ಧಾರವಾಡ - ಹುಬ್ಬಳ್ಳಿ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನ.16 ರಿಂದ ಎರಡು ದಿನಗಳ ಮಾದರಿ ಬ್ರಿಕ್ಸ್‌ ಶೃಂಗಸಭೆ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನ.16 ರಿಂದ ಎರಡು ದಿನಗಳ ಮಾದರಿ ಬ್ರಿಕ್ಸ್‌ ಶೃಂಗಸಭೆ

ಲೋಕದರ್ಶನ ವರದಿ 

            ಧಾರವಾಡ   12: ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನವದೆಹಲಿ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ನವೆಂಬರ್ 16 ಮತ್ತು 17ರಂದು ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಎರಡು ದಿನಗಳ ಮಾದರಿ ಬ್ರಿಕ್ಸ್‌ ಶೃಂಗಸಭೆ-2026 ಆಯೋಜಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ಹೇಳಿದರು. 

           ಅವರು ಇಂದು (ನ.12) ಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಲ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಾದರಿ ಬ್ರಿಕ್ಸ್‌ ಶೃಂಗಸಭೆ-2026 ಆಯೋಜನೆ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು. 

               ಭಾರತದ ಅಧ್ಯಕ್ಷತೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜನರಿಂದ ಜನರಿಗೆ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಜನಭಾಗಿದಾರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಮಾದರಿ ಬ್ರಿಕ್ಸ್‌ ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 

               ಬ್ರಿಕ್ಸ್‌ ಸಂಘಟನೆಯ ಕಾರ್ಯವೈಖರಿ, ಅಂತರರಾಷ್ಟ್ರೀಯ ಸಂಬಂಧಗಳು, ಜಾಗತಿಕ ಆಡಳಿತ ವ್ಯವಸ್ಥೆ, ಬಹುಪಕ್ಷೀಯ ಸಹಕಾರ ಹಾಗೂ ಸಮಕಾಲೀನ ಜಾಗತಿಕ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಆಳವಾದ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ರಾಜತಾಂತ್ರಿಕ ಸಂವಾದ, ನಾಯಕತ್ವ ಗುಣಗಳು, ಮಾತುಕತೆ ಕೌಶಲ್ಯ ಹಾಗೂ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತದ ಪಾತ್ರದ ಕುರಿತು ಪ್ರಾಯೋಗಿಕ ಜ್ಞಾನ ಒದಗಿಸುವ ವೇದಿಕೆಯಾಗಿದೆ ಎಂದು ಅವರು ಹೇಳಿದರು. 


ಸುದ್ದಿ ಓದಿ