ಇಂಡಿ

ಮಗು ಹುಟ್ಟಿದಾಗ ಬಾಲ್ಯಕ್ಷಯ ತುತ್ತಾಗದಂತೆ ಬಿಸಿಜೆ ಲಸಿಕೆ ಹಾಕಿಸಿ: ಹದರಿ

ಮಗು ಹುಟ್ಟಿದಾಗ ಬಾಲ್ಯಕ್ಷಯ ತುತ್ತಾಗದಂತೆ ಬಿಸಿಜೆ ಲಸಿಕೆ ಹಾಕಿಸಿ: ಹದರಿ

ಇಂಡಿ: ಮಗು ಹುಟ್ಟಿದಾಗ ಬಾಲ್ಯಕ್ಷಯ ತುತ್ತಾಗದಂತೆ ಬಿಸಿಜೆ ಲಸಿಕೆ. ಮಗುವಿಗೆ ಅಂಗವಿಕಲ, ಪಾರ್ಶ್ವವಾಯು ತಡೆಗಟ್ಟಲು ಎರಡು ಹನಿ ಪೊಲಿಯೋ, ಕಾಮಲೆ ರೋಗಕ್ಕೆ ಹೆಪಟೈಸಿ ಬಿ ಲಸಿಕೆ ಹಾಕಬೇಕು ಎಂದು ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ ಹೇಳಿದರು. 

ಮಂಗಳವಾರ ತಾಲೂಕಿನ ಸಾತಪೂರ ವಾರ್ಡಿನ ಗುಡ್ಲೆನವರ ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಗರ್ಭಿಣಿ ತಾಯಿಯಂದಿರಿಗೆ ಸೀಮಂತ ಹಾಗೂ ಆರೋಗ್ಯ ಅರಿವು ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.  

ಕ್ಷೇತ್ರ ಆರೋಗ್ಯ ಶಿಕ್ಷಾಧಿಕಾರಿ ವೈ.ಎಂ. ಪೂಜಾರಿ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸದೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಆರೋಗ್ಯ ಹೊಂದಲು ಪೌಷ್ಠಿಕಾಂಶದ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸಬೇಕು. ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಕೊಂಡು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. 

ಕಾರ‌್ಯಕ್ರಮದಲ್ಲಿ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್‌.ಎಚ್‌. ಅತನೂರ, ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ದುಂಡಪ್ಪ ಮಡ್ನಳ್ಳಿ, ಪಾಂಡು ಗುಡ್ಲ, ಅಶೋಕ ಬಿರಾದಾರ, ಪ್ರದೀಪ ಬಡಿಗೇರ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. 

ಸುದ್ದಿ ಓದಿ