ಬೈಲಹೊಂಗಲ

ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಇವರ 119ನೇ ಜನ್ಮೋತ್ಸವ ಕಾರ್ಯಕ್ರಮ

ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಇವರ 119ನೇ ಜನ್ಮೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ 


ಕಾಗವಾಡ 15: ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಇವರ 119ನೇ ಜನ್ಮೋತ್ಸವ ಕಾರ್ಯಕ್ರಮ ಜುಗೂಳ ಗ್ರಾಮಸ್ಥರಿಂದ ಮಲ್ಲಿಕಾರ್ಜುನ ಮಂದಿರದಲ್ಲಿ ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ ಇವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. 

ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿಯವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. 

ಯತೀಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡುವಾಗ, ಮಲ್ಲಿಕಾರ್ಜುನ ಸ್ವಾಮೀಜಿಯವರು ತಮ್ಮ ಇಡೀ ಜೀವನ ಸಾಮಾನ್ಯ ಕಡುಬಡವ ಮಕ್ಕಳಿಗೆ ಒಗ್ಗೂಡಿಸಿ ಅವರಿಗೆ ಮಾರ್ಗದರ್ಶನ ಮಾಡುತ್ತಾ ಶಿಕ್ಷಣ ನೀಡುವ ಮುಖ್ಯ ಗುರಿಯಾಗಿತ್ತು. ಗಡಿಭಾಗದ ಗ್ರಾಮಗಳಲ್ಲಿ ಸಂಚಾರಿಸುತ್ತಾ ಶಿಕ್ಷಣ ಸಂಸ್ಥೆಗಳು ಹುಟ್ಟುಹಾಕಿದ್ದರು. ಕಾಗವಾಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೆಳೆದು ನಿಂತಿರುವ ಶಿಕ್ಷಣ ಸಂಸ್ಥೆಗಳು ಅವರದೇ ಕೊಡುಗೆಯಾಗಿದೆಯೆಂದು ಹೇಳಿದರು. 

ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳ ಪರಮಶಿಷ್ಯರಾದ ಸಿದ್ಧೇಶ್ವರ ಸ್ವಾಮೀಜಿ ಭಾರತ ದೇಶ ಅಷ್ಟೇ ಅಲ್ಲ, ವಿದೇಶಗಳಲ್ಲಿಯೂ ಆಧ್ಯಾತ್ಮಿಕ ಪ್ರವಚನ ನೀಡಿ ಅನೇಕರ ಜೀವನ ಉದ್ಧಾರ ಮಾಡಿದ್ದಾರೆ. ಜುಗೂಳ ಗ್ರಾಮದ ಮೇಲೆ ಸ್ವಾಮೀಜಿಗಳ ಬಹಳಷ್ಟು ಆಶೀರ್ವಾದವಿದೆ. ಇದ್ದರಿಂದ ಇಲ್ಲಿಯ ಸಮಾಜ ಬಾಂಧವರು ಒಂದುಗೂಡಿ ಆಶ್ರಮ ಸಮೀತಿ ಸ್ಥಾಪಿಸಿದ್ದಾರೆ. ಬರುವ ಕಾರ್ತಿಕ ಮಾಸದಲ್ಲಿ ಭವ್ಯ ಆಶ್ರಮ ಕಟ್ಟಡದ ಅಡಿಗಲ್ಲು ಪೂಜೆ ನೆರವೇರಲಿದೆಯೆಂದರು. 

ಅಣ್ಣಾಸಾಹೇಬ ಪಾಟೀಲ, ರಾಜು ಕಡೋಲೆ, ಅನೀಲ ಕಡೋಲೆ, ವಿಜಯಕುಮಾರ ಮಿಣಚೆ, ತಾತ್ಯಾಸಾಹೇಬ ಪಾಟೀಲ, ಬಾಬುಗೌಡ ಪಾಟೀಲ, ಭರತ ಅಮ್ಮನಗೆ, ವಿಜಯ ಪಾಟೀಲ, ಶ್ರೀಕಾಂತ ದೇಸಾಯಿ, ಪ್ರಕಾಶ ಪಾಟೀಲ, ಭೀಮಗೌಡ ಪಾಟೀಲ, ದಾದಾಸಾಹೇಬ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ