಳಬೇಕೆಂದು ತಿಳಿಹೇಳಿದರು ಮುಖ್ಯಗುರುಗಳಾದ ಆರ್ ಎಸ್ ದೊಡ್ಡಮನಿ, ಎಚ್ ಎಲ್ ನಧಾಪ್, ಎಲ್ ಬಿ ಕೊಂಕಣಿ,ಆ ಜಿ ಗಂಗನಗೌಡರ, ಎಸ್ ಎನ್ ಝಳಕಿ,ಪಿ ಎಸ್ ಮುರಾಳಿ, ಅಕ್ಷತಾ ನಾಗ್ರೇಶಿ, ರಾಜಕುಮಾರ ಬೆಣ್ಣೆಸೂರ,ನುಝಜತಾಬೇಗಂ ಅತ್ತಾರ, ದಾನಮ್ಮ ಬಡಿಗೇರ ಪ್ರೀಯಾಂಕ ಕುಂಬಾರ ಹಾಗೂ ಆರೋಗ್ಯ ಇಲಾಖೆ ವತಿಯಿಂದ ರಾಜು ಹಿರೇಕುರಬರ, ಆರ್ ಎಮ್ ಬಜೇಂತ್ರಿ, ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.