ಅಧಿಕಾರಿಗಳಿಂದ ಮತಗಟ್ಟೆ ಸಮೀಕ್ಷೆಯ ವಿಶೇಷ ನೋಂದಣಿ ಅಭಿಯಾನ ಪರೀಶೀಲನೆ
ಇಂಡಿ: ಪಟ್ಟಣದ ವಿವಿಧ ವಾರ್ಡಗಳಿಗೆ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹಾಗೂ ತಹಸಿಲ್ದಾರ ನಾಗಯ್ಯ ಹಿರೇಮಠ ಅವರು ಮತದಾರ ಮನೆ ಮನೆಗೆ ಭೇಟಿ ನೀಡಿ ಮತಗಟ್ಟೆ ಸಮೀಕ್ಷೆಯ ವಿಶೇಷ ನೋಂದಣಿ ಅಭಿಯಾನದ ಕುರಿತು 1 ರಿಂದ 17ನೇ ವಾರ್ಡಗಳಿಗೆ ಖುದ್ದಾಗಿ ಮಾಹಿತಿ ಸಂಗ್ರಹಿಸುವ ಮೂಲಕ ಪರೀಶೀಲನೆ ನಡೆಸಿದರು.
ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹಾಗೂ ತಹಶೀಲ್ದಾರ ನಾಗಯ್ಯ ಹಿರೇಮಠ ಅವರು ಮತದಾರನ್ನು ವಿಚಾರಿಸಿ ತಮ್ಮ ಮನೆಗೆ ಬಿಎಲ್ಒಗಳು ಬಂದು ಆಧಾರ ಕಾರ್ಡ ಮತ್ತು ಮತದಾರರ ಗುರ್ತಿನ ಚೀಟಿ ಕಲೆ ಹಾಕಿ ತಮ್ಮಿಂದ ಮಾಹಿತಿ ಸಂಗ್ರಹಿಸಿದ್ದಾರೊ ಇಲ್ಲೋ ತಿಳಿಸಿ. ಒಂದು ವೇಳೆ ಅವರು ಸರಿಯಾಗಿ ಮಾಹಿತಿ ನೀಡದೆ ಬೇಕಾ ಬಿಟ್ಟಿಯಾಗಿ ಎಲ್ಲೋ ಕುಳಿತು ಮತಗಟ್ಟೆ ಸಮೀಕ್ಷೆಯ ವಿಶೇಷ ನೋಂದಣಿ ಅಭಿಯಾನ ಮಾಡಿದರೆ ಸಾಲದು. ಖುದ್ದಾಗಿ ಮತದಾರರ ಮನೆ ಬಾಗಿಲಿಗೆ ಬಂದು ಕಡ್ಡಾಯವಾಗಿ ಸಮೀಕ್ಷೆ ಮಾಡಬೇಕು. ಇದನ್ನು ಮತದಾರರಿಗೆ ತಿಳಿಯದೆ ಹೊದರೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಬಿಎಲ್ಒಗಳು ಸರಿಯಾಗಿ ತಮ್ಮ ಜವ್ಬಾರಿಯನ್ನು ಅರಿತು ಕೇಲಸ ಮಾಡಬೇಕು ಒಂದು ವೇಳೆ ಬೆಜವಾಬ್ದಾರಿಯಾಗಿ ಕರ್ತವ್ಯ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಸ್ತುತ ಇಂಡಿ ವಿಧಾನಸಭಾ ಮತಕ್ಷೇತ್ರದ 268 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಮೇಲ್ವಿಚಾರಕರು ಕೂಡಾ ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ನೋಂದಣಿ ಅಭಿಯಾನ ಕಾರ್ಯ ನಡೆಸಿದ್ದಾರೆ ಎಂದು ತಹಶೀಲ್ದಾರ ನಾಗಯ್ಯ ಹೀರೆಮಠ ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿ ಪ್ರದಿಪ ದೊಡಮನಿ, ಬಿಎಲ್ಒಗಳಾದ ಮಹಿಬೂಬ ಲಕ್ಡಹಾರ, ಪ್ರಿಯಾಂಕ ಕಾಲೆಬಾಗ, ಸರಸ್ವತಿ ಜೋಶಿ, ಚಂದು ವಾಲಿಕಾರ, ರಾಜು ಇಂಡಿಕರ, ಎಸ್.ಜಿ.ನಂದರಗಿ ಸೇರಿದಂತೆ ಅನೇಕರು ಇದ್ದರು.