ಗೋ ಸಾಗಿಸುತ್ತಿದ್ದ ವಾಹನ ಅಪಘಾತ: 7 ಕರುಗಳು ಸಾವು
ಇಂಡಿ 16: ತಾಲೂಕಿನ ಅಂಜುಟಗಿ ಗ್ರಾಮದ ಹತ್ತಿರ ಪಿಕಪ್ನಲ್ಲಿ ಸಾಗಿಸುತ್ತಿದ್ದ ಸುಮಾರು 35 ಆಕಳು ಮತ್ತು ಕರುಗಳನ್ನು ರಕ್ಷಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮಹಾರಾಷ್ಟ್ರದ ಸಾತಾರಾದಿಂದ ಇಂಡಿಯ ಕಡೆಗೆ ಬರುತ್ತಿದ್ದ ಪಿಕಾಪ್ ಆಯ ತಪ್ಪಿ ಪಲ್ಟಿಯಾಗಿದೆ. ಮತ್ತು ಅದರಲ್ಲಿದ್ದ ಆಕಳು ಮತ್ತು ಕರುಗಳಿಗೆ ಘಾಯವಾಗಿದ್ದು ಅದರಲ್ಲಿಯ ಏಳು ಕರುಗಳು ಮೃತಪಟ್ಟಿವೆ.
ಘಟನಾ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿದಾಗ ವಾಹನ ಚಾಲಕ ಫರಾರಿ ಯಾಗಿದ್ದಾನೆ. ಕೆಲವು ಗಂಟೆಗಳ ನಂತರ ವಾಹನ ಚಾಲಕ ಬೇರೊಂದು ವಾಹನದಲ್ಲಿ ಪ್ರಾಣಿಗಳನ್ನು ಸಾಗಿಸಬೇಕೆಂದು ಪ್ರಯತ್ನಿಸಿದಾಗ ಗ್ರಾಮಸ್ಥರು ಮತ್ತು ಝಳಕಿಯಿಂದ ಬರುತ್ತಿದ್ದ ಇಂಡಿಯ ಗಣ್ಯರು ಸೇರಿ ತಡೆದಿದ್ದಾರೆ.
ಅದರಲ್ಲಿ ಏಳು ಕರುಗಳು ಸತ್ತಿದ್ದು, 16 ಆಕಳು ಮತ್ತು ಕರುಗಳನ್ನು ಗೋಶಾಲೆಗೆ ಮತ್ತು 12 ಆಕಳು ಮತ್ತು ಕರುಗಳನ್ನು ರೈತರು ತೆಗೆದುಕೊಂಡು ಹೋಗಿದ್ದಾರೆ.
ಇಂಡಿಯ ಪುರಸಭೆಯ ಸದಸ್ಯ ಅನೀಲಗೌಡ ಬಿರಾದಾರ, ರಾಚು ಬಡಿಗೇರ, ಬಸು ಪೂಜಾರಿ, ಚಂದಪ್ಪ ಪೂಜಾರಿ, ರಾಯಪ್ಪ ಹರಳಯ್ಯ, ಶ್ರೀಧರ ಕ್ಷೇತ್ರಿ, ಪ್ರವೀಣ ಮಠ, ಅಕ್ಷಯ ಹಿಬಾರಿ, ಅಕ್ಷಯ ಪಾಟೀಲ, ಅಶೋಕ ಅಕಲಾದಿ, ಆನಂದ ದೇವರ, ಮುತ್ತು ಅಗಸರ, ವಿಕಾಶ ಕಾಳೆ, ದತ್ತು ಬಂಡೆನವರ, ಅಬೀಕ್ಷೇಕ ಬಿಳಗಿ, ಗುರು ಸ್ಥಾವರಮಠ ಮತ್ತು ಅಂಜುಟಗಿ ಗ್ರಾಮದ ಗ್ರಾಮಸ್ಥರು ಪ್ರಾಣಿಗಳನ್ನು ಕಸಾಯಿ ಖಾನೆಗೆ ಹೋಗುವದನ್ನು ತಪ್ಪಿಸಿದ್ದಾರೆ. ಈ ಕುರಿತು ಅನೀಲಗೌಡ ಬಿರಾದಾರ ಝಳಕಿ ಪೋಲಿಸ ಠಾಣೆಯಲ್ಲಿ ಪ್ರಕರಣ ಧಾಖಲಿಸಿದ್ದಾರೆ.
ಖಂಡನೆ :ಇಂಡಿಯಿಂದ ಮಹಾರಾಷ್ಟ್ರಕ್ಕೆ ಮತ್ತು ಮಹಾರಾಷ್ಟ್ರದಿಂದ ಇಂಡಿಗೆ ಕಸಾಯಿ ಖಾನೆಗೆ ನಿರಂತರ ಪ್ರಾಣಿಗಳನ್ನು ಸಾಗಿಸಲಾಗುತ್ತಿದೆ. ಈ ಕುರಿತು ಸಂಬಂದಿತ ಅಧಿಕಾರಿಗಳ ಮೌನ ವರ್ತನೆಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಅನೀಲಗೌಡ ಬಿರಾದಾರ ಖಂಡಿಸಿದ್ದಾರೆ.