ಸಾಹಿತಿ ಪ್ರೊ.ಗದ್ದಿಗೌಡರ ಅವರ ಸಾಹಿತ್ಯ ಸೇವೆ ಅಪಾರ: ಅಶೋಕ ಚಂದರಗಿ
ಬೆಳಗಾವಿ 28 : ಖ್ಯಾತ ಸಾಹಿತಿ, ನೇಸರಗಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರು, ಇತಿಹಾಸ ತಜ್ಞರಾದ ಡಾ. ಎಫ್ ಡಿ ಗದ್ದಿಗೌಡರ ಅವರ ಸಾಹಿತ್ಯ ಸಂಗೀತ, ಕನ್ನಡ ನಾಡು ನುಡಿಗೆ ಮತ್ತು ಇಂದು ಪ್ರಸಕ್ತವಾಗಿ ಕನ್ನಡ ರಾಜ್ಯೋತ್ಸವದ ಹಾಡುಗಳನ್ನು ರಚಿಸಿ ಲೋಕಾರೆ್ಣ ಮಾಡುತ್ತಿರುವದು ನಮಗೆಲ್ಲ ಸಂತಸ ತಂದಿದೆ ಎಂದು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹೇಳಿದರು. ಅವರು ಬುಧವಾರದಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಮಾನಮನಸ್ಕ ಕನ್ನಡ ಸಂಘಟನೆಗಳ ವೇದಿಕೆಯ ಆಶ್ರಯದಲ್ಲಿ ಸಾಹಿತಿ ಡಾ. ಎಫ್ ಡಿ ಗದ್ದಿಗೌಡರ ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಚಿಸಿದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ. ಕೆಂಪಣ್ಣ ಚೌಕಶಿ ವಕೀಲರು (ಘಟಪ್ರಭಾ), ಬಾಳಪ್ಪ ಗುಡಗೇನಟ್ಟಿ, ಮಲ್ಲಿಕಾರ್ಜುನ ಮರಕುಂಬಿ, ಮಂಜುನಾಥ, ವಿನುತ ಅರಳಿಕಟ್ಟಿ, ಪ್ರೊ.ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.